ಒಲಿಂಪಿಕ್ ಚಿನ್ನದ ಪದಕ ವಿಜೇತ, ಮಾಜಿ ಹಾಕಿ ಆಟಗಾರ ರವೀಂದರ್ ಪಾಲ್ ಕೋವಿಡ್ ಸೋಂಕಿನಿಂದ ಸಾವು
Team Udayavani, May 8, 2021, 11:05 AM IST
ನವದೆಹಲಿ : ಒಲಿಂಪಿಕ್ ಚಿನ್ನದ ಪದಕ ವಿಜೇತ, ಮಾಜಿ ಹಾಕಿ ಆಟಗಾರ ರವೀಂದರ್ ಪಾಲ್ ಸಿಂಗ್ (65) ಮಾರಕ ಕೋವಿಡ್ ಸೋಂಕಿನಿಂದ ಶನಿವಾರ ಬೆಳಗ್ಗೆ ಸಾವನಪ್ಪಿದ್ದಾರೆ.
ರವೀಂದರ್ ಪಾಲ್ ಸೋಂಕಿನಿಂದ ಬಳಲಿದ್ದು ಕಳೆದ ಏಪ್ರಿಲ್ 24ರಂದು ವಿವೇಕಾನಂದ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಸೋಂಕಿನಿಂದ ಗುಣಮುಖರಾಗಿದ್ದು, ಕಳೆದ ಗುರುವಾರ ನಾನ್ ಕೋವಿಡ್ ವಾರ್ಡ್ ಗೆ ಶಿಫ್ಟ್ ಮಾಡಲಾಗಿತ್ತು ಎಂದು ರವೀಂದರ್ ಕುಟುಂಬದ ಮೂಲಗಳು ತಿಳಿಸಿವೆ.
ಆದರೆ ಶುಕ್ರವಾರ ಅವರ ಸ್ಥಿತಿ ಇದ್ದಕ್ಕಿದ್ದಂತೆ ಹದಗೆಟ್ಟ ಕಾರಣ ಅವರಿಗೆ ವೆಂಟಿಲೇಟರ್ ಅಳವಡಿಲಾಯಿತು ಎಂದು ತಿಳಿಸಲಾಗಿದೆ.
ಪಾಲ್ 1984 ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ನಲ್ಲಿಯೂ ಆಡಿದ್ದರು. ಇವರು ಮದುವೆಯಾಗದ ಕಾರಣ ಸೊಸೆ ಪ್ರಜ್ಞಾ ಯಾದವ್ ಜೊತೆ ಉಳಿದುಕೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Service Variation: ಸರಕಾರಿ ಬಸ್ ಸೇವೆಯಲ್ಲಿ ವ್ಯತ್ಯಯ: ಪ್ರಯಾಣಿಕರ ಪರದಾಟ
Mangaluru: ಕಡಲತಡಿಯಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಸಕಲ ಸಿದ್ಧತೆ
Kundapura: ಸರಕಾರಿ ಕಾಲೇಜಿನ ಎನ್‌ವಿಆರ್ ಕೆಮರಾ ಕಳವು
Manipal: ‘ಉದಯವಾಣಿ’ ಸದಭಿರುಚಿಯ ಓದುಗರ ಸೃಷ್ಟಿಸಿದೆ: ಜಯಪ್ರಕಾಶ್
Belthangady: ಕಾರು-ದ್ವಿಚಕ್ರ ವಾಹನ ಅಪಘಾತ: ಗಾಯಾಳಾಗಿದ್ದ ವ್ಯಕ್ತಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.