![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Nov 28, 2023, 1:58 PM IST
ಮುಂಬಯಿ: ರಸ್ತೆ ಅಪಘಾತದಲ್ಲಿ ತಲೆಗೆ ಏಟಾಗಿ 11 ತಿಂಗಳ ಮಗು ಮೃತಪಟ್ಟಿರುವ ದಾರುಣ ಘಟನೆ ಮುಂಬಯಿಯ ಭಾಯಂದರ್ ನಲ್ಲಿ ಸೋಮವಾರ ಸಂಜೆ(ನ.27 ರಂದು) ನಡೆದಿದೆ.
ಭಾಯಂದರ್‌ನ ಉತ್ತಾನ್ ರಸ್ತೆಯಲ್ಲಿರುವ ರಾಯ್ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಘಟನೆಯಲ್ಲಿ 11 ತಿಂಗಳ ದಕ್ಷ್ ಷಾ ಮೃತಪಟ್ಟಿದ್ದಾನೆ.
ಭಾನುವಾರ ದಕ್ಷ್ ಅವರ ತಾಯಿ ಜಿಗ್ನಾ ಅವರ ಹುಟ್ಟುಹಬ್ಬವಿತ್ತು. ಈ ಕಾರಣದಿಂದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲು ಕುಟುಂಬ ಬೈಕ್ ನಲ್ಲಿ ಗೊರೈ ಬೀಚ್‌ಗೆ ತೆರಳುತ್ತಿತ್ತು. ಮಗು ದಕ್ಷ್ ಮುಂದೆ ಟ್ಯಾಂಕರ್ ಬಳಿ ಕೂತಿದ್ದು, ಮಗುವಿನ ತಾಯಿ ಮತ್ತು ಅಕ್ಕ ಬೈಕ್ ನ ಹಿಂದೆ ಕೂತಿದ್ದರು.
ಹುಟ್ಟುಹಬ್ಬದ ಪ್ರಯುಕ್ತ ಬೀಚ್ ಗೆ ಹೋಗುತ್ತಿದ್ದ ಮಾರ್ಗದಲ್ಲಿ ಕೆಸರು ತುಂಬಿದ ಪರಿಣಾಮ ಬೈಕ್ ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ಕೆಳಗೆ ಬಿದ್ದಿದೆ. ಪರಿಣಾಮ ತಂದೆ, ತಾಯಿ ಸಣ್ಣಪುಟ್ಟ ಗಾಯಗಳಾಗಿವೆ. ಆದರೆ ಮುಂದೆ ಕೂತಿದ್ದ ದಕ್ಷ್ ತಲೆಗೆ ತೀವ್ರತರದ ಗಾಯವಾಗಿದೆ. ಪರಿಣಾಮ ಮಗು ತಕ್ಷಣ ಕೊನೆಯುಸಿರೆಳೆದಿದೆ ಎಂದು ವರದಿ ತಿಳಿಸಿದೆ.
ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಮರಣ ವರದಿ (ಎಡಿಆರ್) ದಾಖಲಾಗಿದೆ.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.