ಮುಂಬಯಿ-ಅಹಮದಾಬಾದ್ ರೈಲಿಗೆ ಕೋವಿಡ್ ಕಾಟ; ವೇಗ ಕಳೆದುಕೊಂಡ ಬುಲೆಟ್ ರೈಲು
ಎಂಟು ವರ್ಷ ವಿಳಂಬ; ಲಾಕ್‌ಡೌನ್‌ನಿಂದ ತಾಂತ್ರಿಕ ಸಮಸ್ಯೆ, ಭೂ ಸ್ವಾಧೀನ ತಡ
Team Udayavani, Sep 6, 2020, 6:10 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಮುಂಬಯಿ- ಅಹಮ ದಾಬಾದ್ ನಡುವಣ ಬುಲೆಟ್ ರೈಲು ಯೋಜನೆ ಪೂರ್ಣಗೊಳ್ಳುವುದು 8 ವರ್ಷ ವಿಳಂಬವಾಗಲಿದೆ. ಇದಕ್ಕೆ ಕಾರಣ ಕೋವಿಡ್. ಲಾಕ್‌ಡೌನ್‌ನಿಂದಾಗಿ ಭೂಸ್ವಾಧೀನ ಪ್ರಕ್ರಿಯೆ ಕೂಡ ವಿಳಂಬವಾಗಿದೆ. ಅದಲ್ಲದೆ ಈ ಯೋಜನೆಗೆ ಅಂದಾಜಿಸಿದ್ದಕ್ಕಿಂತ ದುಬಾರಿ ವೆಚ್ಚ ತಗಲಲಿದೆ. ಇದೆಲ್ಲದರ ಪರಿಣಾಮವಾಗಿ 508 ಕಿ.ಮೀ. ದೂರದ ಮುಂಬಯಿ-ಅಹಮದಾಬಾದ್ ಅತೀ ವೇಗದ ಕಾರಿಡಾರ್ ಯೋಜನೆಯು 2028ರ ಅಕ್ಟೋಬರ್‌ಗಷ್ಟೇ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ರೈಲ್ವೇ ನಿಗಮದ ಮೂಲಗಳ ಮಾಹಿತಿಯನ್ನು ಆಧರಿಸಿ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.
ಜಪಾನ್ ಕಂಪೆನಿಗಳ ಜತೆ ಚರ್ಚೆ ನಡೆಸಿ, ಈ ಯೋಜನೆ ಪೂರ್ಣಗೊಳಿಸುವ ಬಗ್ಗೆ ಪರಿಷ್ಕೃತ ಸಮಯ ನಿಗದಿಪಡಿಸಲಾಗುವುದು. ಪ್ರಕ್ರಿಯೆ ಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಿದರೆ ಬೇಗ ಯೋಜನೆ ಯನ್ನು ಪೂರ್ಣಗೊಳಿಸಬಹುದು. ಆದರೆ ಕೊರೊನಾ ಬಿಕ್ಕಟ್ಟಿನಂಥ ತಾಂತ್ರಿಕ ಸಮಸ್ಯೆ ಗಳು ಇದ್ದು, ನಿಗದಿತ ಸಮಯದಲ್ಲಿ ಯೋಜನೆ ಮುಗಿಸಲು ಆಗದು ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ.
508 ಕಿ.ಮೀ. ಭೂಗತ ಮಾರ್ಗ!
508 ಕಿ.ಮೀ. ಪೈಕಿ 21 ಕಿ.ಮೀ. ಸಂಪರ್ಕ ಜಾಲವನ್ನು ಭೂಗತವಾಗಿ ನಿರ್ಮಿಸಬೇಕಾಗಿದೆ. ಇದರಲ್ಲಿ 5 ಕಿ.ಮೀ. ಜಾಲವು ಮುಂಬಯಿಯ ಸಮುದ್ರದ ಕೆಳಗೆ ಹಾದು ಹೋಗಬೇಕಿದೆ. ಈ ಕ್ಲಿಷ್ಟಕರ 21 ಕಿ.ಮೀ. ಸಂಪರ್ಕ ಜಾಲವನ್ನು ನಿರ್ಮಿಸಲು 60 ತಿಂಗಳು ಸಮಯ ಬೇಕಾಗುತ್ತದೆ. ಈ ಕುರಿತು ಜಪಾನ್ ಕಂಪೆನಿ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಅಲ್ಲದೇ ಜಪಾನ್ ಕಂಪೆನಿಗಳು ಕಾರ್ಯಗತಗೊಳಿಸಬೇಕಿದ್ದ 11 ಟೆಂಡರ್‌ಗಳಲ್ಲಿ ಯೋಜನಾ ಸಲಹೆಗಾರರು ಅಂದಾಜಿಸಿದ್ದಕ್ಕಿಂತ ಶೇ.90ರಷ್ಟು ಹೆಚ್ಚು ಬೆಲೆಯನ್ನು ನಮೂದಿಸಲಾಗಿದೆ. ಇಷ್ಟು ದೊಡ್ಡ ಪ್ರಮಾಣದ ಮೊತ್ತವನ್ನು ನೀಡಲು ಭಾರತ ನಿರಾಕರಿಸಿದೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
MUST WATCH
ಹೊಸ ಸೇರ್ಪಡೆ
IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್ ಹೂಡಾ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.