ಕುರುಬ, ಕೊರಗ ಭಾಷೆ ಅಳಿವಿನಂಚಿಗೆ
Team Udayavani, Feb 19, 2018, 8:15 AM IST
ಹೊಸದಿಲ್ಲಿ: ಕರ್ನಾಟಕದ ಕುರುಬ ಮತ್ತು ಕೊರಗ ಭಾಷೆ ಸಹಿತ 40 ಭಾರತೀಯ ಭಾಷೆಗಳು ಅಳಿವಿನಂಚಿಗೆ ಸಾಗುತ್ತಿವೆ.
ಗಣತಿ ನಿರ್ದೇಶನಾಲಯ ಬಿಡುಗಡೆ ಮಾಡಿದ ವರದಿಯು ಈ ಆತಂಕಕಾರಿ ಸಂಗತಿಯನ್ನು ಬಹಿರಂಗಪಡಿಸಿದೆ. ಕೆಲವೇ ಕೆಲವು ಸಾವಿರ ಜನರು ಈ ಭಾಷೆಗಳನ್ನು ಮಾತ ನಾಡುತ್ತಿದ್ದು, ದೇಶದಲ್ಲಿ ಸುಮಾರು 40 ಭಾಷೆಗಳನ್ನು 10 ಸಾವಿರಕ್ಕಿಂತಲೂ ಕಡಿಮೆ ಜನರು ಮಾತನಾಡುತ್ತಿದ್ದಾರೆ. ಹೀಗಾಗಿ ಇವು ಅಳಿವಿನಂಚಿಗೆ ಸಾಗುತ್ತಿವೆ ಎಂದು ಪರಿಗಣಿಸಲಾಗಿದೆ ಎಂದು ಗೃಹ ಸಚಿವಾಲಯ ಹೇಳಿದೆ.
ದೇಶದಲ್ಲಿರುವ 22 ಅಧಿಸೂಚಿತ ಭಾಷೆಗಳ ಹೊರತಾಗಿ, 31 ಇತರ ಭಾಷೆಗಳಿದ್ದು, ಅವುಗಳಿಗೆ ಆಯಾಯ ರಾಜ್ಯ ಸರಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಅಧಿಕೃತ ಭಾಷೆ ಸ್ಥಾನಮಾನ ವನ್ನು ನೀಡಿವೆ ಎಂಬ ಅಂಶವನ್ನೂ ವರದಿಯಲ್ಲಿ ಉಲ್ಲೇಖೀಸಲಾಗಿದೆ.
ಮೈಸೂರಿನ ಸಂಸ್ಥೆಯಿಂದ ಸಂಶೋಧನೆ: ಮೈಸೂರಿನಲ್ಲಿರುವ ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆ ಈ ಬಗ್ಗೆ ಸಮಗ್ರ
ಸಂಶೋಧನೆ ನಡೆಸಿದ್ದು, ವಿಶೇಷ ಯೋಜನೆ ಯಡಿಯಲ್ಲಿ ಇದು ಅಳಿವಿನಂಚಿನಲ್ಲಿರುವ ಭಾಷೆಗಳನ್ನು ಗುರುತಿಸಿ ರಕ್ಷಿಸುವ ಕೆಲಸ ಮಾಡುತ್ತಿದೆ. ವ್ಯಾಕರಣ ವಿವರಗಳು, ಶಬ್ದಕೋಶಗಳು, ಭಾಷೆಯ ಮೂಲಾಂಶಗಳು, ಇತರ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ.
1,635 ವೈವಿಧ್ಯದ ಭಾಷೆ!: ದೇಶದಲ್ಲಿ ಒಟ್ಟು 1,635 ವೈವಿಧ್ಯದ ಮಾತೃಭಾಷೆಗಳಿವೆ. 234 ಗುರುತಿಸಬಹುದಾದ ಮಾತೃಭಾಷೆಗಳು ಮತ್ತು 22 ಪ್ರಮುಖ ಭಾಷೆಗಳಿವೆ ಎಂದು ಗಣತಿಯ ದತ್ತಾಂಶದಲ್ಲಿ ವಿವರಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.