ಯಾರನ್ನೂ ಬಿಟ್ಟಿಲ್ಲ ಸೋಂಕು ; ದೇಶದಲ್ಲಿ 30 ವರ್ಷದೊಳಗಿನ 100ಕ್ಕೂ ಹೆಚ್ಚು ಸೋಂಕಿತರು ಸಾವು

Team Udayavani, May 23, 2020, 7:11 AM IST

ಯಾರನ್ನೂ ಬಿಟ್ಟಿಲ್ಲ ಸೋಂಕು

ಜಮ್ಮುವಿನ ಸರಕಾರಿ ಆಸ್ಪತ್ರೆಯಲ್ಲಿ ಸಾರ್ವಜನಿಕರು ಕೋವಿಡ್ ಪರೀಕ್ಷೆ ನಡೆಸಲು ಸರತಿಯಲ್ಲಿ ನಿಂತಿರುವುದು.

ಹೊಸದಿಲ್ಲಿ: ಚೀನದ ವುಹಾನ್‌ನಲ್ಲಿ ಕೋವಿಡ್ ವೈರಸ್‌ ಎಂಬ ಭಯಾನಕ ಸೋಂಕು ಪತ್ತೆಯಾದಾಗಿನಿಂದಲೂ ಅದು 60 ದಾಟಿರುವ ಹಿರಿಯ ನಾಗರಿಕರಿಗೆ ಹಾಗೂ ಹಲವು ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಹೆಚ್ಚು ಅಪಾಯಕಾರಿ ಎಂದೇ ಹೇಳಿಕೊಂಡು ಬರಲಾಗುತ್ತಿತ್ತು. ಆದರೆ, ಕಾಲ ಕ್ರಮೇಣ ಈ ಸೋಂಕು ಯಾವ ವಯೋಮಾನದವರನ್ನೂ ಬಿಟ್ಟಿಲ್ಲ ಎನ್ನುವುದು ಸಾಬೀತಾಗಿದೆ. ಈ ವಾದಕ್ಕೆ ಭಾರತವನ್ನೇ ಉದಾಹರಣೆಯಾಗಿ ನೀಡುವುದಾದರೆ, ದೇಶದಲ್ಲಿ ಈವರೆಗೆ 30 ವರ್ಷದೊಳಗಿನ 103 ಮಂದಿ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ.

ಕೇಂದ್ರ ಸರಕಾರವೇ ಬಿಡುಗಡೆ ಮಾಡಿದ ಅಂಕಿಅಂಶದಲ್ಲಿ ಈ ಆಘಾತಕಾರಿ ವಿಚಾರ ಬಹಿರಂಗವಾಗಿದೆ. ದೇಶಾದ್ಯಂತ ಒಟ್ಟಾರೆ ಮೃತಪಟ್ಟವರ ಪೈಕಿ 103 ಮಂದಿ 30ರೊಳಗಿನ ವಯೋಮಾನದವರು. ಈ ಪೈಕಿ 17 ಮಂದಿ 15 ವರ್ಷದೊಳಗಿನ ಮಕ್ಕಳು ಸೇರಿಕೊಂಡಿದ್ದಾರೆ. ಈ ವೈರಸ್‌ ನೇರವಾಗಿ ಶ್ವಾಸಕೋಶ, ಮೂತ್ರಕೋಶ, ಹೃದಯದಂಥ ಪ್ರಮುಖ ಅಂಗಗಳ ಮೇಲೆಯೇ ದಾಳಿ ನಡೆಸುವ ಕಾರಣ ಸಾವಿನ ಪ್ರಮಾಣ ಹೆಚ್ಚಾಗುತ್ತಿದೆ ಎನ್ನಲಾಗಿದೆ.

ವೈರಸ್‌ ಭಾರತದಲ್ಲಿ 3,500ಕ್ಕೂ ಹೆಚ್ಚು ಮಂದಿಯನ್ನು ಬಲಿಪಡೆದುಕೊಂಡಿದೆ. ಈ ಪೈಕಿ 85 ಮಂದಿ 15-30 ವರ್ಷ, ಶೇ.50.5ರಷ್ಟು ಮಂದಿ 60 ವರ್ಷ ದಾಟಿದವರು. 2,500ಕ್ಕೂ ಹೆಚ್ಚು ಮಂದಿ ಮಧುಮೇಹ, ಹೈಪರ್‌ಟೆನ್ಶನ್‌, ಉಸಿರಾಟದ ತೊಂದರೆ, ಕಿಡ್ನಿ ಸಮಸ್ಯೆಯಂಥ ಕಾಯಿಲೆಗಳಿಂದ ಬಳಲುತ್ತಿದ್ದವರು ಎಂದು ವರದಿ ಹೇಳುತ್ತದೆ. ಒಟ್ಟಾರೆ ಮೃತರ ಪೈಕಿ ಸುಮಾರು 1,700 ಮಂದಿ 60 ವರ್ಷಕ್ಕಿಂತ ಕೆಳಗಿನವರು ಎಂಬುದೂ ಇಲ್ಲಿ ಗಮನಿಸಬೇಕಾದ ಅಂಶ.

ಮಹಾರಾಷ್ಟ್ರದಲ್ಲಿ ಅಧಿಕ: ದೇಶದಲ್ಲಿ ಹೆಚ್ಚು ಸೋಂಕು ಪ್ರಕರಣಗಳನ್ನು ಹೊಂದಿದ ರಾಜ್ಯ ಮಹಾರಾಷ್ಟ್ರ. ಅಲ್ಲಿ ಶುಕ್ರವಾರ 2,940 ಸೋಂಕುಗಳು ದಾಖಲಾಗಿವೆ. ಮುಂಬಯಿ ಒಂದರಲ್ಲಿಯೇ 1, 751 ಕೇಸುಗಳು ಪತ್ತೆಯಾಗಿವೆ. ತಮಿಳುನಾಡಿನಲ್ಲಿ 786, ಗುಜರಾತ್‌ನಲ್ಲಿ 363 ಕೇಸುಗಳು ಪತ್ತೆಯಾಗಿದ್ದು, ಈ ಪೈಕಿ ಅಹಮದಾಬಾದ್‌ನಲ್ಲಿಯೇ 275 ಪ್ರಕರಣಗಳು ದೃಢಪಟ್ಟಿವೆ. ರಾಜಸ್ಥಾನದಲ್ಲಿ 267 ಹೊಸ ಕೇಸುಗಳು ಪತ್ತೆಯಾಗಿವೆ.

ಎನ್‌ಡಿಆರ್‌ಎಫ್ ಎಸ್ಸೈಗೆ ಸೋಂಕು: ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್)ಯ ಅಧಿಕಾರಿಯೊಬ್ಬರಿಗೆ ಶುಕ್ರವಾರ ಕೋವಿಡ್ ಸೋಂಕು ದೃಢಪಟ್ಟಿದೆ. ಇದೇ ಮೊದಲ ಬಾರಿಗೆ ಪಡೆಯಲ್ಲಿ ಸೋಂಕಿನ ಪ್ರಕರಣ ಪತ್ತೆಯಾದಂತಾಗಿದೆ. ವಿಪತ್ತು ನಿರ್ವಹಣಾ ಪಡೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಬ್- ಇನ್ಸೆಪೆಕ್ಟರ್‌ ಹುದ್ದೆಯ ಅಧಿಕಾರಿಯು ರಜೆಯಲ್ಲಿದ್ದು, ಬೇರೆ ಯಾವುದೋ ಕಾಯಿಲೆಗೆ ಔಷಧ ಪಡೆಯಲೆಂದು ವೈದ್ಯರ ಬಳಿ ತೆರಳಿದ್ದರು. ಈ ವೇಳೆ ಅವರಿಗೆ ಕೊರೊನಾ ಇರುವುದು ದೃಢವಾಗಿದೆ. ಅವರು ಸದ್ಯ ಗ್ರೇಟರ್‌ ನೋಯ್ಡಾ ಸಿಎಪಿಎಫ್ನ ರೆಫ‌ರಲ್‌ ಆಸ್ಪತ್ರೆಯ ಐಸೋಲೇಷನ್‌ ವಾರ್ಡ್‌ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಒಸಿಐ ಕಾರ್ಡ್‌ ಹೊಂದಿರುವವರಿಗೆ ಸ್ವದೇಶಕ್ಕೆ ಬರಲು ಅವಕಾಶ: ಭಾರತದ ಸಾಗರೋತ್ತರ ನಾಗರಿಕರು (ಒಸಿಐ) ಕಾರ್ಡ್‌ ಹೊಂದಿರುವ ಕೆಲವರಿಗೆ ಭಾರ ತಕ್ಕೆ ಆಗಮಿ ಸಲು ಅನುಮತಿ ನೀಡಿ ಕೇಂದ್ರ ಸರಕಾರ ಶುಕ್ರವಾರ ಆದೇಶ ಹೊರಡಿಸಿದೆ. ಲಾಕ್‌ಡೌನ್‌ನಿಂದಾಗಿ ವಿದೇಶಗಳಲ್ಲಿ ಸಿಲುಕಿ ರುವ ಭಾರತೀಯರನ್ನು ಸ್ವದೇಶಕ್ಕೆ ಕರೆತರುವ ವಂದೇ ಭಾರತ್‌ ಮಿಷನ್‌ ಯಶಸ್ವಿಯಾಗಿ ಸಾಗುತ್ತಿರುವ ನಡುವೆಯೇ, ಸರ್ಕಾರದಿಂದ ಈ ಘೋಷಣೆ ಹೊರಬಿದ್ದಿದೆ.

ಒಸಿಐ ಕಾರ್ಡ್‌ ಹೊಂದಿರುವ ಭಾರತೀಯರ ಅಪ್ರಾಪ್ತ ವಯಸ್ಸಿನ ಮಕ್ಕಳು, ಕೌಟುಂಬಿಕ ತುರ್ತು ಅನಿವಾರ್ಯತೆ (ಕುಟುಂಬ ಸದಸ್ಯರ ಸಾವು ಇತ್ಯಾದಿ)ಯ ಕಾರಣಕ್ಕಾಗಿ ದೇಶಕ್ಕೆ ವಾಪಸಾಗಲು ಬಯಸುವವರು ಮತ್ತು ಒಸಿಐ ಕಾರ್ಡ್‌ ಹೊಂದಿರುವ ವಿವಿ ವಿದ್ಯಾರ್ಥಿಗಳು(ಆದರೆ ಅವರ ಹೆತ್ತವರು ಭಾರತೀಯ ನಾಗರಿಕರಾಗಿದ್ದು, ಭಾರತದಲ್ಲೇ ವಾಸಿಸುತ್ತಿರಬೇಕು) ಈ ಸೌಲಭ್ಯವನ್ನು ಪಡೆಯಲಿದ್ದಾರೆ.

ಲಾಕ್‌ಡೌನ್‌ ಎಫೆಕ್ಟ್: 29 ಲಕ್ಷ ಪ್ರಕರಣಕ್ಕೆ ತಡೆ
ದೇಶಾದ್ಯಂತ ಆರಂಭಿಕ ಹಂತದಲ್ಲೇ ಲಾಕ್‌ ಡೌನ್‌ ಘೋಷಿಸಿದ ಕಾರಣ, ಸೋಂಕಿತರು ಹಾಗೂ ಸಾವಿನ ಸಂಖ್ಯೆಯನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಯಿತು ಎಂದು ನೀತಿ ಆಯೋಗದ ಸದಸ್ಯ ಡಾ. ವಿ.ಕೆ. ಪೌಲ್‌ ಅಭಿಪ್ರಾಯಪಟ್ಟಿದ್ದಾರೆ. ಸರಳ ಮಾದರಿಯನ್ನು ಅನುಸರಿಸಿ ಹೇಳುವುದಾದರೆ, ದೇಶವ್ಯಾಪಿ ನಿರ್ಬಂಧದಿಂದಾಗಿ ಭಾರತ ಸರಕಾರವು ಕನಿಷ್ಠ 14ರಿಂದ 29 ಲಕ್ಷ ಕೋವಿಡ್ ಪ್ರಕರಣಗಳು ಹಾಗೂ 37 ಸಾವಿರದಿಂದ 71 ಸಾವಿರ ಸಾವುಗಳನ್ನು ತಪ್ಪಿಸಿದೆ. ನಿರ್ಬಂಧ ವಿಧಿಸದೇ ಸುಮ್ಮನಿದ್ದ ಅನೇಕ ದೇಶಗಳು ಅದಕ್ಕೆ ತಕ್ಕ ಬೆಲೆ ತೆತ್ತಿವೆ. ಆದರೆ, ಭಾರತದಲ್ಲಿ ಪ್ರಧಾನಿ ಕಾರ್ಯಾಲಯ ಸಮಯಕ್ಕೆ ಸರಿಯಾಗಿ ಸೂಕ್ತ ನಿರ್ಧಾರ ಕೈಗೊಂಡಿತು. ಅಲ್ಲದೆ, ದೇಶದ ಜನರು ಕೂಡ ಅತ್ಯಂತ ಪರಿಣಾಮಕಾರಿಯಾಗಿ ಲಾಕ್‌ ಡೌನ್‌ ಅನುಷ್ಠಾನಗೊಳ್ಳುವಂತೆ ನೋಡಿ ಕೊಂಡರು ಎಂದು ಅವರು ಹೇಳಿದ್ದಾರೆ.

ಏ.3ರವರೆಗೆ ಸೋಂಕಿನ ಪ್ರಗತಿ ದರ ಶೇ.22.6ರ ದರದಲ್ಲಿ ಹೆಚ್ಚಳವಾಗುತ್ತಿತ್ತು. ಏ.4ರ ಬಳಿಕ ಈ ದರ ಇಳಿಮುಖವಾಗುತ್ತಾ ಸಾಗಿ, ಶೇ.5.5ಕ್ಕೆ ತಲುಪಿತು. ನಮ್ಮ ದೇಶದಲ್ಲಿ ಸೋಂಕಿನ ವ್ಯಾಪಿಸುವಿಕೆಯ ದರವನ್ನು ನಿಯಂತ್ರಣಕ್ಕೆ ತರಲಾಯಿತು. ವೈರಸ್‌ ವ್ಯಾಪಿಸುವಿಕೆಯ ಪ್ರಮಾಣ ಶೇ.22ರಷ್ಟೇ ಮುಂದುವರಿದಿದ್ದರೆ ಪರಿಸ್ಥಿತಿ ಈಗ ಏನಾಗಿರುತ್ತಿತ್ತು ಎಂಬುದನ್ನು ನೀವೇ ಕಲ್ಪಿಸಿಕೊಳ್ಳಿ ಎಂದೂ ಪೌಲ್‌ ನುಡಿದಿದ್ದಾರೆ. ಈ ಹಿಂದೆ ಸೋಂಕಿನ ದ್ವಿಗುಣಾವಧಿ 3.5 ದಿನಗಳಾಗಿದ್ದವು. ಆದರೆ ಈಗ ಸೋಂಕಿತರ ಸಂಖ್ಯೆ ದುಪ್ಪಟ್ಟಾಗಲು 13.5 ದಿನಗಳು ಬೇಕಾಗುತ್ತಿವೆ ಎಂದೂ ತಿಳಿಸಿದ್ದಾರೆ.

ಆರು ಸಾವಿರ ಪ್ರಕರಣ
ಆತಂಕಕಾರಿ ಸಂಗತಿಯೆಂಬಂತೆ, ಇದೇ ಮೊದಲ ಬಾರಿಗೆ ದೇಶದಲ್ಲಿ ಹೊಸ ಪ್ರಕರಣಗಳ ಸಂಖ್ಯೆ 6 ಸಾವಿರದ ಗಡಿ ದಾಟಿದೆ. 4ನೇ ಹಂತದ ಲಾಕ್‌ ಡೌನ್‌ ಆರಂಭವಾದ ಬಳಿಕ ದೇಶಾದ್ಯಂತ ಸೋಂಕಿತರ ಸಂಖ್ಯೆ ದಿನಕಳೆದಂತೆ ಹೆಚ್ಚುತ್ತಲೇ ಸಾಗುತ್ತಿದ್ದು, ಕೇವಲ 24 ಗಂಟೆಗಳ ಅವಧಿಯಲ್ಲಿ 6,088 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟು, 148 ಮಂದಿ ಸಾವಿಗೀಡಾಗಿದ್ದಾರೆ. ಪ್ರಸ್ತುತ ದೇಶದಲ್ಲಿ 66 ಸಾವಿರಕ್ಕೂ ಅಧಿಕ ಸಕ್ರಿಯ ಪ್ರಕರಣಗಳಿದ್ದು, 48,533 ಮಂದಿ ಸಂಪೂರ್ಣ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಅಂದರೆ, ಗುಣಮುಖ ಪ್ರಮಾಣ ಶೇ.40.97 ಕ್ಕೇರಿ ದಂತಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಅಲ್ಲದೆ, ಒಂದೇ ದಿನದಲ್ಲಿ 3234 ರೋಗಿಗಳು ಗುಣಮುಖರಾಗಿದ್ದಾರೆ. ಗುರುವಾರ ಬೆಳಗ್ಗೆ 8ರಿಂದ ಶುಕ್ರವಾರ ಬೆಳಗ್ಗೆ 8ರವರೆಗೆ 148 ಮಂದಿ ಅಸುನೀಗಿದ್ದಾರೆ.

ಟಾಪ್ ನ್ಯೂಸ್

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

ಗೂಗಲ್ ಮ್ಯಾಪ್ ನಂಬಿ ನಿರ್ಮಾಣ ಹಂತದ ಸೇತುವೆಯಲ್ಲಿ ಚಲಿಸಿ ನದಿಗೆ ಬಿದ್ದ ಕಾರು, ಮೂವರು ಮೃತ್ಯು

ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

G.parameshwar

Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್‌ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್‌

Fish-Agriculture

Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗೂಗಲ್ ಮ್ಯಾಪ್ ನಂಬಿ ನಿರ್ಮಾಣ ಹಂತದ ಸೇತುವೆಯಲ್ಲಿ ಚಲಿಸಿ ನದಿಗೆ ಬಿದ್ದ ಕಾರು, ಮೂವರು ಮೃತ್ಯು

ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

Maharashtra Election: ಅಘಾಡಿ ಸೋಲಿಗೆ ಉದ್ಧವ್‌,ಶರದ್‌ ಕಾರಣ: ಕಾಂಗ್ರೆಸ್‌

Maharashtra Election: ಅಘಾಡಿ ಸೋಲಿಗೆ ಉದ್ಧವ್‌,ಶರದ್‌ ಕಾರಣ: ಕಾಂಗ್ರೆಸ್‌

Modi-Tour

Mann Ki Baat: ಮೈಸೂರಿನ ‘ಅರ್ಲಿ ಬರ್ಡ್‌’ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ

Amaravati: ತಿರುಪತಿಯಲ್ಲಿ ಮುರಿದಿದ್ದ ರಾಮನ ಬೆರಳು ದುರಸ್ತಿ!

Amaravati: ತಿರುಪತಿಯಲ್ಲಿ ಮುರಿದಿದ್ದ ರಾಮನ ಬೆರಳು ದುರಸ್ತಿ!

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

ಗೂಗಲ್ ಮ್ಯಾಪ್ ನಂಬಿ ನಿರ್ಮಾಣ ಹಂತದ ಸೇತುವೆಯಲ್ಲಿ ಚಲಿಸಿ ನದಿಗೆ ಬಿದ್ದ ಕಾರು, ಮೂವರು ಮೃತ್ಯು

ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

G.parameshwar

Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್‌ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.