ಮುಂಬಯಿ: ಬಾಲಕಿಯ ಮೇಲೆ ಕ್ರೂರ ಬಲಾತ್ಕಾರ
Team Udayavani, Sep 13, 2021, 6:50 AM IST
ಚೆನ್ನೈ/ಮುಂಬಯಿ: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಉಲ್ಲಾಸ್‌ನಗರದಲ್ಲಿ 15 ವರ್ಷ ಬಾಲಕಿಯ ಮೇಲೆ ಕಿಡಿಗೇಡಿಗಳು ಅತ್ಯಾಚಾರ ಎಸಗಿದ್ದಾರೆ. ಜತೆಗೆ ಆಕೆಯ ತಲೆಯ ಮೇಲೆ ಸುತ್ತಿಗೆಯಲ್ಲಿ ಏಟು ಹಾಕಿದ ಕ್ರೂರ ಘಟನೆ ನಡೆದಿದೆ.
ಮುಂಬಯಿಯಲ್ಲಿ ನಿರ್ಭಯಾ ಮಾದರಿಯಲ್ಲಿ ಅತ್ಯಾಚಾರ ಘಟನೆ ನಡೆದ ಬೆನ್ನಲ್ಲೇ ಈ ಕುಕೃತ್ಯ ನಡೆದಿದೆ.
ಉಲ್ಲಾಸ್‌ನಗರ ಘಟನೆಗೆ ಸಂಬಂಧಿಸಿದಂತೆ ಕೂಡಲೇ ಕಾರ್ಯಾಚರಣೆ ನಡೆಸಿದ ಪೊಲೀಸರು ಶ್ರೀಕಾಂತ ಗಾಯಕ್ವಾಡ್ ಎಂಬಾತನನ್ನು ಬಂಧಿಸಲಾಗಿದೆ ಎಂದು ರೈಲ್ವೇ ಪೊಲೀಸರು ರವಿವಾರ ತಿಳಿಸಿದ್ದಾರೆ. ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿತ್ತು. ಶಿರ್ಡಿಯಿಂದ ಉಲ್ಲಾಸ್‌ನಗರಕ್ಕೆ ರೈಲಿನಲ್ಲಿ ಆಗಮಿಸಿದ್ದ ಬಾಲಕಿ ಸ್ಕೈವಾಕ್‌ನಲ್ಲಿ ಇಬ್ಬರು ಸ್ನೇಹಿತೆಯರ ಜತೆ ನಡೆದು ಕೊಂಡು ಹೋಗುತ್ತಿದ್ದಳು. ಈ ಸಂದರ್ಭದಲ್ಲಿ ಶ್ರೀಕಾಂತ ಗಾಯಕ್ವಾಡ್ ಆಕೆ ಧರಿಸಿದ್ದ ಶಿರವಸ್ತ್ರ ತೆಗೆದಿದ್ದಾನೆ. ಅನಂತರ ಸುತ್ತಿಗೆಯಿಂದ ಏಟು ಹಾಕಿ, ಆಕೆಯ ಸ್ನೇಹಿತರನ್ನು ಬೆದರಿಸಿದ್ದಾನೆ. ಅನಂತರ ರೈಲ್ವೇ ನಿಲ್ದಾಣದ ಬಳಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಸ್ಥಳದಿಂದ ಬಾಲಕಿ ಪರಾರಿಯಾಗಲು ಯತ್ನಿಸಿದಾಗ ಆಕೆಯನ್ನು ಥಳಿಸಿದ್ದಾನೆ. ಇದರ ಹೊರತಾಗಿಯೂ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾಳೆ. ಆಕೆಯ ತಲೆಗೆ ಗಾಯಗಳಾಗಿದ್ದು, ಉಲ್ಲಾಸ್‌ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಪ್ರಕರಣದ ವಿರುದ್ಧ ಕಲ್ಯಾಣ್ ರೈಲ್ವೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮತ್ತೂಂದೆಡೆ, ಮುಂಬಯಿಯಲ್ಲಿ ಸಾಮೂಹಿಕ ಅತ್ಯಾ ಚಾರಕ್ಕೊಳಗಾಗಿ ಬಲಿಯಾದ 34 ವರ್ಷದ ಮಹಿಳೆಯ ಕುಟುಂಬ ಸದಸ್ಯರನ್ನು ರವಿವಾರ ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯು)ದ ತಂಡ ಭೇಟಿಯಾಗಿದೆ.
ಕೇಸು ದಾಖಲಿಸದ ಪೊಲೀಸರು :
ರೈಲ್ವೇ ಪೊಲೀಸ್ ಆಯುಕ್ತ ಖಾಸಿರ್ ಖಾಲಿದ್ ನೀಡಿದ ಮಾಹಿತಿ ಪ್ರಕಾರ ಥಾಣೆಯ ಎರಡು ಠಾಣಾ ವ್ಯಾಪ್ತಿಯಲ್ಲಿ ಅತ್ಯಾಚಾರ ಪ್ರಕರಣದ ಬಗ್ಗೆ ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ್ದವು. ಘಟನೆ ನಡೆದ ಪ್ರದೇಶ ಯಾವ ಠಾಣೆಯ ವ್ಯಾಪ್ತಿಗೆ ಬರುತ್ತದೆ ಎಂಬ ಬಗ್ಗೆ ಗೊಂದಲ ಇದ್ದುದರಿಂದ ಈ ರೀತಿಯಾಗಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ತನಿಖೆ ನಡೆಸುವುದಾಗಿ ಅವರು ಹೇಳಿದ್ದಾರೆ.
ಚೆನ್ನೈಯಲ್ಲಿ ಅತ್ಯಾಚಾರ :
ಇದೇ ವೇಳೆ ತಮಿಳುನಾಡು ರಾಜಧಾನಿ ಚೆನ್ನೈಯಲ್ಲಿ ನಾಲ್ವರು ಕಿಡಿಗೇಡಿಗಳು 20 ವರ್ಷದ ಯುವತಿಯ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಮೊಬೈಲ್ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಗೆ ಗುಣಶೀಲನ್ ಎಂಬಾತನ ಪರಿಚಯ ಉಂಟಾಗಿತ್ತು. ಆಕೆಗೆ ಮಾದಕ ಪೇಯ ನೀಡಿ ಕಾರ್‌ನಲ್ಲಿಯೇ ಅತ್ಯಾಚಾರವೆಸಗಿದ್ದಾರೆ. ಪ್ರಜ್ಞೆ ಬಂದಾಗ ಆಕೆ ಕೂಗಾಡುತ್ತಾ ಕಾರಿನ ಗಾಜನ್ನು ಒಡೆಯಲು ಯತ್ನಿಸುತ್ತಿದ್ದಾಗ, ಶಬ್ದ ಕೇಳಿ ಸ್ಥಳೀಯರು ಅಲ್ಲಿಗೆ ಧಾವಿಸಿದ್ದಾರೆ. ಕೂಡಲೇ ಕಾರು ಸ್ಟಾರ್ಟ್ ಮಾಡಿ ಆರೋಪಿಗಳು ಪರಾರಿಯಾಗಿದ್ದಾರೆ. ದಾರಿ ಮಧ್ಯೆ ಚೆನ್ನೈ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಯುವತಿಯನ್ನು ಕಾರಿನಿಂದ ಕೆಳಕ್ಕೆಸೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
MUST WATCH
ಹೊಸ ಸೇರ್ಪಡೆ
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ
Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ
J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್
Mangaluru: ಪಿಲಿಕುಳ ಮೃಗಾಲಯಕ್ಕೆ “ಏಷ್ಯಾಟಿಕ್ ಗಂಡು ಸಿಂಹ’ ಆಗಮನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.