![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Feb 13, 2024, 1:05 AM IST
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರದ ಅವಧಿ ಯಲ್ಲಿ 9 ವರ್ಷಗಳಲ್ಲಿ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಶೇ. 115ರಷ್ಟು ಏರಿಕೆ ಯಾಗಿದೆ ಎಂದು ಸರಕಾರಿ ದಾಖಲೆಗಳಿಂದ ಮಾಹಿತಿ ಹೊರಬಿದ್ದಿದೆ. ಎಂಎಸ್‌ಪಿಗೆ ಸಂಬಂಧಿಸಿ ಕಾನೂನು ರೂಪಿಸುವಂತೆ ಆಗ್ರಹಿಸಿ ದಿಲ್ಲಿ ಚಲೋ ನಡೆಸಲು ರೈತರು ಮುಂದಾ ಗಿರುವಂತೆಯೇ ಈ ಮಾಹಿತಿ ಬಹಿರಂಗವಾಗಿದೆ.
2014-15ರ ಅವಧಿಯಲ್ಲಿ ಕನಿಷ್ಠ ಬೆಂಬಲ ಬೆಲೆಗೆ ಬೆಳೆಗಳನ್ನು ಖರೀದಿಸಲು ಕೇಂದ್ರ ಸರಕಾರ 1.06 ಲಕ್ಷ ಕೋಟಿ ರೂ. ಖರ್ಚು ಮಾಡಿದೆ. 2022-23ರಲ್ಲಿ ಇದಕ್ಕಾಗಿ 2.28 ಲಕ್ಷ ಕೋಟಿ ರೂ. ವೆಚ್ಚ ಮಾಡಿದೆ. 2014-15ಕ್ಕೆ ಹೋಲಿಸಿದರೆ 2022-23ರಲ್ಲಿ ಶೇ. 115ರಷ್ಟು ಏರಿಕೆ ಯಾಗಿದೆ. 2014-15ರಲ್ಲಿ 761.40 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯಗಳನ್ನು ಕೇಂದ್ರ ಸಂಗ್ರಹಿಸಿದ್ದು, ಇದು 2022-23ರಲ್ಲಿ 1062.69 ಲಕ್ಷ ಮೆಟ್ರಿಕ್ ಟನ್‌ಗೆ ಏರಿಕೆಯಾಗಿದೆ.
ಪ್ರಸ್ತುತ ಮುಂದಿನ 5 ವರ್ಷಗಳ ವರೆಗೆ ದೀರ್ಘಾವಧಿಯ ಎಂಎಸ್‌ಪಿ ನೀತಿ ರೂಪಿಸುವ ಪ್ರಸ್ತಾವ ಕೇಂದ್ರ ಕೃಷಿ ಸಚಿವಾಲಯದ ಮುಂದೆ ಇಲ್ಲ ಎಂದು ಸಂಸತ್ತಿಗೆ ಫೆ. 6ರಂದು ನೀಡಿದ ಲಿಖೀತ ಉತ್ತರದಲ್ಲಿ ಕೇಂದ್ರ ತಿಳಿಸಿದೆ.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.