ಮುಂಬಯಿ ಮಹಾಮಳೆಗೆ 4 ಸಾವು
Team Udayavani, Jun 26, 2018, 6:00 AM IST
ಮುಂಬಯಿ/ಕೋಲ್ಕತಾ: ಮಹಾರಾಷ್ಟ್ರ ರಾಜಧಾನಿ ಮುಂಬಯಿನಲ್ಲಿ ರವಿವಾರ ರಾತ್ರಿಯಿಂದ ಧಾರಾಕಾರ ಮಳೆಯಾಗಿದ್ದು, ವಾಣಿಜ್ಯ ನಗರಿಯ ಜನಜೀವನ ಅಸ್ತವ್ಯಸ್ತವಾಗಿದೆ. ಮಳೆ ಸಂಬಂಧಿ ದುರಂತಗಳಲ್ಲಿ ಇದುವರೆಗೆ 4 ಮಂದಿ ಅಸು ನೀಗಿದ್ದಾರೆ. ಹಲವೆಡೆ ಭೂಕುಸಿತ ಉಂಟಾಗಿದೆ. ರಸ್ತೆ, ರೈಲುಗಳ ಸಂಚಾರಕ್ಕೂ ವ್ಯತ್ಯಯ ಉಂಟಾಗಿದೆ. ಮುಂದಿನ 24 ಗಂಟೆಗಳಲ್ಲಿ ಮತ್ತು 27, 28ರಂದು ಮುಂಬಯಿ ಸಹಿತ ಉತ್ತರ ಕೊಂಕಣ ಪ್ರದೇಶದಲ್ಲಿ ಭಾರೀ ಮಳೆಯಾಗಲಿದೆ ಎಂಬ ಮುನ್ಸೂಚನೆಯನ್ನೂ ನೀಡಲಾಗಿದೆ.
ಮುಂಬಯಿನ ವಡಾಲಾದಲ್ಲಿರುವ ಆ್ಯಂಟುಪ್ ಹಿಲ್ ಪ್ರದೇಶದಲ್ಲಿ ಗಗನ ಚುಂಬಿ ಅಪಾರ್ಟ್‌ಮೆಂಟ್ ಸನಿಹದಲ್ಲಿ ಭೂಕುಸಿತ ಉಂಟಾಗಿ 15 ಕಾರುಗಳು ಮಣ್ಣಿನಲ್ಲಿ ಹೂತು ಹೋಗಿವೆ. ಅಲ್ಲಿರುವ 260ಕ್ಕೂ ಹೆಚ್ಚು ಮಂದಿಯನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಅಪಾರ್ಟ್‌ಮೆಂಟ್ ಬಿಲ್ಡರ್ ವಿರುದ್ಧ ಕೇಸು ದಾಖಲಿಸಿಕೊಳ್ಳಲಾಗಿದೆ. ಭಾರೀ ಮಳೆಯಿಂದಾಗಿ ಪಶ್ಚಿಮ ರೈಲ್ವೇ ವಿಭಾಗದಿಂದ ಹೊರಡುವ ಎಲ್ಲ ರೈಲುಗಳು ವಿಳಂಬವಾಗಿವೆ. ಸ್ಥಳೀಯ ರೈಲುಗಳ ಸಂಚಾರದಲ್ಲೂ ವ್ಯತ್ಯಯ ಉಂಟಾಗಿದೆ. ಹಲವು ವಿಮಾನಗಳ ಸಂಚಾರ ಕೂಡ ಅಸ್ತವ್ಯಸ್ತವಾಗಿದೆ. ಪೊವೈ ಕೆರೆ ತುಂಬಿ ಹೋಗಿದೆ.
ಕುಸಿದ ರಸ್ತೆ
ಮುಂಬಯಿನ ಗೋಲ್ ಮಸ್ಜಿದ್ ಪರಿಸರದಲ್ಲಿ ಮಳೆ, ಪ್ರವಾಹದ ರಭಸಕ್ಕೆ ರಸ್ತೆಯ ನಡುಭಾಗವೇ ಕುಸಿದು ಹೋಗಿದೆ. ಇದರ ಜತೆಗೆ ಮರೀನ್ ಲೈನ್ಸ್ ನಲ್ಲಿಯೂ ಮಳೆಯಬ್ಬರಕ್ಕೆ ರಸ್ತೆ ಕುಸಿದು ಹೋಗಿದೆ. ಬೃಹನ್ಮುಂಬಯಿ ವ್ಯಾಪ್ತಿಯಲ್ಲಿ 50ಕ್ಕೂ ಹೆಚ್ಚು ಬೆಸ್ಟ್ ಬಸ್‌ಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ರವಿವಾರ ಸಂಜೆ ದಕ್ಷಿಣ ಮುಂಬಯಿನ ಮೆಟ್ರೋ ಸಿನೆಮಾ ಪಕ್ಕದಲ್ಲಿ ಮರ ಬಿದ್ದ ಕಾರಣ ಇಬ್ಬರು ಅಸುನೀಗಿದ್ದಾರೆ.
ಪ. ಬಂಗಾಲ
ಪಶ್ಚಿಮ ಬಂಗಾಲದಲ್ಲೂ ಧಾರಾಕಾರ ಮಳೆಯಾಗಿದೆ. ಗುಡುಗು, ಸಿಡಿಲು ಸಹಿತ ಮಳೆ ಪ್ರಕೋಪಕ್ಕೆ ಒಟ್ಟು ಐವರು ಅಸು ನೀಗಿದ್ದಾರೆ.
ಗುಜರಾತ್
ಗುಜರಾತ್‌ನಲ್ಲಿ ಧಾರಾಕಾರ ಮಳೆಯಾಗಿದೆ. ವಲ್ಸಾಡ್, ಸೂರತ್ ಮತ್ತು ನವ್‌ಸಾರಿ ಜಿಲ್ಲೆಗಳಲ್ಲಿ 2 ದಿನಗಳಿಂದ ಮಳೆಯಾಗುತ್ತಿದೆ.
ಇನ್ನೂ 3 ದಿನ ಭಾರೀ ಮಳೆಯ ಎಚ್ಚರಿಕೆ
ಅತ್ಯಂತ ಹೆಚ್ಚಿನ ಮಳೆ
24 ಗಂಟೆಗಳಲ್ಲಿ ಮುಂಬಯಿನಲ್ಲಿ 231.4 ಮಿ.ಮೀ. ಮಳೆ ದಾಖಲಾಗಿದೆ. ಇದು ಪ್ರಸಕ್ತ ಋತುವಿನಲ್ಲಿ ದೇಶದ ವಾಣಿಜ್ಯ ನಗರಿಯಲ್ಲಿ ದಾಖಲಾಗಿರುವ ಮೊದಲ ಅತ್ಯಧಿಕ ಮಳೆ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್
Kochi airport; ಶಬರಿಮಲೆ ಭಕ್ತರಿಗೆ ಅನುಕೂಲವಾಗುವಂತೆ ವಿಶೇಷ ವ್ಯವಸ್ಥೆಗಳು
Maharashtra Election; ಫಡ್ನವಿಸ್ ಪತ್ನಿಯ ವಿರುದ್ಧ ಕನ್ಹಯ್ಯಾ ಕುಮಾರ್ ಹೇಳಿಕೆ
Modiji ಸಂವಿಧಾನವನ್ನು ಓದಲೇ ಇಲ್ಲ, ಹಾಗಾಗಿ…: ರಾಹುಲ್ ಗಾಂಧಿ
Kasturi Shankar: ನಟಿ ಕಸ್ತೂರಿ ಶಂಕರ್ ಜಾಮೀನು ಅರ್ಜಿ ವಜಾ; ಶೀಘ್ರ ಬಂಧನ ಸಾಧ್ಯತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.