Mumbai; ಕಳ್ಳನ ಬಗ್ಗೆ ಬೆಕ್ಕು ಎಚ್ಚರಿಸಿದರೂ 6 ಸಾವಿರ ಕದ್ದು ಪರಾರಿ!

ಸಿನೆಮಾ ನಿರ್ದೇಶಕಿ ಮನೆಯಲ್ಲಿ ಘಟನೆ

Team Udayavani, Aug 28, 2024, 6:20 AM IST

Mumbai; Even though the cat warned about the thief, 6,000 was stolen and escaped!

ಮುಂಬಯಿ: ಸಾಮಾನ್ಯವಾಗಿ ಮನೆಯನ್ನು ಶ್ವಾನಗಳು ಕಾವಲು ಕಾಯುವುದನ್ನು ನೋಡಿದ್ದೇವೆ. ಆದರೆ ಮಹಾರಾಷ್ಟ್ರದ ಅಂಧೇರಿಯಲ್ಲಿ ಸಿನೆಮಾ ನಿರ್ದೇಶಕಿಯೊಬ್ಬರ ಮನೆಗೆ ಕನ್ನ ಹಾಕಲು ಬಂದಿದ್ದ ಕಳ್ಳನ ಬಗ್ಗೆ ಬೆಕ್ಕೊಂದು ಸುಳಿವು ನೀಡಿ ಎಚ್ಚರಿಸಿರುವ ಘಟನೆ ನಡೆದಿದೆ.

ಮುಂಬಯಿಯ ಅಂಧೇರಿಯ ಅಪಾರ್ಟ್‌ ಮೆಂಟ್‌ ಒಂದರಲ್ಲಿ ನಿರ್ದೇಶಕಿ ಸ್ವಪ್ನಾ ಜೋಶಿ ವಾಸವಿದ್ದಾರೆ. 6ನೇ ಅಂತಸ್ತಿನಲ್ಲಿರುವ ಅವರ ಮನೆಗೆ ಪೈಪ್‌ ಹಿಡಿದು ಹತ್ತಿಬಂದ ಕಳ್ಳ ಸ್ಪೈಡಿಂಗ್‌ ಕಿಟಕಿ ಮೂಲಕ ಪ್ರವೇಶಿಸಿದ್ದಾನೆ. ಸ್ವಪ್ನಾರ ಮಗಳು ಮತ್ತು ಅಳಿಯ ದೇವನ್‌ ಅವರ ಕೊಠಡಿಗೆ ಇಣುಕಿ ಪರ್ಸ್‌ನಿಂದ 6 ಸಾವಿರ ರೂ.ಗಳನ್ನು ಕದ್ದಿದ್ದಾನೆ. ಇದನ್ನೆಲ್ಲ ಗಮನಿಸುತ್ತಿದ್ದ ಆ ಮನೆಯ ಸಾಕು ಬೆಕ್ಕು, ದೇವನ್‌ ಅವರು ನಿದ್ರಿಸುತ್ತಿದ್ದ ಕೊಠಡಿಗೆ ತೆರಳಿ, ಅವರ ಕಾಲ ಮೇಲೆ ಜಿಗಿದಿದೆ. ಇದರಿಂದ ಎಚ್ಚರಗೊಂಡ ದೇವನ್‌ ಕಳ್ಳ ಎಂದು ಕೂಗಿದ್ದಾರೆ. ಕಳ್ಳನನ್ನು ಹಿಡಿಯುವ ಪ್ರಯತ್ನದ ನಡುವೆಯೇ ಆತ ಪರಾರಿಯಾಗಿದ್ದಾನೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ನಿರ್ದೇಶಕಿ ಸ್ವಪ್ನಾ ಅವರು ಕಳ್ಳನ ಮನೆ ಪ್ರವೇಶದಿಂದ ಆಘಾತಕ್ಕೆ ಒಳಗಾಗಿರುವುದಾಗಿ ಹೇಳಿದ್ದಾರೆ.

ಟಾಪ್ ನ್ಯೂಸ್

Veena-goegre

Viral Disease: ಕೇರಳದಲ್ಲಿ ಎಂ ಫಾಕ್ಸ್‌ ದೃಢ: ಆರೋಗ್ಯ ಸಚಿವೆ ವೀಣಾ ಜಾರ್ಜ್‌

Kadri-park

Mangaluru: ಕದ್ರಿ ಪಾರ್ಕ್‌ನಲ್ಲಿ ರಾಜ್ಯದ ಎರಡನೇ ಅತಿ ಎತ್ತರದ ರಾಷ್ಟ್ರ ಧ್ವಜಸ್ತಂಭ ಅನಾವರಣ

Puspa-Amar

Guarantee: ಅನುಷ್ಠಾನಕ್ಕೆ ಗ್ರಾಮ ಪಂಚಾಯಿತಿಯಲ್ಲೂ ನೋಡಲ್‌ ಅಧಿಕಾರಿ: ಪುಷ್ಪಾ ಅಮರನಾಥ್‌

MU-Univerasity

Virtual Meeting: ಮಂಗಳೂರು ವಿಶ್ವವಿದ್ಯಾನಿಲಯ ಶೈಕ್ಷಣಿಕ ಮಂಡಳಿ ಸಭೆ

Kapu2

ISPRL Programme: ಪಾದೂರು ಜಲ್ಲಿ ಕ್ರಷರ್‌: ಸರ್ವೆಗೆ ಬಂದ ಅಧಿಕಾರಿಗಳಿಗೆ ತಡೆ

THIRU

MAHE University: ವಾಗ್ಶಾ ವಿದ್ಯಾರ್ಥಿಗೆ ವಿಶ್ವ ಪಾಕಶಾಲೆ ಶ್ರೇಷ್ಠತೆ ಗರಿ

Tarpana

Konkani Movie: “ತರ್ಪಣ’ ಚಲನಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶುಕ್ರಯಾನಕ್ಕೂ ಕೇಂದ್ರ ಸಂಪುಟ ಅನುಮೋದನೆ: ಚಂದ್ರ, ಮಂಗಳ ಯೋಜನೆ ಬಳಿಕ ಶುಕ್ರಯಾನಕ್ಕೆ ನೆರವು

ಶುಕ್ರಯಾನಕ್ಕೂ ಕೇಂದ್ರ ಸಂಪುಟ ಅನುಮೋದನೆ: ಚಂದ್ರ, ಮಂಗಳ ಯೋಜನೆ ಬಳಿಕ ಶುಕ್ರಯಾನಕ್ಕೆ ನೆರವು

Biotechnology: ಜೈವಿಕ ತಂತ್ರಜ್ಞಾನ ಬಲವರ್ಧನೆಗೆ ಬಯೋ ರೈಡ್‌: ಅಶ್ವಿ‌ನಿ ವೈಷ್ಣವ್‌

Biotechnology: ಜೈವಿಕ ತಂತ್ರಜ್ಞಾನ ಬಲವರ್ಧನೆಗೆ ಬಯೋ ರೈಡ್‌: ಅಶ್ವಿ‌ನಿ ವೈಷ್ಣವ್‌

gayakwad

ಕಾಂಗ್ರೆಸ್ ನಾಯಿ ನಮ್ಮ ಕಾರ್ಯಕ್ರಮಕ್ಕೆ ಬಂದರೆ…: ಶಿವಸೇನೆ ಶಾಸಕನ ವಿವಾದಾತ್ಮಕ ಹೇಳಿಕೆ

Kharge (2)

One Nation, One Election ಅಸಂಭವ: ಕೇಂದ್ರ ಸಂಪುಟ ನಿರ್ಧಾರಕ್ಕೆ ಖರ್ಗೆ ವಿರೋಧ

1-congress

Rahul Gandhi ವಿರುದ್ಧ ಕೇಂದ್ರ ಸಚಿವ, ಬಿಜೆಪಿಗರ ಹೇಳಿಕೆ;ದೇಶದ ವಿವಿಧೆಡೆ ಕೈ ಪ್ರತಿಭಟನೆ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Veena-goegre

Viral Disease: ಕೇರಳದಲ್ಲಿ ಎಂ ಫಾಕ್ಸ್‌ ದೃಢ: ಆರೋಗ್ಯ ಸಚಿವೆ ವೀಣಾ ಜಾರ್ಜ್‌

Kadri-park

Mangaluru: ಕದ್ರಿ ಪಾರ್ಕ್‌ನಲ್ಲಿ ರಾಜ್ಯದ ಎರಡನೇ ಅತಿ ಎತ್ತರದ ರಾಷ್ಟ್ರ ಧ್ವಜಸ್ತಂಭ ಅನಾವರಣ

Puspa-Amar

Guarantee: ಅನುಷ್ಠಾನಕ್ಕೆ ಗ್ರಾಮ ಪಂಚಾಯಿತಿಯಲ್ಲೂ ನೋಡಲ್‌ ಅಧಿಕಾರಿ: ಪುಷ್ಪಾ ಅಮರನಾಥ್‌

MU-Univerasity

Virtual Meeting: ಮಂಗಳೂರು ವಿಶ್ವವಿದ್ಯಾನಿಲಯ ಶೈಕ್ಷಣಿಕ ಮಂಡಳಿ ಸಭೆ

Kapu2

ISPRL Programme: ಪಾದೂರು ಜಲ್ಲಿ ಕ್ರಷರ್‌: ಸರ್ವೆಗೆ ಬಂದ ಅಧಿಕಾರಿಗಳಿಗೆ ತಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.