“ಮೆಕುನು’ ಬೆನ್ನಲ್ಲೇ ರಾಜ್ಯಕ್ಕೆ ಮುಂಗಾರು
Team Udayavani, May 31, 2018, 6:00 AM IST
ನವದೆಹಲಿ: ಮೆಕುನು ಚಂಡಮಾರುತದ ಬೆನ್ನಲ್ಲೇ ಮೂರು ದಿನ ಮೊದಲೇ ಕೇರಳಕ್ಕೆ ಆಗಮಿಸಿರುವ ಮುಂಗಾರು, ಬುಧವಾರ ಕರ್ನಾಟಕವನ್ನೂ ಪ್ರವೇಶಿಸಿದೆ. ಈ ಬಗ್ಗೆ ಸ್ವತಃ ಭಾರತೀಯ ಹವಾಮಾನ ಇಲಾಖೆಯೇ ಹೇಳಿಕೆ ನೀಡಿದ್ದು, ಅರಬ್ಬಿ ಸಮುದ್ರದ ಮೂಲಕ ಕೇರಳ, ಕರಾವಳಿ ಕರ್ನಾಟಕ
ಮತ್ತು ರಾಜ್ಯದ ದಕ್ಷಿಣ ಒಳನಾಡಿಗೆ ಪ್ರವೇಶ ಮಾಡಿದೆ. ಹೀಗಾಗಿಯೇ ಬುಧವಾರ ಮಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆಯಾಗುತ್ತಿದೆ.
ಈ ಮಧ್ಯೆ, ಮುಂಗಾರು ಮಳೆಯ ಬಗ್ಗೆ ಮತ್ತೂಮ್ಮೆ ಭಾರತೀಯ ಹವಾಮಾನ ಇಲಾಖೆ ಖುಷಿಯ ಸುದ್ದಿ ನೀಡಿದೆ. ಈ ಬಾರಿ ಮುಂಗಾರು ಕೊರತೆ ಕಾಣಿಸುವುದಿಲ್ಲ. ಸಾಮಾನ್ಯ, ಅಂದರೆ ಶೇ.97 ರಷ್ಟು ಮಳೆಯಾಗಲಿದೆ. ಆದರೆ ದೇಶದ ಪೂರ್ವ ಮತ್ತು ಈಶಾನ್ಯ ಭಾಗಗಳಲ್ಲಿ ಮಾತ್ರ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಹಾ ನಿರ್ದೇಶಕ ಕೆ.ಜೆ. ರಮೇಶ್ ಹೇಳಿದ್ದಾರೆ.
2017ರಲ್ಲಿ ಶೇ.97ರಷ್ಟು ಮಳೆಯಾಗಿದ್ದರೆ, ಈ ವರ್ಷ ಅದಕ್ಕಿಂತ ಹೆಚ್ಚು ಮಳೆಯಾಗಲಿದೆ. ಜುಲೈನಲ್ಲಿ ದೀರ್ಘಾವಧಿ ಸರಾಸರಿ ಆಧಾರದಲ್ಲಿ ಶೇ. 101ರಷ್ಟು ಹಾಗೂ ಆಗಸ್ಟ್‌ನಲ್ಲಿ ಶೇ.94ರಷ್ಟು ಮಳೆಯಾಗಲಿದೆ. ಸಾಮಾನ್ಯವಾಗಿ ಶೇ 90-96ರಷ್ಟು ಮಳೆಯಾದರೆ ಸರಾಸರಿಗಿಂತ ಕಡಿಮೆ, ಶೇ.90 ಕ್ಕಿಂತ ಕಡಿಮೆ ಇದ್ದರೆ ಮಳೆ ಕೊರತೆ ಹಾಗೂ ಶೇ.96-104ರಷ್ಟು ಮಳೆಯಾದರೆ ಸಾಮಾನ್ಯ ಎಂದು ಪರಿಗಣಿಸಲಾಗುತ್ತದೆ. ಈ ಹಿಂದೆ ಶೇ. 97ಕ್ಕಿಂತ ಶೇ.5 ಹೆಚ್ಚು ಅಥವಾ ಕಡಿಮೆ ಮಳೆಯಾಗುವ ಸಾಧ್ಯತೆಯೂ ಇದೆ ಎಂದು ಹೇಳಿತ್ತು. ಆದರೆ ಈಗಿನ ವರದಿಯಲ್ಲಿ ಈ ದೋಷ ಅಂದಾಜನ್ನು ಶೇ. 4ಕ್ಕೆ ಇಳಿಸಲಾಗಿದೆ. ಅಂದರೆ ಶೇ. 97ಕ್ಕಿಂತ ಶೇ. 4 ಹೆಚ್ಚು ಅಥವಾ ಕಡಿಮೆ ಮಳೆಯಾಗಬಹುದು ಎಂದು ರಮೇಶ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi: ಬಿಗಡಾಯಿಸಿದ ವಾಯುಮಾಲಿನ್ಯ… ಕೃತಕ ಮಳೆಗೆ ಅನುಮತಿ ಕೋರಿ ಕೇಂದ್ರಕ್ಕೆ ಪತ್ರ
Dense Smog: ಸರಣಿ ಅಪಘಾತ… ಇಬ್ಬರು ಮೃತ್ಯು, ಹಲವು ಮಂದಿಗೆ ಗಾಯ
Video: ಮದುವೆ ಸಂಭ್ರಮದಲ್ಲಿದ್ದ ವರನಿಗೆ ಹೃದಯಾಘಾತ… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು
Maharastra: ಕಾರಿನ ಮೇಲೆ ಕಲ್ಲು ತೂರಾಟ… ಮಾಜಿ ಸಚಿವ ಅನಿಲ್ ದೇಶಮುಖ್ ಹಣೆಗೆ ಗಾಯ
Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ
MUST WATCH
ಹೊಸ ಸೇರ್ಪಡೆ
Sagara ಉಪ ಅರಣ್ಯ ಸಂಕ್ಷಣಾಧಿಕಾರಿಗಳ ವಿರುದ್ಧ ಉಗ್ರ ಪ್ರತಿಭಟನೆ;ರತ್ನಾಕರ ಹೊನಗೋಡು ಎಚ್ಚರಿಕೆ
Uppunda ಜಾತ್ರೆ ಸಂಪನ್ನ: ಓಕುಳಿಯಾಟ, ತೆಪ್ಪೋತ್ಸವ
Ajekar: ಎಣ್ಣೆಹೊಳೆ ಏತ ನೀರಾವರಿ ಪವರ್ ಕಟ್!
Tollywood: ʼಪುಷ್ಪ-2ʼ ಟ್ರೇಲರ್‌ನಲ್ಲಿ ಕಾಣುವ ಅರ್ಧ ತಲೆ ಬೋಳಿಸಿರುವ ಈ ನಟ ಯಾರು?
Sagara: ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪರನ್ನು ತಕ್ಷಣ ಬಂಧಿಸಿ; ಕಾಂಗ್ರೆಸ್ ಆಗ್ರಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.