ಲಾಕ್‌ಡೌನ್ ಸಮಯದಲ್ಲಿ 1 ಗಂಟೆಗೆ 90 ಕೋಟಿ ರೂ. ಗಳಿಸಿದ ಮುಖೇಶ್ ಅಂಬಾನಿ!
Team Udayavani, Sep 29, 2020, 5:32 PM IST
ಮಣಿಪಾಲ: ಮುಖೇಶ್ ಅಂಬಾನಿ ಕಳೆದ 6 ತಿಂಗಳಿಂದ ಪ್ರತಿ ಗಂಟೆಗೆ 90 ಕೋಟಿ ರೂ. ಗಳಿಸುತ್ತಿದ್ದಾರಂತೆ. ಅದೂ ಕೋವಿಡ್ ತಂದೊಡ್ಡಿದ ಸಮಸ್ಯೆಗಳ ಕಾರಣದಿಂದಾಗಿ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಳ್ಳುತ್ತಿರುವ ಈ ಸಮಯದಲ್ಲಿ ಈ ಸುದ್ದಿ ಸಹಜವಾಗಿ ಆಶ್ಚರ್ಯ ಉಂಟುಮಾಡಿದೆ.
ಈ ಮಾಹಿತಿಯನ್ನು ಹುರುನ್ ಇಂಡಿಯಾ ಮತ್ತು ಐಐಎಓಎಲ್ ವೆಲ್ತ್ ಮ್ಯಾನೇಜ್ಮೆಂಟ್ ಲಿಮಿಟೆಡ್ ತಮ್ಮ ವರದಿಯಲ್ಲಿ ನೀಡಿದೆ. ಇಂದು ಐಐಎಫ್ಎಲ್ ವೆಲ್ತ್ ಹುರುನ್ ಇಂಡಿಯಾ ರಿಚ್ ಲಿಸ್ಟ್-2020ರ ಒಂಬತ್ತನೇ ಲಿಸ್ಟ್ ಬಿಡುಗಡೆಯಾಗಿದೆ. 2020ರ ಆಗಸ್ಟ್ 31ರ ವೇಳೆಗೆ 1,000 ಕೋಟಿ ಅಥವ ಅದಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಭಾರತದ ಶ್ರೀಮಂತ ಜನರು ಈ ಪಟ್ಟಿಗೆ ಸೇರುತ್ತಾರೆ.
ಅಂಬಾನಿ ಸತತ 9ನೇ ವರ್ಷಕ್ಕೆ ಪ್ರಥಮ ಸ್ಥಾನ
ಈ ಪಟ್ಟಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಸತತ 9ನೇ ವರ್ಷವೂ ಅಗ್ರ ಸ್ಥಾನದಲ್ಲಿದ್ದಾರೆ. ವರದಿಯ ಪ್ರಕಾರ ಮುಖೇಶ್ ಅಂಬಾನಿಯ ಒಟ್ಟು ಆದಾಯ 6,58,400 ಕೋಟಿ ರೂಪಾಯಿ. ಕಳೆದ 12 ತಿಂಗಳಲ್ಲಿ ಅವರ ಒಟ್ಟು ಸಂಪತ್ತು ಶೇ. 73ರಷ್ಟು ವೃದ್ಧಿಯಾಗಿದೆಯಂತೆ. ಈ ವರದಿಯಲ್ಲಿ 828 ಭಾರತೀಯರು ಸೇರಿದ್ದಾರೆ.
ವರದಿಯ ಪ್ರಕಾರ 63 ವರ್ಷದ ಅಂಬಾನಿ ಲಾಕ್‌ಡೌನ್ ಸಮಯದಲ್ಲಿ ಪ್ರತಿ ಗಂಟೆಗೆ 90 ಕೋಟಿ ರೂ. ಗಳಿಸಿದ್ದಾರೆ. ಅಂದರೆ ಮಾರ್ಚ್‌ನಿಂದ ಆಗಸ್ಟ್ ವರೆಗೆ. ಪ್ರಸ್ತುತ ಅಂಬಾನಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಮತ್ತು ವಿಶ್ವದ ನಾಲ್ಕನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ.
ಅಂಬಾನಿ ಬಳಿಕ ಹಿಂದೂಜಾ ಬ್ರದರ್ಸ್
ಲಂಡನ್ ಮೂಲದ ಹಿಂದೂಜಾ ಸಹೋದರರು (ಎಸ್‌ಪಿ ಹಿಂದೂಜಾ, ಅವರ ಮೂವರು ಸಹೋದರರು) 1,43,700 ಕೋಟಿ ರೂ. ಆಸ್ತಿಯೊಂದಿಗೆ ಎರಡನೇ ಸ್ಥಾನ ಪಡೆದಿದ್ದಾರೆ. ಅವರ ಒಟ್ಟು ಆಸ್ತಿ 1,43,700 ಕೋಟಿ ಎಂದು ಹೇಳಲಾಗಿದೆ. ಪಟ್ಟಿಯಲ್ಲಿ ಮೂರನೇ ಸ್ಥಾನ ಎಚ್‌ಸಿಎಲ್ ಸಂಸ್ಥಾಪಕ ಶಿವ ನಾಡರ್ ಇದ್ದು, ಅವರ ಆಸ್ತಿ 1,41,700 ಕೋಟಿ ರೂ.ಗಳು. ಅನಂತರದ ಸ್ಥಾನಗಳಲ್ಲಿ ಗೌತಮ್ ಅದಾನಿ ಮತ್ತು ಕುಟುಂಬ ನಾಲ್ಕನೇ ಸ್ಥಾನ ಮತ್ತು ಅಜೀಮ್ ಪ್ರೇಮ್‌ಜಿ ಐದನೇ ಸ್ಥಾನದಲ್ಲಿದ್ದಾರೆ.
ರಾಧಾಕಿಶನ್ ದಮಾನಿ ಅವರಿಗೆ ಸ್ಥಾನ
ಅವೆನ್ಯೂ ಸೂಪರ್ ಮಾರ್ಟ್‌ಗಳ ಸಂಸ್ಥಾಪಕ ರಾಧಾಕಿಶನ್ ದಮಾನಿ 2020ರ ಹುರುನ್ ಇಂಡಿಯಾ ಶ್ರೀಮಂತ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದ್ದಾರೆ. ಟಾಪ್ 10 ಪಟ್ಟಿಯಲ್ಲಿರುವ ಇತರ ಹೆಸರುಗಳಲ್ಲಿ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸೈರಸ್ ಎಸ್. ಪೂನವಾಲಾ, ಕೊಟಕ್ ಮಹೀಂದ್ರಾ ಬ್ಯಾಂಕಿನ ಉದಯ್ ಕೊಟಕ್, ಸನ್ ಫಾರ್ಮಾದ ದಿಲೀಪ್ ಶಾಂಘ್ವಿ ಮತ್ತು ಪಾಲ್ಲೊಂಜಿ ಗುಂಪಿನ ಸೈರಸ್ ಪಾಲೂಂಜಿ ಮಿಸ್ತ್ರಿ ಮತ್ತು ಶಪೂರ್ಜಿ ಪಲೋಂಜಿ ಮಿಸ್ತ್ರಿ ಸೇರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.