ನಟ ಸುಮೀತ್ ಪತ್ನಿ ಎದುರು ವಿಕೃತ ಕಾಮಿ ಹಸ್ತಮೈಥುನ, ಅರೆಸ್ಟ್
Team Udayavani, Feb 20, 2018, 12:11 PM IST
ಮುಂಬಯಿ : ಮಹಿಳೆಯರನ್ನು ಕಂಡಾಕ್ಷಣ ಲೈಂಗಿಕವಾಗಿ ಉದ್ರೇಕಗೊಂಡು ಅವರ ಮುಂದೆ ಸಾರ್ವಜನಿಕವಾಗಿ ಹಸ್ತಮೈಥುನ ಮಾಡುವ ವಿಕೃತ ಕಾಮಿಗಳ ಹುಚ್ಚು ಈಚಿನ ದಿನಗಳಲ್ಲಿ ವಿವಿಧೆಡೆಗಳಿಂದ ವರದಿಯಾಗುತ್ತಿದೆ.
ಮುಂಬಯಲ್ಲೀಗ ಅಂಥದೇ ಒಂದು ತಾಜಾ ಪ್ರಕರಣ ನಡೆದಿದೆ.
ನಟ ಸುಮೀತ್ ರಾಘವನ್ ಅವರ ಪತ್ನಿ ಚಿನ್ಮಯೀ ಸುರ್‌ವೆ ಅವರು ಇಂತಹ ಒಂದು ಅಸಹ್ಯ ಘಟನೆಗೆ ಸಾಕ್ಷಿಯಾದರು. ಮುಂಬಯಿ ಹೊರವಲಯದ ವಿಲೇ ಪಾರ್ಲೆಯಲ್ಲಿ ಯಾವುದೋ ಕೆಲಸಕ್ಕೆಂದು ಹೋಗಿದ್ದ ಆಕೆಯ ಮುಂದೆ ಬಿಳಿ ಬಿಎಂಡಬ್ಲ್ಯು ಕಾರಿನ ವ್ಯಕ್ತಿಯೊಬ್ಬ ಹಸ್ತಮೈಥುನ ಮಾಡಿಕೊಂಡ.
ಇದನ್ನು ಕಂಡು ಹೇಸಿಗೆಪಟ್ಟು ಚಿನ್ಮಯೀ, ಆ ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಳ್ಳಬೇಕು ಎನ್ನುವಷ್ಟರಲ್ಲಿ ಆತ ಕಾರು ಚಲಾಯಿಸಿಕೊಂಡು ಪರಾರಿಯಾದ; ಆದರೆ ಚಿನ್ಮಯೀ ಅವರು ಸಮಯ ಪ್ರಜ್ಞೆ ತೋರಿ ಆತನ ಕಾರಿನ ಕೊನೆಯ ನಾಲ್ಕು ನಂಬರ್‌ಗಳನ್ನು (1985) ನೋಟ್ ಮಾಡಿಕೊಂಡು ಪೊಲೀಸರಿಗೆ ದೂರು ನೀಡಿ ಎಫ್ಐಆರ್ ದಾಖಲಿಸಿದರು.
ಪೊಲೀಸರು ಒಡನೆಯೇ ಸಿಸಿಟಿವಿ ಚಿತ್ರಿಕೆಗಳನ್ನು ಪರಿಶೀಲಿಸಿ ಆರೋಪಿ ಕಾರಿನ ಚಾಲಕನನ್ನು ಎರಡೇ ತಾಸುಗಳ ಒಳಗೆ ಬಂಧಿಸುವಲ್ಲಿ ಸಫಲರಾದರು.
ಈ ಇಡಿಯ ಪ್ರಹಸನವನ್ನು ಚಿನ್ಮಯೀ ಅವರ ಪತಿ, ನಟ ಸುಮೀತ್ ರಾಘವನ್ ಅವರು ಟ್ವಿಟರ್ ಮೂಲಕ ಬಹಿರಂಗಪಡಿಸಿ ಕ್ಷಿಪ್ರ ಕಾಯಾಚರಣೆ ನಡೆಸಿದ ಪೊಲೀಸರನ್ನು ಪ್ರಶಂಸಿಸಿದ್ದಾರೆ. ಚಿನ್ಮಯೀ ಅವರಂತೆ ಯಾವುದೇ ಮಹಿಳೆ ಈ ರೀತಿಯ ಅಸಹ್ಯಕರ ಸನ್ನಿವೇಶವನ್ನು ಎದುರಿಸಿದಲ್ಲಿ ಕೂಡಲೇ ಧೈರ್ಯದಿಂದ ಪೊಲೀಸರಿಗೆ ಮಾಹಿತಿ ನೀಡಿ ಅಂತಹ ಖದೀಮರು ಅರೆಸ್ಟ್ ಆಗುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಿಂದೂ ಮುಖಂಡರು ಮಂದಿರ-ಮಸೀದಿ ವಿವಾದ ಕೆದಕುವುದನ್ನು ನಿಲ್ಲಿಸಬೇಕು: ಮೋಹನ್ ಭಾಗ್ವತ್
Om Prakash Chautala: ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ವಿಧಿವಶ
Video: ಮೊಟ್ಟೆ ಕದ್ದು ಸಿಕ್ಕಿಬಿದ್ದರೇ ಶಾಲೆಯ ಪ್ರಾಂಶುಪಾಲರು…? ಇಲಾಖೆಯಿಂದ ನೊಟೀಸ್
Human Error: ಮಾನವ ಲೋಪದಿಂದಲೇ CDS ರಾವತ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನ: ವರದಿ
Sabarimala: ಭಕ್ತರ ಸುರಕ್ಷೆಗಾಗಿ ಮಾರ್ಗಸೂಚಿ ಪ್ರಕಟ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.