M.P; ಇದು ದೇಶಕ್ಕೆ ಕಳ್ಳರನ್ನು ಕೊಟ್ಟ ಶಾಲೆ..: ಇಲ್ಲಿದೆ ದರೋಡೆ, ಸುಲಿಗೆ, ಕಳ್ಳತನ ತರಗತಿ!
Team Udayavani, Aug 20, 2024, 4:47 PM IST
ಭೋಪಾಲ್: ಮಧ್ಯಪ್ರದೇಶದ ಈ ಮೂರು ಗ್ರಾಮಗಳಲ್ಲಿ ನಿಮಗೆ ದರೋಡೆ – ಸುಲಿಗೆ ಮಾಡುವ ವಿಧಾನವನ್ನು ಕಲಿಸುತ್ತಾರೆ. ಅದಕ್ಕೆ ಪದವಿ ಕೊಡುತ್ತಾರೆ. ಇದು ಮಧ್ಯಪ್ರದೇಶದ (Madhya Pradesh) ಕಡಿಯಾ, ಗುಲ್ಖೇಡಿ ಮತ್ತು ಹುಲ್ಖೇಡಿ ಗ್ರಾಮಗಳ ಕಥೆ. ಇದು ದೇಶದಲ್ಲಿ ಕ್ರಿಮಿನಲ್ ಗಳ ನರ್ಸರಿ ಎಂದು ಹೆಸರಾದ ಊರುಗಳ ಕಥೆ!
ರಾಜಧಾನಿ ಭೋಪಾಲ್ (Bhopal) ನಿಂದ 117 ಕಿ.ಮೀ ದೂರವಿರುವ ರಾಜಗಢ್ ಜಿಲ್ಲೆಯ ಈ ಮೂರು ಗ್ರಾಮಗಳು “ಕಲಾ ವಿಭಾಗದ ಕಳ್ಳತನ, ದರೋಡೆ ಮತ್ತು ಸುಲಿಗೆ ಪದವಿ”ಯನ್ನು ವಿದ್ಯಾರ್ಥಿಗಳನ್ನು ಕಲಿಸಲಾಗುತ್ತದೆ. ಪೋಲೀಸರು ತಮ್ಮ ಅಧಿಕಾರವನ್ನು ಹೊಂದಿದ್ದರೂ ಸಹ, ಈ ಪ್ರದೇಶದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಹಾಕುತ್ತಾರೆ.
ಪೋಷಕರೇ ಕಳುಹಿಸುತ್ತಾರೆ
12ರಿಂದ 13 ವರ್ಷ ಪ್ರಾಯದ ಮಕ್ಕಳನ್ನು ಪೋಷಕರೇ ಈ ಗ್ರಾಮಗಳಿಗೆ ಡಕಾಯತಿ ಕಲಿಸಲೆಂದು ಕಳುಹಿಸುತ್ತಾರೆ. ಗ್ಯಾಂಗ್ ಲೀಡರ್ ಗಳನ್ನು ಭೇಟಿಯಾದ ನಂತರ ಪೋಷಕರು, ತಮ್ಮ ಮಗುವಿಗೆ ಯಾರು ಅತ್ಯುತ್ತಮ “ಶಿಕ್ಷಣ” ನೀಡಬಹುದು ಎಂದು ನಿರ್ಧರಿಸುತ್ತಾರೆ. ಈ ಶಾಲೆಗಳಿಗೆ ದಾಖಲಾಗಲು, ಕುಟುಂಬಗಳು 2 ಲಕ್ಷ ರೂ. ದಿಂದ 3 ಲಕ್ಷದವರೆಗಿನ ಶುಲ್ಕವನ್ನು ಪಾವತಿಸುತ್ತವೆ ಎನ್ನುತ್ತದೆ ವರದಿ.
ಇಲ್ಲಿ ವಿದ್ಯಾರ್ಥಿಗಳಿಗೆ ಹಲವು ರೀತಿಯ ಕ್ರಿಮಿನಲ್ ವಿದ್ಯೆಗಳನ್ನು ಕಲಿಸಲಾಗುತ್ತದೆ. ಇಲ್ಲಿ ಜೇಬುಗಳ್ಳತನ, ಜನಜಂಗುಳಿಯ ಪ್ರದೇಶದಲ್ಲಿ ಬ್ಯಾಗ್ ಎಗರಿಸುವುದು, ವೇಗವಾಗಿ ಓಡುವುದು, ಪೊಲೀಸರಿಂದ ತಪ್ಪಿಸಿಕೊಳ್ಳುವುದು ಮತ್ತು ಸಿಕ್ಕಿಬಿದ್ದರೆ ಹೊಡೆತಗಳನ್ನು ಸಹಿಸಿಕೊಳ್ಳುವುದು.. ಹೀಗೆ ಹಲವು ರೀತಿಯ ʼವಿದ್ಯೆʼಗಳನ್ನು ಕಲಿಸಲಾಗುತ್ತದೆ.
ಗ್ಯಾಂಗ್ ನಲ್ಲಿ ಒಂದು ವರ್ಷ ಪೂರ್ಣಗೊಂಡ ನಂತರ, ಮಗುವಿನ ಪೋಷಕರು ಗ್ಯಾಂಗ್ ಲೀಡರ್ ನಿಂದ ವಾರ್ಷಿಕ ₹ 3 ರಿಂದ ಲಕ್ಷ ₹ 5 ಲಕ್ಷ ಹಣವನ್ನು ಪಡೆಯುತ್ತಾರೆ.
ಇಲ್ಲಿನ ಗ್ರಾಮಗಳು ಕೆಲವು ಅತ್ಯಂತ ಕುತಂತ್ರ ಕಳ್ಳರನ್ನು ಸೃಷ್ಟಿಸಿವೆ. ಅವರ ಅಪರಾಧ ಚಟುವಟಿಕೆಗಳು ಭಾರತದಾದ್ಯಂತ ಹಲವು ಬಾರಿ ಹಡೆ ಲೈನ್ ಗಳಾಗಿದೆ.
ಆಗಸ್ಟ್ 8 ರಂದು ಜೈಪುರದ ಹಯಾತ್ ಹೋಟೆಲ್ ನಲ್ಲಿ ನಡೆದ ಅದ್ದೂರಿ ಡೆಸ್ಟಿನೇಶನ್ ವೆಡ್ಡಿಂಗ್ ವೇಳೆ ಅಪ್ರಾಪ್ತ ವಯಸ್ಕ ಕಳ್ಳನೊಬ್ಬ ₹ 1.5 ಕೋಟಿ ಮೌಲ್ಯದ ಚಿನ್ನಾಭರಣ ಮತ್ತು ₹ 1 ಲಕ್ಷ ನಗದು ಹೊಂದಿರುವ ಬ್ಯಾಗ್ ನೊಂದಿಗೆ ಪರಾರಿಯಾಗಿದ್ದ.
ಹೈದರಾಬಾದ್ ಮೂಲದ ಉದ್ಯಮಿಯೊಬ್ಬರ ಮಗನ ಮದುವೆಯಲ್ಲಿ, ಮದುಮಕ್ಕಳಿಗೆ ಬಂದವರು ಆಶೀರ್ವಾದ ಮಾಡುತ್ತಿದ್ದ ವೇಳೆ ಮದುಮಗನ ತಾಯಿ ಬ್ಯಾಗನ್ನು ಬಳಿಯಿದ್ದ ಕುರ್ಚಿಯಲ್ಲಿ ಇಟ್ಟಿದ್ದರು. ಈ ಸಮಯದಲ್ಲಿ ಅಪ್ರಾಪ್ತ ವಯಸ್ಕ ಬ್ಯಾಗ್ ಕದ್ದು ಪರಾರಿಯಾಗಿದ್ದ.
ಕಳ್ಳತನ ಮಾಡಿದ ನಂತರ ಆತನ ಗ್ಯಾಂಗ್ ಕಡಿಯಾ ಗ್ರಾಮಕ್ಕೆ ಪರಾರಿಯಾಗಿದೆ. ಕದ್ದ ಆಭರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿದ ಅವರು ನಂತರ ಧಾರ್ಮಿಕ ಯಾತ್ರೆಯಾದ ಕನ್ವರ್ ಯಾತ್ರೆಯಲ್ಲಿ ಭಾಗವಹಿಸಿದ್ದರು. ಆದರೆ ಇದರ ಬೆನ್ನು ಹತ್ತಿದ್ದ ಪೊಲೀಸರು ಕಳ್ಳನನ್ನು ಹಿಡಿದರು, ಆಗ ಇಡೀ ಗ್ಯಾಂಗ್ ನ ಭಯಂಕರ ಇತಿಹಾಸ ಬದಲಾಯಿತು.
ಇನ್ನೊಂದು ಘಟನೆಯಲ್ಲಿ ಡಿಸೆಂಬರ್ 2023 ರಲ್ಲಿ, 22 ವರ್ಷದ ಯಶ್ ಸಿಸೋಡಿಯಾ ಎಂಬಾತ ದೆಹಲಿಯಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಚಿನ್ನಾಭರಣ ತುಂಬಿದ ಚೀಲವನ್ನು ಕದ್ದು ಪರಾರಿಯಾಗಿದ್ದ. ಆತನ ವಿರುದ್ಧ ವಿವಿಧ ರಾಜ್ಯಗಳಲ್ಲಿ 18 ಪ್ರಕರಣಗಳ ದಾಖಲಾಗಿದೆ.
ಈ ಕ್ರಿಮಿನಲ್ ಗಳು ಎಷ್ಟು ಚಾಲಾಕಿಗಳೆಂದರೆ, ಅವರು ಆಭರಣದಂಗಡಿಗೆ ಭೇಟಿ ನೀಡದೆಯೇ ಆಭರಣದ ಮೌಲ್ಯವನ್ನು ನಿರ್ಣಯಿಸುತ್ತಾರೆ. ಮಕ್ಕಳಿಗೆ ಕಳ್ಳತನ, ಜೂಜಾಟ ಮತ್ತು ಮದ್ಯ ಮಾರಾಟ ಮಾಡಲು ತರಬೇತಿ ನೀಡಲಾಗುತ್ತದೆ ಎನ್ನುತ್ತಾರೆ ಎಡಿಜಿಪಿ ಜೈದೀಪ್ ಪ್ರಸಾದ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ
Maharashtra; ಫಡ್ನವೀಸ್ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!
Mumbai; ಚುನಾವಣೆಗೆ ಏಕಾಂಗಿ ಸ್ಪರ್ಧೆ: ಉದ್ಧವ್ ಶಿವಸೇನೆ ಇಂಗಿತ!
Kota; ಮತ್ತೊಬ್ಬ ವಿದ್ಯಾರ್ಥಿ ಆತ್ಮಹ*ತ್ಯೆ: ವರ್ಷದ 17ನೇ ಕೇಸು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.