ಮುಂಬಯಿ ಲೋಕಲ್ ರೈಲಿನಲ್ಲಿ ಬೆಂಗಳೂರು ಯುವತಿಯೆದುರು ಹಸ್ತಮೈಥುನ !
Team Udayavani, Jul 11, 2017, 3:02 PM IST
ಮುಂಬಯಿ: ಇಲ್ಲಿನ ಸ್ಥಳೀಯ ರೈಲಿನಲ್ಲಿ 22 ವರ್ಷದ ಯುವತಿಯೊಬ್ಬಳ ಎದುರು ವ್ಯಕ್ತಿಯೊಬ್ಬ ಹಸ್ತ ಮೈಥುನ ಮಾಡಿಕೊಂಡ ಅತ್ಯಂತ ನಿರ್ಲಜ್ಜ ಮತ್ತು ಹೇಯ ಘಟನೆ ಜೂನ್ 15 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ವ್ಯಕ್ತಿಯ ಹೇಯ ಕೃತ್ಯದ ಕುರಿತು ಬೆಂಗಳೂರು ಮೂಲದ ಯುವತಿ ಕೂಡಲೇ ರೈಲ್ವೇ ಹೆಲ್ಪ್ಲೈನ್ಗೆ ಕರೆ ಮಾಡಿ ತಿಳಿಸಿದರು. ಅಧಿಕಾರಿಗಳು ಯಾವುದೇ ಗಂಭೀರತೆ ಇಲ್ಲದೆ ಕೇವಲ ನಗೆಯಾಡುವ ಮೂಲಕ ಕರೆ ಸ್ಥಗಿತಗೊಳಿಸಿ ಸುಮ್ಮನೆ ಕುಳಿತಿರುವುದಾಗಿ ತಿಳಿದು ಬಂದಿದೆ.
ಘಟನೆಯ ಕುರಿತು ಫೇಸ್ಬುಕ್ನಲ್ಲಿ ಸವಿವರವಾಗಿ ಬರೆದುಕೊಂಡಿದ್ದು ಪೋಸ್ಟ್ ವೈರಲ್ ಆಗಿದೆ. ಇದೀಗ ವಿಚಾರ ತಿಳಿದ ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಉನ್ನತ ಮಟ್ಟದ ತನಿಖೆ ನಡೆಸುತ್ತಿದ್ದಾರೆ.
ರೈಲ್ವೇ ಸಚಿವ ಸುರೇಶ್ ಪ್ರಭು ಅವರು ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದ್ದು ಆರೋಪಿಯನ್ನು ಶೀಘ್ರ ವಶಕ್ಕೆ ಪಡೆಯಲು ಸೂಚಿಸಿದ್ದಾರೆ.
ದಾದರ್ ಮೂಲದ ರೈಲಿನಲ್ಲಿ ಮಧ್ಯಾಹ್ನ ಈ ಘಟನೆ ನಡೆದಿದ್ದು, ಅಂಗವಿಕಲರ ಕಂಪಾರ್ಟ್ಮೆಂಟ್ನಲ್ಲಿದ್ದ ವ್ಯಕ್ತಿ ಮಹಿಳೆಯರ ಕಂಪಾರ್ಟ್ಮೆಂಟ್ನಂತ ಬಂದು ಹಸ್ತಮೈಥುನ ಮಾಡಿರುವುದಾಗಿ ಯುವತಿ ವಿವರವಾಗಿ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾಳೆ. ಮಾತ್ರವಲ್ಲದೆ ಹೆಲ್ಪ್ಲೈನ್ ನಂಬರ್ಗಳು ನಿಜವಾಗಿಯೂ ಉಪಯೋಗಕ್ಕೆ ಬರುತ್ತಾವೋ ಎಂದು ಪ್ರಶ್ನಿಸಿದ್ದಾಳೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.