ಕಲಾಪ ಸಾಧನೆ ಶೇ. 22
Team Udayavani, Aug 12, 2021, 6:50 AM IST
ಹೊಸದಿಲ್ಲಿ: ಪ್ರಸಕ್ತ ಸಾಲಿನ ಮುಂಗಾರು ಅಧಿವೇಶನ ಪೆಗಾಸಸ್ ವಿವಾದ, ಮೂರು ಕೃಷಿ ಕಾಯ್ದೆಗಳಿಗೆ ಆಹುತಿಯಾಗಿದೆ.
ಜು.19ರಿಂದ ಆ.13ರ ವರೆಗೆ ನಡೆಯಬೇಕಾಗಿದ್ದದ್ದು ಎರಡು ದಿನಗಳ ಮೊದಲೇ ಅನಿರ್ದಿಷ್ಟಾವಧಿಗೆ ಬುಧವಾರ ಮುಂದೂಡಿಕೆ ಯಾಗಿದೆ. ಲೋಕಸಭೆಯಲ್ಲಂತೂ ಕಲಾಪ ಆರಂಭವಾ ಗುತ್ತಿದ್ದಂತೆಯೇ ವಿಪಕ್ಷಗಳ ಗಲಾಟೆ ಕಾರಣದಿಂದಾಗಿ ಅನಿರ್ದಿಷ್ಟಾವಧಿಗೆ ಮುಂದೂಡುವ ಘೋಷಣೆಯನ್ನು ಸ್ಪೀಕರ್ ಓಂ ಬಿರ್ಲಾ ಮಾಡಿದರು. ಬಜೆಟ್ ಅಧಿವೇಶನಕ್ಕೆ ಹೋಲಿಕೆ ಮಾಡಿದರೆ ಲೋಕಸಭೆಯ ಶೇಕಡಾವಾರು ಕಲಾಪ ಸಾಮರ್ಥ್ಯ ಕುಸಿದಿದೆ. ಹಾಲಿ ಅಧಿವೇಶನದಲ್ಲಿ ಲೋಕಸಭೆಯಲ್ಲಿ ಶೇ. 22ರಷ್ಟು ಮಾತ್ರ ಕಲಾಪ ನಡೆದಿದೆ.
ರಾಜ್ಯಸಭೆಯಲ್ಲಿ ಸಭಾಪತಿ ಎಂ.ವೆಂಕಯ್ಯ ನಾಯ್ಡು ವಿಪಕ್ಷಗಳ ಕೆಲವು ಸದಸ್ಯರು ಅನುಚಿತವಾಗಿ ವರ್ತಿಸಿದ್ದಕ್ಕೆ ಗದ್ಗದಿತರಾಗಿಯೇ ಪ್ರತಿಕ್ರಿಯೆ ನೀಡಿದರು. ಕೆಲವು ಸದಸ್ಯರ ವರ್ತನೆಯಿಂದಾಗಿ ತಾವು ಕಳೆದ ರಾತ್ರಿ ನಿದ್ದೆ ಇಲ್ಲದೆ ಕಳೆದಿರುವುದಾಗಿ ಹೇಳಿದರು. ರಾಜ್ಯ ಸಭೆಯ ಸದಸ್ಯರು ಟೇಬಲ್ ಮೇಲೆ ನಿಂತು ಘೋಷಣೆ ಹಾಕಿರುವ ಬಗ್ಗೆ ಪ್ರಸ್ತಾವಿಸಿ, ಆತಂಕ ವ್ಯಕ್ತಪಡಿಸಿದ ಅವರು, ಇಂಥ ಘಟನೆಗಳನ್ನು ಹೇಗೆ ವಿವರಿಸಬೇಕು ಎಂದು ಗೊತ್ತಾಗುತ್ತಿಲ್ಲ. ಸದಸ್ಯರ ವರ್ತನೆಯಿಂದಾಗಿ ನಾನು ಕಳೆದ ರಾತ್ರಿ ನಿದ್ದೆ ಇಲ್ಲದೆ ಕಳೆದಿದ್ದೇನೆ. ಮೂರು ಕೃಷಿ ಕಾಯ್ದೆಗಳ ಬಗ್ಗೆ ಚರ್ಚೆಗೆ ಅವಕಾಶ ಮಾಡಿಕೊಡಲಾಗಿತ್ತು. ಇದರ ಹೊರತಾಗಿ ಯೂ ಯಾವ ಕಾರಣಕ್ಕೆ ಸಂಸದರು ಆಕ್ರೋಶ ಭರಿತರಾಗಿ ವರ್ತಿಸಿದರು ಎಂದು ಗೊತ್ತಾಗುತ್ತಿಲ್ಲ ಎಂದರು. ಈ ಹಂತದಲ್ಲಿ ಸಭಾಪತಿ ನಾಯ್ಡು ಅವರ ಗಂಟಲು ತುಂಬಿ ಬಂದಿತು. ಕೆಲವು ಕಾಲ ಮಾತು ನಿಲ್ಲಿಸಿದರು. ಸದನದಲ್ಲಿ ಸದಸ್ಯರು ಗಾಂಭೀರ್ಯ- ಗೌರವ ಕಾಪಿಡಬೇಕು. ಸದನ ಮುಂಗಟ್ಟೆಗೆ ನುಗ್ಗಿ ಧರಣಿ ನಡೆಸುವುದು ಸರಿಯಲ್ಲವೆಂದರು.
ಈ ಸಂದರ್ಭದಲ್ಲಿ ಸಭಾಪತಿ ನಿಷ್ಪಕ್ಷಪಾತವಾಗಿ ಇರಬೇಕು ಎಂದು ಸಂಸದರೊಬ್ಬರು ಕೂಗಿದಾಗ ಕೋಪಗೊಂಡ ಸಭಾಪತಿ “ಸಭಾಪತಿ ಮಾತನಾಡುವ ಸಂದರ್ಭದಲ್ಲಿಯಾದರೂ ಗಂಭೀರತೆಯಿಂದ ವರ್ತಿಸಿ’ ಎಂದು ಎಚ್ಚರಿಕೆ ನೀಡಿದರು. ಇಂಥ ಸನ್ನಿವೇಶ ದಲ್ಲಿ ಕಲಾಪ ನಡೆಸಲು ಸಾಧ್ಯವೇ ಇಲ್ಲ ಎಂದು ಮಧ್ಯಾಹ್ನ 12 ಗಂಟೆಗೆ ಕಲಾಪ ಮುಂದೂಡಿದರು.
ಒಬಿಸಿ ಮಸೂದೆ ಅನುಮೋದನೆ: 12 ಗಂಟೆಯ ಬಳಿಕ ಇತರ ಹಿಂದುಳಿದ ವರ್ಗಗಳಿಗೆ ಜಾತಿಗಳನ್ನು ಸೇರಿ ಸುವ ಅಧಿಕಾರವನ್ನು ರಾಜ್ಯಗಳಿಗೆ ಅಧಿಕಾರ ನೀಡುವ ಸಂವಿಧಾನದ 127ನೇ ತಿದ್ದುಪಡಿಗೆ ರಾಜ್ಯಸಭೆ ಚರ್ಚೆ ನಡೆಸಿ ಅನುಮೋದನೆ ನೀಡಿತು. ಚರ್ಚೆಯ ಸಂದರ್ಭ ದಲ್ಲಿ ದೇಶದಲ್ಲಿ ಜಾತಿ ಗಣತಿ ಯಾಕೆ ಕೈಗೊಳ್ಳುತ್ತಿಲ್ಲ. ಈ ಬಗ್ಗೆ ಸರಕಾರವೇಕೆ ಮೌನವಾಗಿದೆ ಎಂದು ಕಾಂಗ್ರೆಸ್‌ನ ಸಂಸದ ಅಭಿಷೇಕ್ ಮನು ಸಿಂ Ì ಪ್ರಶ್ನಿಸಿದರು. ಇಂಥ ಗಣತಿ ಕೈಗೆತ್ತಿಕೊಳ್ಳಲು ಎಲ್ಲರೂ ಒತ್ತಾಯಿಸುತ್ತಿದ್ದಾರೆ ಎಂದು ಪ್ರತಿಪಾದಿಸಿದರು. 30 ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾತಿ ಗಣತಿ ನಡೆಸಬೇಕು ಎಂದು ಒತ್ತಾಯಿಸುತ್ತಿದ್ದಾರೆ ಎಂದರು.
49 ಸಾವಿರ ಕೋಟಿ ದೇಣಿಗೆ: ದೇಶದಲ್ಲಿರುವ 18 ಸಾವಿರ ಎನ್‌ಜಿಒಗಳಿಗೆ 2017-18ನೇ ಸಾಲಿನಿಂದ 2019-20ನೇ ಸಾಲಿನ ವರೆಗೆ 49 ಸಾವಿರ ಕೋಟಿ ರೂ. ದೇಣಿಗೆ ಬಂದಿದೆ. ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ನಿತ್ಯಾನಂದ ರಾಯ್ ರಾಜ್ಯಸಭೆಗೆ ಈ ಮಾಹಿತಿ ನೀಡಿದ್ದಾರೆ. ಮತ್ತೂಂದು ಪ್ರಶ್ನೆಗೆ ಉತ್ತರಿಸಿದ ಅವರು 2018ರಿಂದ 2020ರ ನಡುವೆ ದೇಶದಲ್ಲಿ 348 ಮಂದಿ ಪೊಲೀಸ್ ವಶದಲ್ಲಿ ಮತ್ತು 5,221 ಮಂದಿ ನ್ಯಾಯಾಂಗ ವಶದಲ್ಲಿ ಅಸುನೀಗಿದ್ದಾರೆ ಎಂದು ಹೇಳಿದ್ದಾರೆ.
ಅಪರೂಪದ ಸಭೆ :
ಲೋಕಸಭೆ ಸ್ಪೀಕರ್ ಕಚೇರಿಯಲ್ಲಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್‌ನ ಮಧ್ಯಾಂತರ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ, ಅಕಾಲಿ ದಳದ ಸುಖ್‌ಬೀರ್ ಸಿಂಗ್ ಬಾದಲ್ ಸಭೆ ನಡೆಸಿದರು. ಇತ್ತೀಚಿನ ದಿನಗಳಲ್ಲಿ ಪ್ರಮುಖ ನಾಯಕರು ಸಂಸತ್ ಭವನದಲ್ಲಿ ಸಭೆ ನಡೆಸಿದ ಉದಾಹರಣೆ ಅಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
Maharashtra: ಮತಗಟ್ಟೆ ಬಳಿ ಚಪ್ಪಲಿ ನಿಷೇಧಿಸಿ ಎಂದು ಮಹಾಪಕ್ಷೇತರ ಅಭ್ಯರ್ಥಿ ಮನವಿ!
ಮನುಷ್ಯ ನೀನು ದಂಡ, ಸತ್ತು ಹೋಗು!: ಎಐ ಚಾಟ್‌ಬಾಟ್ ಹೇಳಿಕೆ
Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ
MUST WATCH
ಹೊಸ ಸೇರ್ಪಡೆ
BBK11: ಮುಖವಾಡ ಬಯಲು ಮಾಡುತ್ತೇವೆ..ಆರಂಭದಲ್ಲೇ ರೊಚ್ಚಿಗೆದ್ದ ವೈಲ್ಡ್ ಕಾರ್ಡ್ ಸ್ಪರ್ಧಿಗಳು
Bengaluru: ಎಸ್‌ಎಸ್‌ಎಲ್‌ಸಿ ಫೇಲ್ ಆಗಿದ್ದಕ್ಕೆ ಭುವನೇಶ್ವರಿ ವಿಗ್ರಹ ವಿರೂಪಗೊಳಿಸಿದ ಯುವಕ
Fraud: ಡ್ರಗ್ಸ್ ಕೇಸ್ ಹೆಸರಲ್ಲಿ ಟೆಕಿಗೆ ಬೆದರಿಸಿ 40 ಲಕ್ಷ ವಂಚನೆ
Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ ಜನರ ಭೇಟಿ
Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.