ಮುಂಬಯಿ ಪೊಲೀಸರಿಗೆ ಪಾಕಿಸ್ತಾನಿ ಸಂಖ್ಯೆಯಿಂದ “26/11”ರ ಮಾದರಿ ದಾಳಿ ಬೆದರಿಕೆ
ದಾಳಿ ನಡೆಸಲು ಹತ್ತು ಉಗ್ರರು ಸಜ್ಜು
Team Udayavani, Aug 20, 2022, 1:20 PM IST
ನವದೆಹಲಿ: ಮುಂಬಯಿ ಪೊಲೀಸ್ ಟ್ರಾಫಿಕ್ ಕಂಟ್ರೋಲ್‌ಗೆ ಶನಿವಾರ ಪಾಕಿಸ್ತಾನಿ ಸಂಖ್ಯೆಯಿಂದ ದಾಳಿ ನಡೆಸುವುದಾಗಿ ಬೆದರಿಕೆ ಸಂದೇಶ ಬಂದಿದ್ದು, ನಗರದಲ್ಲಿ “26/11” (ತಾಜ್ ಹೋಟೇಲ್ ದಾಳಿ) ಮಾದರಿಯ ದಾಳಿ ನಡೆಸುವ ಬೆದರಿಕೆ ಹಾಕಲಾಗಿದೆ.
ವಾಟ್ಸ್‌ಆಪ್ ಮುಖಾಂತರ ಬೆದರಿಕೆ ಸಂದೇಶ ಬಂದಿದ್ದು, ಬೆದರಿಕೆ ಕಳುಹಿಸಿದ ವ್ಯಕ್ತಿಯ ವಿವರಗಳು, ಯಾವ ಸ್ಥಳದಿಂದ ಬಂದಿದೆ ಎಂಬುದು ಸ್ಪಷ್ಟವಾಗಿಲ್ಲ.
ಮುಂದಿನ ದಾಳಿಯು ನಗರದಲ್ಲಿ 26/11ದಾಳಿಯನ್ನು ನೆನಪಿಸುತ್ತದೆ. ಈಗಾಗಲೇ 10 ಪಾಕಿಸ್ತಾನಿ ಉಗ್ರಗಾಮಿಗಳು ಭಾರೀ ಶಸ್ತ್ರಗಳೊಂದಿಗೆ ಸಜ್ಜಾಗಿದ್ದಾರೆ ಎಂದು ಸಂದೇಶದಲ್ಲಿದೆ.
ಪೊಲೀಸರು ಸಂದೇಶ ಕಳುಹಿಸಿದ ವ್ಯಕ್ತಿಯ ಸ್ಥಳವನ್ನು ಪತ್ತೆಹಚ್ಚಲು ಪ್ರಯತ್ನಿಸಿದರೆ ಮುಂಬಯಿಯಲ್ಲಿ ದಾಳಿ ನಡೆಸಲಾಗುವುದು ಎಂದು ಎಚ್ಚರಿಸಿದ್ದಾನೆ. ಭಾರತದಲ್ಲಿ 6 ಜನರು ಈ ದಾಳಿ ಯೋಜನೆಯನ್ನು ಕಾರ್ಯಗತಗೊಳಿಸುತ್ತಾರೆ ಎಂದು ಬೆದರಿಕೆ ಸಂದೇಶದಲ್ಲಿದೆ. ಮುಂಬೈ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಇತರ ತನಿಖಾ ಸಂಸ್ಥೆಗಳಿಗೂ ಈ ಬಗ್ಗೆ ಮಾಹಿತಿ ನೀಡಲಾಗಿದೆ.
ಇದನ್ನೂ ಓದಿ:ಸೊಮಾಲಿಯಾದ ಹೋಟೆಲ್‌ನಲ್ಲಿ ಉಗ್ರರಿಂದ ಕಾರು ಬಾಂಬ್ ದಾಳಿ: ಗುಂಡಿನ ಚಕಮಕಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election: ಝಾರ್ಖಂಡ್ ವಿಧಾನಸಭೆಗೆ ಇಂದು 1ನೇ ಹಂತದ ಚುನಾವಣೆ
US Visa: ಅಮೆರಿಕ ವೀಸಾ ಬೇಕಿದ್ದರೆ 16 ತಿಂಗಳು ಕಾಯುವುದು ಈಗ ಅನಿವಾರ್ಯ!
Constitution: ಪ್ರಧಾನಿ ಸಂವಿಧಾನ ಓದಿಲ್ಲ, ಇದಕ್ಕೆ ನಾನು ಗ್ಯಾರಂಟಿ: ರಾಹುಲ್
Maha Election: ರಜಾಕಾರರ ಹಿಂಸೆಗೆ ಖರ್ಗೆ ತಾಯಿ, ಸಹೋದರಿ ಬಲಿ: ಯೋಗಿ ತಿರುಗೇಟು
Bhagava: ಕೇಸರಿ ಎಂದರೆ ಭಗವಂತನ ಬಣ್ಣ : ಖರ್ಗೆ ವಿರುದ್ಧ ರಾಮಭದ್ರಾಚಾರ್ಯ ವಾಗ್ಧಾಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.