ಲೈಂಗಿಕ ಕಿರುಕುಳಕ್ಕೆ ಬೇಸತ್ತು ಮಲ ಮಗನನ್ನು ಕೊಲ್ಲಿಸಿದ ತಾಯಿ
Team Udayavani, Sep 19, 2017, 4:16 PM IST
ಮುಂಬಯಿ : ತನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಮಲ ಮಗನನ್ನು 50,000 ರೂ. ಸುಪಾರಿ ಕೊಟ್ಟು ಕೊಲ್ಲಿಸಿದ ಆರೋಪದ ಮೇಲೆ 55 ವರ್ಷ ಪ್ರಾಯದ ಮಹಿಳೆಯನ್ನು ಮುಂಬಯಿಯ ಭಯಾಂದರ್ ಪಶ್ಚಿಮದಲ್ಲಿ ಪೊಲೀಸರು ಬಂಧಿಸಿದ್ದಾರೆ.
ವರದಿಗಳ ಪ್ರಕಾರ ಮಹಿಳೆಯ ಮಗ ರಾಮಚರಣ್ ಎಂಬಾತನು ಮಾದಕ ದ್ರವ್ಯ ವ್ಯಸನಿಯಾಗಿದ್ದು ಕಳೆದ ಆರು ತಿಂಗಳಿಂದ ತನ್ನ ಮಲ ತಾಯಿ ರಜನಿ ಎಂಬಾಕೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತ ರಜನಿ,ರಾಮಚರಣ್‌ನನ್ನು ಕೊಲ್ಲುವಂತೆ ಹಿರಿಯ ಪುತ್ರ ಸೀತಾರಾಮನನ್ನು ಕೇಳಿಕೊಂಡಳು.
ಟೈಮ್ಸ್ ಆಫ್ ಇಂಡಿಯಾ ಪ್ರಕಟಿಸಿರುವ ವರದಿಯ ಪ್ರಕಾರ ಕಳೆದ ಆಗಸ್ಟ್ 21ರಂದು ಪೊಲೀಸರಿಗೆ ಕುತ್ತಿಗೆಯಲ್ಲಿ ಇರಿತದ ಗಾಯಗಳಿದ್ದ ರಾಮಚರಣನ ಶವ ಪತ್ತೆಯಾಯಿತು. ತನಿಖೆ ಆರಂಭಿಸಿದ ಪೊಲೀಸರಿಗೆ ಆತನ ಶವದ ಕೈಯಲ್ಲಿ “ರಾಮಚರಣ್’ ಮತ್ತು “ರಜನಿ’ ಎಂದು ಟಟ್ಟೂ ಮಾಡಲ್ಪಟ್ಟ ಬರಹಗಳು ಕಂಡು ಬಂದವು.
ಇದನ್ನು ಅನುಸರಿಸಿ ಪೊಲೀಸರು ನವೀ ಮುಂಬಯಿ, ಮುಂಬಯಿ, ಥಾಣೆ, ಪಾಲಗಢ ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳಲ್ಲಿ ಮೃತ ರಾಮಚರಣನ ಫೋಟೋಗಳನ್ನು ಬಿಡುಗಡೆ ಮಾಡಿದರು.
ಸೆ.14ರಂದು ಭಯಾಂದರ್ ಪೊಲೀಸ್ ಠಾಣಗೆ ಭೇಟಿಕೊಟ್ಟ ಸುನೀತಾ ಶರ್ಮಾ ಎಂಬಾಕೆ ಫೋಟೋ ಕಂಡು ರಾಮಚರಣ್ ನನ್ನು ಗುರುತಿಸಿದಳು. ಪರಿಣಾಮವಾಗಿ ಪೊಲೀಸರು ರಜನಿಯ ಮನೆಗೆ ತೆರಳಿ ಆಕೆಯನ್ನು ಪ್ರಶ್ನಿಸಿದರು.
ಆರಂಭದಲ್ಲಿ ಆಕೆ “ಆ.19ರಂದು ಮನೆ ಬಿಟ್ಟು ಹೋಗಿದ್ದ ರಾಮಚರಣ್ ಬಗ್ಗೆ ನಮಗೆ ಈ ತನಕ ಯಾವುದೇ ಮಾಹಿತಿ ಇಲ್ಲ’ ಎಂದು ಹೇಳಿದಳು. ಆದರೆ ಪೊಲೀಸರು ತೀವ್ರವಾಗಿ ಪ್ರಶ್ನಿಸಿದಾಗ ಆಕೆ, ಲೈಂಗಿಕ ಕಿರುಕುಳದಿಂದ ಬೇಸತ್ತು, ರಾಮಚರಣ್‌ನನ್ನು ಕೊಲ್ಲಿಸಿದ್ದು ತಾನೇ ಎಂದು ಒಪ್ಪಿಕೊಂಡಳು.
ರಾಮಚರಣ್ ಕೊಲೆ ಕೃತ್ಯಕ್ಕೆ ಸಂಬಂಧಿಸಿ ಪೊಲೀಸರು ರಜನಿ, ಆಕೆಯ ಪುತ್ರ ಸೀತಾರಾಮ ಮತ್ತು ಕೊಲೆಗೆ ನೆರವಾದ ಆತನ ಇಬ್ಬರು ಸ್ನೇಹಿತರಾದ ರಾಕೇಶ್ ಯಾದವ್ ಮತ್ತು ಕೇಶವ್ ಯಾದವ್ ಅವರನ್ನು ಬಂಧಿಸಿದ್ದು ಸೆ.23ರ ತನಕ ಇವರನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
MUST WATCH
ಹೊಸ ಸೇರ್ಪಡೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Kollywood: ಬಹಿರಂಗ ಪತ್ರ ಬರೆದು ಧನುಷ್ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.