ನದಿ ಕೆಳಗಿನ ಮೆಟ್ರೋ ಸುರಂಗವನ್ನು ಹೊಂದಲಿರುವ ಮುಂಬಯಿ
Team Udayavani, May 15, 2019, 12:44 PM IST
ಮುಂಬಯಿ: ಮುಂಬಯಿಯ ಚೊಚ್ಚಲ ಭೂಮಿಗತ ಮೆಟ್ರೋ 3 ಕಾರಿಡಾರ್ ಯೋಜನೆಯನ್ನು ಜಾರಿಗೊಳಿಸುತ್ತಿರುವ ಮುಂಬಯಿ ಮೆಟ್ರೋ ರೈಲು ನಿಗಮವು (ಎಂಎಂಆರ್‌ಸಿ) ಇದೀಗ ಈ ಯೋಜನೆಗಾಗಿ ಅಂಡರ್ ರಿವರ್ ಟನಲಿಂಗ್‌ಗೆ (ನದಿಯ ಕೆಳಗಿನ ಸುರಂಗ) ತಯಾರಿ ನಡೆಸುತ್ತಿದೆ.
ಸಂಪೂರ್ಣ ಭೂಮಿಗತ ಕೊಲಾಬಾ ಬಾಂದ್ರಾ ಸೀಪ್j ಮೆಟ್ರೋ ಮಾರ್ಗದ 170 ಕಿ.ಮೀ. ಉದ್ದದ ಸುರಂಗ ಮಾರ್ಗವು ಮೀಠಿ ನದಿಯ ಕೆಳಗಿನಿಂದ ಸಾಗಲಿದೆ. ಧಾರಾವಿ ಮತ್ತು ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್(ಬಿಕೆಸಿ) ನಿಲ್ದಾಣಗಳ ನಡುವೆ ನಿರ್ಮಾಣವಾಗಲಿರುವ ಈ ಮಾರ್ಗವು ಮುಂಬಯಿಯ ಮೊದಲ ಮತ್ತು ದೇಶದ 2ನೇ ನದಿಯ ಕೆಳಗಿನ ಮೆಟ್ರೋ ಸುರಂಗ ಮಾರ್ಗವಾಗಿ ಹೊರಹೊಮ್ಮಲಿದೆ.
ಕೆಲಸ ಮುಂದುವರಿಸಲು ಸುರಕ್ಷಿತ ಪರದೆಯೊಂದನ್ನು ರಚಿಸಲಾಗುತ್ತಿದೆ. ನೀರಿನ ಒತ್ತಡವನ್ನು ತಡೆಗಟ್ಟುವುದು ನಮ್ಮ ಮುಂದಿನ ಸವಾಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಇಲ್ಲಿನ ಬಂಡೆಗಳು ದುರ್ಬಲವಾಗಿರುವುದು ಮತ್ತೂಂದು ಎಂಜಿನಿಯರಿಂಗ್ ಸವಾಲು ಆಗಿದೆ. ಇದನ್ನು ಕಾರ್ಯಸಾಧ್ಯವಾಗಿಸಲು ನಮ್ಮ ವಿನ್ಯಾಸಕರು, ಸಲಹಾಕಾರರು ಮತ್ತು ಗುತ್ತಿಗೆದಾರರು ಈ ಯೋಜನೆಯ ಮೇಲೆ ದೀರ್ಘಕಾಲದಿಂದ ಕೆಲಸ ಮಾಡಿದ್ದಾರೆ ಎಂದು ಎಂಎಂಆರ್‌ಸಿ ಯೋಜನಾ ನಿರ್ದೇಶಕ ಎಸ್.ಕೆ. ಗುಪ್ತಾ ಹೇಳಿದ್ದಾರೆ.
ಪ್ರತಿ ಮಳೆಗಾಲದ ಸಮಯದಲ್ಲಿ ನದಿಯಲ್ಲಿ ನೀರಿನ ಮಟ್ಟಗಳು ಹೆಚ್ಚಾಗುವ ಹಿನ್ನೆಲೆಯಲ್ಲಿ ನೀರಿನ ಒತ್ತಡವನ್ನು ನಿಯಂತ್ರಿಸಲು ಹೆಚ್ಚು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗುವುದು ಎಂದು ಗುಪ್ತಾ ತಿಳಿಸಿದ್ದಾರೆ.
ಬಿಕೆಸಿ ನಿಲ್ದಾಣದಲ್ಲಿನ ಸುರಂಗದ 153 ಮೀಟರ್ ಉದ್ದದ ಭಾಗವನ್ನು ನ್ಯೂ ಆಸ್ಟ್ರಿಯನ್ ಟೆಕ್ನಾಲಜಿ ಮೆಥಡ್ (ಎನ್‌ಎಟಿಎಂ) ಅನ್ನು ಬಳಸಿಕೊಂಡು ನಿರ್ಮಿಸಲಾಗುವುದು. ಈ ಸುರಂಗವು ನದಿಯ ತಳಕ್ಕಿಂತ ಸುಮಾರು 12.5 ಮೀಟರ್ ಕೆಳಗಿರಲಿದೆ ಎಂದು ಗುಪ್ತಾ ತಿಳಿಸಿದ್ದಾರೆ. 27 ನಿಲ್ದಾಣಗಳ ಮೆಟ್ರೋ 3 ಕಾರಿಡಾರ್‌ನಲ್ಲಿ 26 ನಿಲ್ದಾಣಗಳು ಭೂಮಿಗತವಾಗಿರಲಿವೆ. ಅದೇ, ಕೇವಲ ಒಂದು ನಿಲ್ದಾಣ ಭೂಮಿಯ ಮೇಲಿರಲಿದೆ. ದೇಶದ ಮೊದಲ ಅಂಡರ್‌ವಾಟರ್ ಮೆಟ್ರೋ ಸುರಂಗ ಮಾರ್ಗವನ್ನು ಕೋಲ್ಕತಾದ ಹೂಗ್ಲಿ ನದಿಯಲ್ಲಿ ನಿರ್ಮಿಸಲಾಗಿದೆ.
ಎಂಜಿನಿಯರಿಂಗ್ ಸಾಧನೆ
ಎಂಎಂಆರ್‌ಸಿ ಸುರಂಗ ಕೊರೆಯುವ ಯಂತ್ರ (ಟಿಬಿಎಂ)ಗಳನ್ನು ಬಳಸಿ 1.18 ಕಿ.ಮೀ. ಉದ್ದದ ಎರಡು ಸುರಂಗಗಳನ್ನು ನಿರ್ಮಿಸಲಿದೆ. ಈ ಸುರಂಗಗಳು ಧಾರಾವಿ ಮತ್ತು ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ (ಬಿಕೆಸಿ) ನಡುವೆ ಇರಲಿವೆ. ಬಿಕೆಸಿ ನಿಲ್ದಾಣದ ದಕ್ಷಿಣ ತುದಿ ನೀರೊಳಗಿರಲಿದೆ. ನದಿಯ ಕೆಳಗಿನ ಈ ಎಂಜಿನಿಯರಿಂಗ್ ಸಾಧನೆಯನ್ನು ಸಾಧಿಸಲು ಗುತ್ತಿಗೆದಾರರು ಹಲವಾರು ಸುರಕ್ಷತಾ ವಿಧಾನಗಳನ್ನು ಅಳವಡಿಸಿಕೊಳ್ಳಲಿದ್ದಾರೆ.
ನೀರಿನ ಪ್ರವೇಶ ಸಾಧ್ಯತೆಯನ್ನು ಕಡಿಮೆ ಮಾಡಲು ಸುರಂಗದ ಮೇಲಿನ ಮಣ್ಣು ಮತ್ತು ಮುರಿದ ಬಂಡೆಗಳನ್ನು ಬಲಪಡಿಸಲಾಗುವುದು. ಸುರಕ್ಷತೆಗಾಗಿ ಅಗೆಯುವ ಪ್ರದೇಶದ ಮೇಲೆ ಉಕ್ಕಿನ ಕೊಡೆಯೊಂದನ್ನು ನಿರ್ಮಿಸಲಾಗುವುದು ಹಾಗೂ ಅಗೆಯುವ ಸಮಯದಲ್ಲಿ ಮಣ್ಣು ಮತ್ತು ಕಲ್ಲುಗಳನ್ನು ನಿರಂತರವಾಗಿ ಪರಿಶೀಲಿಸಲಾಗುವುದು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ
NSE, BSE; ಷೇರು ಮಾರುಕಟ್ಟೆಗೆ ನವೆಂಬರ್ 20 ರಂದು ರಜೆ ಘೋಷಣೆ
Proposes: ಪುರುಷ ಟೈಲರ್ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.