ಬ್ಯಾಂಡ್‌ನೊಂದಿಗೆ ಎತ್ತಿನ ಗಾಡಿಯಲ್ಲಿ ಮಾಹಿತಿ ಒಯ್ದ ಆರ್‌ಟಿಐ ಕಾರ್ಯಕರ್ತ!
Team Udayavani, Nov 6, 2022, 7:35 AM IST
ಶಿವಪುರಿ: ಎರಡು ತಿಂಗಳ ಸತತ ಪ್ರಯತ್ನದ ನಂತರ ಮಾಹಿತಿ ಹಕ್ಕು(ಆರ್‌ಟಿಐ) ಕಾರ್ಯಕರ್ತ ಮಖಾನ್ ಧಕಡ್ ಅವರು 9,000 ಪುಟಗಳ ಮಾಹಿತಿಯನ್ನು ಡೋಲಿನ ಸದ್ದು ಸಂಭ್ರಮದೊಂದಿಗೆ ಎತ್ತಿನ ಗಾಡಿಯಲ್ಲಿ ತೆಗೆದುಕೊಂಡು ಹೋಗಿದ್ದಾರೆ.
ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಬೈರಾಡ್ ನಗರದ ನಿವಾಸಿಯಾಗಿರುವ ಮಖಾನ್ ಅವರು, ಆರ್‌ಟಿಐ ಅಡಿ ಪ್ರಧಾನ ಮಂತ್ರಿ ಅವಾಸ್ ಯೋಜನೆಯ ಮಾಹಿತಿ ಬಯಸಿದ್ದರು. ಆದರೆ ಮಾಹಿತಿ ಕೊಡದ ಸ್ಥಳೀಯಾಡಳಿತ, 25 ಸಾವಿರ ರೂ.ಗಳನ್ನು ಪಾವತಿಸುವಂತೆ ಸೂಚಿಸಿತ್ತು.
ತಮ್ಮ ಸ್ನೇಹಿತರು, ಪರಿಚಯಸ್ಥರಿಂದ ಸಾಲ ಮಾಡಿ 25,000 ರೂ.ಗಳನ್ನು ಅವರು ಪಾವತಿಸಿದ್ದರು. ಆದರೆ ಎರಡು ತಿಂಗಳಾದರೂ ಅವರಿಗೆ ಮಾಹಿತಿ ಸಿಕ್ಕಿರಲಿಲ್ಲ.
ನಂತರ ಅವರು ಈ ಬಗ್ಗೆ ಗ್ವಾಲಿಯರ್‌ನ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಬಳಿಕ ಅವರ ಸೂಚನೆಯಂತೆ 9,000 ಪುಟಗಳ ಮಾಹಿತಿಯನ್ನು ಮಖಾನ್ ಅವರಿಗೆ ಅಧಿಕಾರಿಗಳು ಹಸ್ತಾಂತರಿಸಿದ್ದಾರೆ. ಈ ದೊಡ್ಡ ಸಂಖ್ಯೆಯ ಪುಟಗಳನ್ನು ಒಯ್ಯಲೆಂದು ಅವರು ಎತ್ತಿನ ಗಾಡಿಯನ್ನೇ ತಂದಿದ್ದಾರೆ.
ಜತೆಗೆ, ಮಾಹಿತಿ ಸಿಕ್ಕ ಖುಷಿಯನ್ನು ಸಂಭ್ರಮಿಸಲು ಡೋಲಿನೊಂದಿಗೆ ಆಗಮಿಸಿದ್ದಾರೆ. ಮಾಹಿತಿಯ ಪುಟಗಳನ್ನು ಎಣಿಸಲು ನನಗೆ ಮತ್ತು ನನ್ನ ನಾಲ್ವರು ಗೆಳೆಯರಿಗೆ 2 ಗಂಟೆಗಳು ಬೇಕಾದವು ಎಂದೂ ಅವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ
Shiv Sena ; ಭಾರೀ ವಿವಾದದ ಬಳಿಕ ಶೈನಾ ಕ್ಷಮೆ ಯಾಚಿಸಿದ ಅರವಿಂದ್ ಸಾವಂತ್
Tirupati: ಮೂರು ವರ್ಷದ ಬಾಲಕಿ ಮೇಲೆ ಸಂಬಂಧಿಯಿಂದಲೇ ಅತ್ಯಾ*ಚಾರ!
MUST WATCH
ಹೊಸ ಸೇರ್ಪಡೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
Shivaji Satam: ಕ್ಯಾಷಿಯರ್ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?
INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.