“ಮನ್ ಕಿ ಬಾತ್’ ಆಲಿಸಿದ 100 ಕೋಟಿ ಮಂದಿ!
Team Udayavani, Apr 25, 2023, 6:25 AM IST
ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರ ಮಾಸಿಕ “ಮನ್ ಕಿ ಬಾತ್’ ಬಾನುಲಿ ಕಾರ್ಯಕ್ರಮವನ್ನು 100 ಕೋಟಿಗೂ ಅಧಿಕ ಮಂದಿ ಕನಿಷ್ಠ ಒಮ್ಮೆಯಾದರೂ ಆಲಿಸಿದ್ದಾರೆ. 23 ಕೋಟಿ ಜನರು ಕಾರ್ಯಕ್ರಮವನ್ನು ನಿಯಮಿತವಾಗಿ ಕೇಳಿದ್ದಾರೆ ಅಥವಾ ವೀಕ್ಷಿಸಿದ್ದಾರೆ ಎಂದು ಐಐಎಂ ರೋಹಕ್ ವರದಿ ತಿಳಿಸಿದೆ.
“ಕೇಳುಗರ ಪ್ರತಿಕ್ರಿಯೆ ಮತ್ತು ಭಾವನೆ, ಮನ್ ಕಿ ಬಾತ್ನ ವಿಶ್ಲೇಷಣೆ’-ಇದರ ಭಾಗವಾಗಿ ದೇಶದ ವಿವಿಧ ರಾಜ್ಯಗಳ ಮತ್ತು ವಿವಿಧ ವೃತ್ತಿಗಳ 10,003 ವ್ಯಕ್ತಿಗಳನ್ನು ಸಂದರ್ಶಿ ಸಲಾಗಿದೆ. ದೇಶದ ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮ ಭಾಗದಿಂದ ಮಾಹಿತಿ ಸಂಗ್ರಹಿಸಲಾಗಿದೆ.
ಸ್ನೋಬಾಲ್ ಮಾದರಿಯನ್ನು ವಿಶ್ಲೇಷಣೆಗೆ ಬಳಸಲಾಗಿದೆ. ಒಂದು ವಲಯದಿಂದ ಸುಮಾರು 25,000 ಪ್ರತಿಕ್ರಿಯೆಗಳನ್ನು ಪಡೆಯ ಲಾಗಿದೆ. ಶೇ.96ರಷ್ಟು ಜನರಿಗೆ ಕಾರ್ಯಕ್ರಮದ ಕುರಿತು ಅರಿವಿದೆ. ಸುಮಾರು 23 ಕೋಟಿ ಮಂದಿ ನಿಯಮಿತವಾಗಿ ಕಾರ್ಯಕ್ರಮವನ್ನು ಆಲಿಸಿದ್ದಾರೆ. 41 ಕೋಟಿ ಮಂದಿ ಸಾಂದರ್ಭಿಕವಾಗಿ ವೀಕ್ಷಿಸುವುದರಿಂದ ನಿಯಮಿತ ವೀಕ್ಷಕರಾಗಿ ಬದಲಾಗುವ ಅಂಶವನ್ನು ಹೊಂದಿದ್ದಾರೆ. ಶೇ.65ರಷ್ಟು ಮಂದಿ ಹಿಂದಿಯಲ್ಲಿ ವೀಕ್ಷಿಸಿದ್ದು, ಶೇ.18ರಷ್ಟು ಮಂದಿ ಇಂಗ್ಲಿಷ್ನಲ್ಲಿ ಕಾರ್ಯ ಕ್ರಮವನ್ನು ವೀಕ್ಷಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.