5 ಕೋಟಿಯ ಕಾರಿನ ಒಡೆಯ ಪ್ರತೀಕ್ ಯಾದವ್ ಅನ್ನೋದೇನು ಗೊತ್ತಾ ?
Team Udayavani, Feb 9, 2017, 11:57 AM IST
ಲಕ್ನೋ : ಐದು ಕೋಟಿ ರೂ. ಬೆಲೆಯ ಲ್ಯಾಂಬೋರ್ಗಿನಿ ಕಾರಿನ ಒಡೆಯನಾಗಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರ ಎರಡನೇ ಪುತ್ರ ಪ್ರತೀಕ್ ಯಾದವ್, ತನ್ನ ಕಾರಿನ ಕುರಿತು ಅಪಪ್ರಚಾರ, ವಿವಾದ ಉಂಟಾಗಿರುವುದನ್ನು ಖಂಡಿಸಿದ್ದಾರೆ.
“ಸಾಲ ಪಡೆದು ನಾನು ಈ ಕಾರನ್ನು ಖರೀದಿಸಿದ್ದೇನೆ; ಅದಕ್ಕೆ ಸಂಬಂಧಪಟ್ಟ ಎಲ್ಲ ದಾಖಲೆಪತ್ರಗಳು ನನ್ನ ಬಳಿ ಇವೆ; ನನ್ನ ಬಳಿಕ ಇನ್‌ಕಂ ಟ್ಯಾಕ್ಸ್ ದಾಖಲೆ ಪತ್ರಗಳೂ ಇವೆ; ಹಾಗಿರುವಾಗಿ ಈ ಅನಗತ್ಯ ವಾದ-ವಿವಾದ, ಟೀಕೆಗಳು ಯಾಕೆ?’ ಎಂದು ಪ್ರತೀಕ್ ಯಾದವ್ ಪ್ರಶ್ನಿಸಿದ್ದಾರೆ.
“ನನಗೆ ನನ್ನದೇ ಆದ ಸ್ವಂತ ಉದ್ಯಮವಿದೆ; ನಾನು ರಿಯಲ್ ಎಸ್ಟೇಟ್‌ನಲ್ಲಿ ತೊಡಗಿಕೊಂಡಿದ್ದೇನೆ; ಹಾಗೆಯೇ ಜಿಮ್ ಒಂದನ್ನು ಕೂಡ ನಡೆಸುತ್ತಿದ್ದೇನೆ; ಇದೇ ಐದು ಕೋಟಿ ರೂ.ಗಳನ್ನು ನಾನು ಯಾವುದೇ ಸ್ಥಿರಾಸ್ತಿ ಮೇಲೆ ಹೂಡಿದ್ದರೆ ಯಾರೂ ನನ್ನನ್ನು ಪ್ರಶ್ನಿಸುತ್ತಿರಲಿಲ್ಲ’ ಎಂದು ಪ್ರತೀಕ್ ತನ್ನ ಟೀಕಾಕಾರರ ಮೇಲೆ ಕಿಡಿ ಕಾರಿದ್ದಾರೆ.
ಇದೇ ವೇಳೆ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ತನ್ನ ಪತ್ನಿ ಅಪರ್ಣಾ ಯಾದವ್ ಗೆಲ್ಲುವರೆಂಬ ವಿಶ್ವಾಸವನ್ನು ಕೂಡ ಪ್ರತೀಕ್ ವ್ಯಕ್ತಪಡಿಸಿದರು.
“ಲಕ್ನೋ ಕಂಟೋನ್‌ಮೆಂಟ್ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಅಪರ್ಣಾ ಗೆದ್ದೇ ಗೆಲ್ಲುತ್ತಾರೆ; ಆಕೆ ಸಾಕಷ್ಟು ಕ್ಷೇತ್ರ ಕಾರ್ಯ, ಸೇವೆ ಮಾಡಿದ್ದಾರೆ’ ಎಂದು ಪ್ರತೀಕ್ ಆಕೆಯ ಪರ ಬ್ಯಾಟಿಂಗ್ ನಡೆಸಿದರು.
ರಾಜ್ಯದಲ್ಲಿ ಸಮಾಜವಾದಿ ಮತ್ತು ಕಾಂಗ್ರೆಸ್ ಪಕ್ಷದ ನಡುವಿನ ಚುನಾವಣಾ ಮೈತ್ರಿಯನ್ನು ಸಮರ್ಥಿಸಿಕೊಂಡ ಪ್ರತೀಕ್, “ಈ ಮೈತ್ರಿಕೂಟ 250ಕ್ಕಿಂತ ಹೆಚ್ಚು ಅಥವಾ 300ರಷ್ಟು ಸೀಟುಗಳನ್ನು ಗೆದ್ದೇ ಗೆಲ್ಲುವುದು’ ಎಂದು ಹೇಳಿದರು.
ಪ್ರತೀಕ್ ಯಾದವ್‌ಗೆ ರಾಜಕಾರಣದಲ್ಲಿರುವ ಆಸಕ್ತಿ ಅಷ್ಟಕ್ಕಷ್ಟೇ; ಆತನ ಮನಸ್ಸು ನೆಟ್ಟಿರುವದು ವೈಭವೋಪೇತ ಮತ್ತು ಐಷಾರಾಮೀ ಜೀವನದಲ್ಲಿ ಮತ್ತು ಸುಖ ಭೋಗಗಳಲ್ಲಿ ಎಂಬ ಟೀಕೆ ಇದೆ. ಅಂದ ಹಾಗೆ ಪ್ರತೀಕ್ ಯುನಿವರ್ಸಿಟಿ ಆಫ್ ಲೀಡ್ಸ್ ನ ಪದವೀದರ; ಕುಟುಂಬದ ಅಪಾರ ಪ್ರಮಾಣದ ಆಸ್ತಿ ಪಾಸ್ತಿಯ ಉಸ್ತುವಾರಿ ಆತನದ್ದೇ !
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Election: ರಾಜ್ ಠಾಕ್ರೆ ಎಂಎನ್‌ಎಸ್ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!
Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್
Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ
Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Election: ರಾಜ್ ಠಾಕ್ರೆ ಎಂಎನ್‌ಎಸ್ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!
Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್
Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ
Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.