16ನೇ ಮಗುವಿಗೆ ಜನ್ಮ, ತಾಯಿ ಸಾವು; ಕೆಲವೇ ಗಂಟೆಗಳಲ್ಲಿ ಮಗುವೂ ಮರಣ
Team Udayavani, Oct 14, 2020, 1:32 AM IST
ಸಾಂದರ್ಭಿಕ ಚಿತ್ರ
ಭೋಪಾಲ: ಮಧ್ಯಪ್ರದೇಶದ ದಮೋಹ್ ಜಿಲ್ಲೆಯಲ್ಲಿ ವಲಸಿಗ ಕಾರ್ಮಿಕ ಮಹಿಳೆ 16ನೇ ಮಗುವಿಗೆ ಜನ್ಮವಿತ್ತು ಕೊನೆಯುಸಿರೆಳೆದಿದ್ದಾಳೆ. ಅತ್ಯಂತ ದುಃಖದಾಯಕ ವಿಚಾರವೆಂದರೆ ಮಗುವೂ ಕೂಡ ಅಸುನೀಗಿದೆ. ಅಸುನೀಗಿದ ಮಹಿಳೆಯನ್ನು ಸುಖೀರಾಣಿ ಅಹಿವಾರ್ ಎಂದು ಗುರುತಿಸಲಾಗಿದೆ. ಆಕೆ ಈ ಹಿಂದೆ ಹಡೆದಿದ್ದ ಎಂಟು ಮಕ್ಕಳು ಜೀವಂತವಾಗಿ ದ್ದರು. ಹಿಂದಿನ ಆರು ಸಂದರ್ಭಗಳಲ್ಲಿ ಆಕೆಗೆ ಗರ್ಭಪಾತ ವಾಗಿತ್ತು. ಮಹಿಳೆಯ ಕುಟುಂಬ ಸದಸ್ಯರು ಹೇಳಿದ ಪ್ರಕಾರ “ಪ್ರತಿಯೊಂದು ಗರ್ಭಧಾರಣೆಯ ಹಿಂದೆ ದೇವರ ಕೈವಾಡ ಇದೆ’ ಎಂದು ಹೇಳಿಕೊಂಡಿದ್ದಾರೆ.
ತಾಯಿ ಮತ್ತು ಮಗು ಅಸುನೀಗಿರುವ ಬಗ್ಗೆ ದಮೋಹ್ ಜಿಲ್ಲಾ ಆರೋಗ್ಯಾಧಿಕಾರಿ ಡಾ| ಸಂಗೀತಾ ತ್ರಿವೇದಿ ತನಿಖೆಗೆ ಆದೇಶಿಸಿದ್ದಾರೆ. ಜತೆಗೆ ಸ್ಥಳೀಯ ದಾದಿಯನ್ನು ಅಮಾನತು ಮಾಡಲು ಸೂಚಿಸಿದ್ದಾರೆ. ಜುಲೈನಲ್ಲಿ ಅಸುನೀಗಿದ ಮಹಿಳೆ ಆಸ್ಪತ್ರೆಗೆ ಬಂದು ವೈದ್ಯಕೀಯ ತಪಾಸಣೆಗೆ ಒಳಗಾಗಿದ್ದಳು. ಎಚ್ಚರಿಕೆಯಿಂದ ಅವರ ಆರೋಗ್ಯ ಸ್ಥಿತಿ ಗಮನಿಸಬೇಕೆಂದು ಸೂಚಿಸ ಲಾಗಿತ್ತು. ಇಷ್ಟಾಗಿದ್ದರೂ, ಕೂಡ ದಾದಿ ಮಾಹಿತಿ ನೀಡಿರಲಿಲ್ಲ. ಹೀಗಾಗಿ, ಅವರನ್ನು ಅಮಾನತು ಮಾಡಲು ಸೂಚಿಸಿದ್ದೇನೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.
ಭಟಿಯಾಘರ್ ಬ್ಲಾಕ್‌ನ ಪದಜಿಹ್ರಿ ಗ್ರಾಮಕ್ಕೆ ಸೇರಿದವಳಾಗಿರುವ ಕಾರ್ಮಿಕ ಮಹಿಳೆ ಕೆಲಸಕ್ಕಾಗಿ ಹಲವು ನಗರಗಳಿಗೆ ಭೇಟಿ ನೀಡಿದ್ದಳು. ಆಕೆ ರಕ್ತ ಹೀನತೆಯಿಂದ ಬಳಲುತ್ತಿದ್ದ ಆ ಮಹಿಳೆ, ಸರಕಾರಿ ಆಸ್ಪತ್ರೆಯಲ್ಲಿ ಅವಧಿಗಿಂತ ಮೊದಲೇ ಮಗುವಿಗೆ ಜನ್ಮ ನೀಡಿದಳು. ಹೀಗಾಗಿ, ಆಕೆಯ ಸ್ಥಿತಿ ಗಂಭೀರವಾಗಿತ್ತು ಎಂದು ಆರೋಗ್ಯಾಧಿಕಾರಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
Maharashtra poll ; ಕಣದಲ್ಲಿ ಉಳಿದಿದ್ದು 4,140 ಅಭ್ಯರ್ಥಿಗಳು
DMK ನಾಶವೇ ಹೊಸ ಪಕ್ಷದ ಉದ್ದೇಶ: ವಿಜಯ್ ವಿರುದ್ಧ ಸ್ಟಾಲಿನ್ ಕಿಡಿ
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
MUST WATCH
ಹೊಸ ಸೇರ್ಪಡೆ
Mangaluru: ರಾತ್ರಿ ಪ್ರಿಪೇಯ್ಡ್ ಆಟೋ ಇಲ್ಲದೆ ಪ್ರಯಾಣಿಕರ ಪರದಾಟ
Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಲಿದೆ ʼಕಂಗುವʼ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.