Mumbai ದೋಣಿ ದುರಂತ: ಮತ್ತೂಂದು ಮೃತದೇಹ ಪತ್ತೆ
Team Udayavani, Dec 20, 2024, 9:58 AM IST
ಮುಂಬಯಿ: ಎಲಿಫೆಂಟಾ ದ್ವೀಪಕ್ಕೆ ಹೊರ ಟಿದ್ದ ದೋಣಿಯೊಂದು ಗೇಟ್ವೇ ಆಫ್ ಇಂಡಿಯಾದಲ್ಲಿ ಮಗು ಚಿದ ಪ್ರಕರಣದಲ್ಲಿ ಗುರುವಾರ ಇನ್ನೂ ಒಂದು ಮೃತದೇಹ ಪತ್ತೆಯಾ ಗಿದೆ. ಹೀಗಾಗಿ, ಅಸುನೀಗಿದವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಇನ್ನೂ ಒಬ್ಬರ ಪತ್ತೆಗಾಗಿ ಬಿರುಸಿನ ಕಾರ್ಯಾಚರಣೆ ನಡೆಸಲಾಗುತ್ತಿದೆ. ಅದಕ್ಕಾಗಿ ಮತ್ತಷ್ಟು ಬೋಟ್ಗಳು ಹಾಗೂ ನೌಕಾಪಡೆಯ ಹೆಲಿಕಾಪ್ಟರ್ ಅನ್ನು ನಿಯೋಜನೆ ಮಾಡಲಾಗಿದೆ.
ನೌಕಾಪಡೆಯಿಂದ ತನಿಖೆ: ಘಟನೆಯ ಬಗ್ಗೆ ತನಿಖೆ ನಡೆಸಲು ತೀರ್ಮಾನಿ ಸಿದ್ದು, ಅದಕ್ಕಾಗಿ ಪ್ರತ್ಯೇಕ ವಿಚಾರಣ ಸಮಿತಿ ಸ್ಥಾಪಿಸಲಾ ಗಿದೆ ಎಂದು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ.ತ್ರಿಪಾಠಿ ತಿಳಿಸಿದ್ದಾರೆ.
ಜತೆಗೆ ದುರಂತದಿಂದ ಅಸುನೀಗಿದ ವರಿಗೆ ಸಂತಾಪವನ್ನೂ ಅವರು ವ್ಯಕ್ತಪಡಿಸಿದ್ದಾರೆ. ಜತೆಗೆ ಗೇಟ್ ವೇ ಆಫ್ ಇಂಡಿಯಾದಿಂದ ದೋಣಿಯಲ್ಲಿ ಸಂಚರಿಸುವ ಪ್ರಯಾಣಿಕರು ಇನ್ನು ಮುಂದೆ ರಕ್ಷಣ ಜಾಕೆಟ್ ಧರಿಸುವುದನ್ನು ಅಲ್ಲಿನ ಆಡಳಿತ ಕಡ್ಡಾಯಗೊಳಿಸಿದೆ. ಇದೇ ವೇಳೆ, ದೋಣಿಯಲ್ಲಿದ್ದ ಎಲ್ಲರಿಗೂ ರಕ್ಷಣ ಜಾಕೆಟ್ ನೀಡಲಾಗಿರಲಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.