ಕಾರ್ಡ್‌ನಿಂದ 9 ಕೋಟಿ ಮೋಸ
Team Udayavani, Mar 16, 2018, 6:00 AM IST
ನವದೆಹಲಿ: ಭಾರತೀಯ ಸ್ಟೇಟ್ ಬ್ಯಾಂಕ್‌ನಿಂದ ಮೂರು ಫಾರಿನ್ ಟ್ರಾವೆಲ್ ಪ್ರೀ ಪೇಯ್ಡ ಕಾರ್ಡ್‌ಗಳನ್ನು ಪಡೆದ ವ್ಯಕ್ತಿ, ಕಾರ್ಡುಗಳ ಮೇಲೆ 13 ಸಾವಿರ ರೂ.ಗಳ ವ್ಯವಹಾರದವರೆಗಿನ ಮಿತಿಯಿದ್ದರೂ, ಸುಮಾರು 9.1 ಕೋಟಿ ರೂ.ಗಳಷ್ಟು ಖರೀದಿ ಮಾಡಿ, ಬ್ಯಾಂಕಿಗೆ ಪಂಗನಾಮ ಹಾಕಿದ್ದಾನೆ. ಈ ಬಗ್ಗೆ ಬ್ಯಾಂಕ್ ಸಿಬಿಐಗೆ ದೂರು ನೀಡಿದೆ.
ಯಾರೀತ?: ದೂರಿನಲ್ಲಿ ಸಂದೀಪ್ ಕುಮಾರ್ ರಘು ಪೂಜಾರಿ ಎಂಬ ವ್ಯಕ್ತಿಯನ್ನು ಪ್ರಮುಖ ಆರೋಪಿ ಎಂದು ಹೆಸರಿಸಲಾಗಿದೆ. ನವೀಮುಂಬೈನ ಎಸ್‌ಬಿಐನ ಎನ್‌ಆರ್‌ಐ ಸೀವುಡ್ ಬ್ರಾಂಚ್ ಮೂಲಕ 3 ಟ್ರಾವೆಲ್ ಕಾರ್ಡುಗಳನ್ನು ಆತನಿಗೆ 2016ರ ನ. 7ರಂದು ಹಸ್ತಾಂತರಿಸಲಾಗಿತ್ತು. 2016ರ ನ. 8ರಿಂದ 2017ರ ಫೆ. 12ರವರೆಗಿನ ಅವಧಿಯಲ್ಲಿ ಬ್ರಿಟನ್ ಮೂಲದ ನೆಟೆಲ್ಲೆರ್ ಡಾಟ್ ಕಾಮ್., ಎಂಟ್ರೋಪಿ, ಸ್ವಿಫ್ r ಎವೋಚರ್ ಹಾಗೂ ಎಸ್‌ಕೆಆರ್ ಶ್ರಿಲ್ ಎಂಬ ನಾಲ್ಕು ಇ-ಮಾರಾಟ ಜಾಲತಾಣಗಳಲ್ಲಿ 374 ವ್ಯವಹಾರಗಳನ್ನು ಮಾಡಿ 9.1 ಕೋಟಿ ರೂ. ವರೆಗೆ ಖರೀದಿ ಮಾಡಲಾಗಿದೆ.
ಏನಿದರ ಮರ್ಮ?: ಫಾರಿನ್ ಪ್ರೀ ಪೇಯ್ಡ ಕಾರ್ಡುಗಳ ವ್ಯವಹಾರಗಳ ನಿರ್ವಹಣೆ ಹೊಣೆಯನ್ನು ಎಂಫಸಿಸ್ ಎಂಬ ಸಂಸ್ಥೆಗೆ ವಹಿಸಲಾಗಿದೆ. ಸಂದೀಪ್, ಪ್ರತಿ ಬಾರಿ ಈ ಕಾರ್ಡುಗಳ ವ್ಯವಹಾರಗಳನ್ನು ಮಾಡಿದಾಗ, ಯಾರೋ ಅನಾಮಿಕ ವ್ಯಕ್ತಿಗಳು, ಈ ಕಾರ್ಡುಗಳ ಡೇಟಾಬೇಸ್‌ಗೆ (ಸರ್ವರ್‌ಗೆ) ಲಗ್ಗೆ ಹಾಕಿ ಇವುಗಳ ಪ್ರೀ ಪೇಯ್ಡ ಮಿತಿ ಬದಲಾಗದಂತೆ ನೋಡಿಕೊಂಡಿದ್ದಾರೆ. ಹಾಗಾಗಿ, ಆತ ಅನಾಯಾಸವಾಗಿ 9.1 ಕೋಟಿ ರೂ.ವರೆಗೆ ವ್ಯವಹಾರ ಮಾಡಲು ಸಾಧ್ಯವಾಗಿದೆ. ಹಾಗಾಗಿ, ಸಂದೀಪ್ ಸೇರಿದಂತೆ ನಿಗೂಢ ವ್ಯಕ್ತಿಗಳ ಮೇಲೂ ಎಸ್‌ಬಿಐ, ಸಿಬಿಐನಲ್ಲಿ ದೂರು ದಾಖಲಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
Supreme Court: ದಿಲ್ಲಿಯ 113 ಚೆಕ್ಪೋಸ್ಟ್ನಲ್ಲಿ ಪೊಲೀಸರನ್ನು ನೇಮಿಸಿ
Delhi Elections: ಆಪ್ನಿಂದ 7 ಉಚಿತ ಯೋಜನೆ ಘೋಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.