ಸಂಗಾತಿಯನ್ನು ಸೇರುವ ವೇಳೆ ಸೊಳ್ಳೆಗಳ ರೆಕ್ಕೆ ಬಡಿತ ಜೋರು
Team Udayavani, Jan 14, 2022, 6:58 AM IST
ನವದೆಹಲಿ: ಲಂಡನ್ನ ಯುಸಿಎಲ್ ಇಯರ್ ಇನ್ಸ್ಟಿಟ್ಯೂಟ್ನ ವಿಜ್ಞಾನಿಗಳ ತಂಡ ಮಹತ್ವದ ಸಂಶೋಧನೆ ನಡೆಸಿದೆ. ಯುಸಿಎಲ್ ವಿಜ್ಞಾನಿಗಳು ಸೊಳ್ಳೆಗಳು ಯಾವ ಸಮಯದಲ್ಲಿ ಸಂತಾನೋತ್ಪತ್ತಿ ಹೆಚ್ಚಿಸುತ್ತವೆ, ಆ ಸಮಯದಲ್ಲಿ ಅವುಗಳ ವರ್ತನೆ ಹೇಗಿರುತ್ತದೆ ಎನ್ನುವುದನ್ನು ಪತ್ತೆ ಹಚ್ಚಿದ್ದಾರೆ. ಇದು ಸೊಳ್ಳೆಗಳ ಪ್ರಮಾಣ ಜಾಸ್ತಿಯಾಗುವುದನ್ನು ತಡೆಯಲು ಬಹಳ ನೆರವು ನೀಡುವ ಸಾಧ್ಯತೆಯಿದೆ. ಜತೆಗೆ, ಈ ವಿಧಾನ ಬಳಸಿಕೊಂಡು ಮಲೇರಿಯಾದಂತಹ ರೋಗಗಳಿಂದ ರಕ್ಷಿಸಿಕೊಳ್ಳಬಹುದು ಎಂಬುದು ವಿಜ್ಞಾನಿಗಳ ಲೆಕ್ಕಾಚಾರ.
ಸಾಮಾನ್ಯವಾಗಿ ಸಂಜೆಯಾದೊಡನೆ ಸೊಳ್ಳೆಗಳು ಹಿಂಡುಹಿಂಡಾಗಿ ಚಲಿಸುತ್ತವೆ. ಈ ಹೊತ್ತಿನಲ್ಲಿ ಗಂಡು ಸೊಳ್ಳೆಗಳು, ಹೆಣ್ಣು ಸೊಳ್ಳೆಗಳನ್ನು ಕೂಡಲು ಪ್ರಯತ್ನ ನಡೆಸುತ್ತವೆ. ಆಗ ಸೊಳ್ಳೆಗಳ ರೆಕ್ಕೆಬಡಿತ ಜೋರಾಗಿರುತ್ತದೆ. ಹೀಗೆ ವೇಗವಾಗಿ ರೆಕ್ಕೆ ಬಡಿದಾಗ ಬರುವ ಸದ್ದು ಬಹಳ ಸೂಕ್ಷ್ಮವಾಗಿಯೂ, ಅಷ್ಟೇ ವಿಭಿನ್ನವಾಗಿಯೂ ಇರುತ್ತವೆ. ಈ ಸದ್ದನ್ನು ಕೇಳಿಸಿಕೊಳ್ಳುವ ಮೂಲಕ ಗಂಡುಸೊಳ್ಳೆಗಳು ಸೂಕ್ತ ಸಂಗಾತಿಯನ್ನು ಸೇರಿಕೊಳ್ಳುತ್ತವೆ! ಒಂದು ವೇಳೆ ಹೀಗೊಂದು ಕೇಳಿಸಿಕೊಳ್ಳುವ ಶಕ್ತಿಯೇ ಇಲ್ಲವಾದರೆ? ಯುಸಿಎಲ್ ವಿಜ್ಞಾನಿಗಳು ಈ ದಿಕ್ಕಿನಲ್ಲಿ ಸಂಶೋಧನೆ ಶುರು ಮಾಡಿದ್ದಾರೆ.
ಗಂಡುಸೊಳ್ಳೆಗಳು ಸಂಗಾತಿಗಾಗಿ ಅರಸುವಾಗ ಸೆಕೆಂಡ್ಗೆ 500ರಿಂದ 1000 ಬಾರಿ ರೆಕ್ಕೆ ಬಡಿಯುತ್ತವೆ! ಹೆಣ್ಣು ಸೊಳ್ಳೆಗಳು ಸೆಕೆಂಡ್ಗೆ 300ರಿಂದ 600 ಬಾರಿ ರೆಕ್ಕೆ ಬಡಿಯುತ್ತವೆ. ಇದರಿಂದಲೇ ಸೂಕ್ತ ಸಂಗಾತಿಯನ್ನು ಪತ್ತೆಹಚ್ಚಲು ಪರಸ್ಪರ ಸಾಧ್ಯವಾಗುತ್ತದೆ. ಯುಸಿಎಲ್ ವಿಜ್ಞಾನಿಗಳು ಸೊಳ್ಳೆಗಳನ್ನು ಹಲವು ದಿನಗಳ ಕಾಲ ಒಂದು ಜಾಗದಲ್ಲಿ ಕೂಡಿ ಹಾಕಿ ಈ ಮಹತ್ವದ ಶೋಧವನ್ನು ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
J&K:ಪಾಕ್ ಮೂಲದ ಎಲ್ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ
Shiv Sena ; ಭಾರೀ ವಿವಾದದ ಬಳಿಕ ಶೈನಾ ಕ್ಷಮೆ ಯಾಚಿಸಿದ ಅರವಿಂದ್ ಸಾವಂತ್
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.