ಮುಕೇಶ್, ನೀತುಗೆ ಬೆದರಿಕೆ ಪತ್ರ
Team Udayavani, Feb 27, 2021, 6:50 AM IST
ಮುಂಬಯಿ: ದೈತ್ಯ ಉದ್ಯಮಿ ಮುಕೇಶ್ ಅಂಬಾನಿ ನಿವಾಸದ ಬಳಿ ಸ್ಫೋಟಕ ಸಾಮಗ್ರಿ ಹೊಂದಿದ್ದ ವಾಹನ ಪತ್ತೆ ಪ್ರಕರಣದ ತನಿಖೆ ಮುಂದುವರಿದಿದ್ದು ಹಲವಾರು ಕುತೂಹಲಕರ ವಿಚಾರಗಳು ಹೊರಬರುತ್ತಿವೆ. ಎಲ್ಲಕ್ಕಿಂತ ಮೊದಲಿಗೆ, ಕಾರಿನಲ್ಲಿ ಮುಕೇಶ್ ಅಂಬಾನಿ ಹಾಗೂ ನೀತು ಅಂಬಾನಿಯವರನ್ನು ಕುರಿತು ಬರೆಯ ಲಾಗಿರುವ ಬೆದರಿಕೆ ಪತ್ರವೊಂದು ದೊರಕಿದೆ. ಪತ್ರದಲ್ಲಿನ ಲೇಖನವನ್ನು ಕಂಪ್ಯೂಟರ್‌ನಲ್ಲಿ ಹಿಂದಿ ಭಾಷೆಯಲ್ಲಿ ಟೈಪ್ ಮಾಡಿ, ಅನಂತರ ಅದನ್ನು ಟ್ರಾನ್ಸ್ ಲಿಟರೇಷನ್‌ನ ಮೂಲಕ ಇಂಗ್ಲಿಷ್ ತರ್ಜುಮೆ ಮಾಡ ಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಪತ್ರದ ಸಾರಾಂಶವನ್ನು ಬಹಿರಂಗಪಡಿಸಿಲ್ಲ.
ಹೂಡಿ ಮಾದರಿ ಉಡುಪಿನ ಡ್ರೈವರ್: ಗುರುವಾರ ದಂದು, ಹೂಡಿ ಮಾದರಿಯ ಉಡುಪು (ತಲೆಗವಚ ಹೊಂದಿರುವ ಜರ್ಕಿನ್) ವ್ಯಕ್ತಿಯೊಬ್ಬ ಈ ಕಾರನ್ನು ತಂದು, ಮುಕೇಶ್ ನಿವಾಸ ಆ್ಯಂಟಾಲಿಯಾಕ್ಕೆ ಹತ್ತಿರದಲ್ಲೇ ಇರುವ ಕಾರ್ಮಿಚೆಲ್ ರಸ್ತೆಯಲ್ಲಿ ತಂದು ನಿಲ್ಲಿಸಿ, ಆತ ಕಾರಿನಲ್ಲೇ ಮಲಗಿ ಅನಂತರ ಕಾರಿನಿಂದ ಇಳಿದುಹೋಗಿರುವುದನ್ನು ಪೊಲೀಸರು ಸಿಸಿಟಿವಿ ಫೂಟೇಜ್‌ಗಳಿಂದ ಪತ್ತೆ ಹಚ್ಚಿದ್ದಾರೆ. ಇನ್ನು, ಈ ಕಾರು ಬೇರೆಯವರದ್ದಾಗಿದ್ದು, ಅದನ್ನು ಮುಂಬಯಿಯ ವಿಖ್ಖೊಲಿ ಎಂಬಲ್ಲಿಂದ ಕಳವು ಮಾಡಲಾಗಿತ್ತು. ನಂಬರ್ ಪ್ಲೇಟ್ ಬದಲಿಸಿ ತರಲಾಗಿದೆ. ಕಾರಿನ ಚಾಸಿಸ್ ಸಂಖ್ಯೆಯನ್ನು ಅಳಿಸಲು ವಿಫಲ ಯತ್ನ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ನಡುವೆ, ಕಾರಿನ ಮೂಲ ಮಾಲಕರನ್ನು ಪತ್ತೆ ಮಾಡಲಾಗಿದೆ.
ಸೇಮ್ ನಂಬರ್‌ಪ್ಲೇಟ್?: ನಂಬರ್‌ಪ್ಲೇಟ್ ವಿಚಾರದಲ್ಲೊಂದು ಟ್ವಿಸ್ಟ್ ಇದೆ. ಅನುಮಾನಾಸ್ಪದ ಕಾರಿಗೆ ಅಳವಡಿ ಸಲಾಗಿರುವ ನಂಬರ್‌ಪ್ಲೇಟ್‌ನ ಸಂಖ್ಯೆಗಳು, ಮುಕೇಶ್ ಅವರ ಭದ್ರತಾ ಸಿಬಂದಿಗಾಗಿ ನೀಡಲಾಗಿರುವ ಕಾರೊಂದರ ನಂಬರ್‌ಪ್ಲೇಟ್ ಸಂಖ್ಯೆಗೆ ಹೋಲುತ್ತವೆ! ಇದು ಮತ್ತೂಂದು ರೀತಿಯ ಕುತೂಹಲಕ್ಕೆ ಕಾರಣವಾಗಿದೆ.
ಮೈನಿಂಗ್ ಗ್ರೇಡ್‌ನ ಕಡ್ಡಿಗಳು: ತನಿಖೆ ಆರಂಭಿಸಿದಾಗ ಅದರಲ್ಲಿ 20 ಜಿಲೆಟಿನ್ ಕಡ್ಡಿಗಳು ಸಿಕ್ಕಿದ್ದಾಗಿ ವರದಿ ಯಾಗಿತ್ತು. ಶುಕ್ರವಾರ ತೇಲಿಬಂದ ಮಾಹಿತಿಗಳ ಪ್ರಕಾರ, ಆ ಜಿಲೆಟಿನ್ ಕಡ್ಡಿಗಳು ಮಿಲಿಟರಿ ಗ್ರೇಡ್ ಮಾದರಿಯವಲ್ಲ ಎಂಬುದು ಸ್ಪಷ್ಟವಾಗಿದೆ. ಆದರೆ ಅವು ಬಂಡೆಗಳನ್ನು ಸೀಳಲು ಬಳಸಲಾಗುವಂಥ ಅಥವಾ ಮೈನಿಂಗ್‌ಗೆ ಬಳಸುವಂಥ ಮಾದರಿಯವು ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.