ಟಿಎಂಸಿ 140, ಬಿಜೆಪಿ 6, ಕಾಂಗ್ರೆಸ್ 0, ಎಡ 0
Team Udayavani, Aug 18, 2017, 6:40 AM IST
ಕೋಲ್ಕತಾ: ಪಶ್ಚಿಮ ಬಂಗಾಲದಲ್ಲಿ ನಡೆದ 7 ನಗರಪಾಲಿಕೆ ಚುನಾವಣೆಯಲ್ಲಿ ಸಿಎಂ ಮಮತಾ ಬ್ಯಾನರ್ಜಿ ಅವರ ಟಿಎಂಸಿ ಕ್ಲೀನ್‌ಸ್ವೀಪ್ ಮಾಡಿದೆ. ಇದುವರೆಗೆ ಇಲ್ಲಿ ನೆಲೆಯನ್ನೇ ಕಾಣದ ಬಿಜೆಪಿ ಮಮತಾಗೆ ಕೊಂಚ ಸ್ಪರ್ಧೆ ಒಡ್ಡಿರುವುದನ್ನು ಬಿಟ್ಟರೆ, ಈ ಹಿಂದೆ ದಶಕಗಳ ಕಾಲ ಅಧಿಕಾರ ನಡೆಸಿದ್ದ ಸಿಪಿಎಂ ಶೂನ್ಯ ಸಂಪಾದಿಸಿದೆ. ಕಾಂಗ್ರೆಸ್ ಕೂಡ ಖಾತೆ ತೆರೆಯಲು ವಿಫಲವಾಗಿದೆ.
7 ಪಾಲಿಕೆಗಳ 148 ಸ್ಥಾನಗಳಿಗೆ ಕಳೆದ ರವಿವಾರ ಚುನಾವಣೆ ನಡೆದಿತ್ತು. ಗುರುವಾರ ಬೆಳಗ್ಗೆ ಮತ ಎಣಿಕೆ ಶುರುವಾದರೂ ಸಂಜೆ ವೇಳೆಗೆ ಸ್ಪಷ್ಟ ಚಿತ್ರಣ ಸಿಕ್ಕಿತು. 140ರಲ್ಲಿ ಟಿಎಂಸಿ ಗೆದ್ದರೆ, ಆರರಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಇನ್ನು ಸಿಪಿಎಂ ಅಂಗಪಕ್ಷ ಪಾರ್ವರ್ಡ್ ಬ್ಲಾಕ್ ಒಂದು ಮತ್ತು ಸ್ವತಂತ್ರ ಅಭ್ಯರ್ಥಿ ಒಂದರಲ್ಲಿ ಗೆದ್ದಿದ್ದಾರೆ. ದುಪುರಿಯಲ್ಲಿ ನಾಲ್ಕು, ಬುನಿಯಾದ್‌ಪುರ ಮತ್ತು ಪನ್ಸ್‌ಕುರಾದಲ್ಲಿ ತಲಾ ಒಂದರಲ್ಲಿ ಬಿಜೆಪಿ ಜಯ ಗಳಿಸಿದೆ. ಟಿಎಂಸಿ ಹಾಲ್ದಿಯಾ, ದುರ್ಗಾಪುರ ಮತ್ತು ಕೊಪರ್ ಕ್ಯಾಂಪ್ ಪಾಲಿಕೆಗಳಲ್ಲಿ ಎಲ್ಲಾ ಸ್ಥಾನಗಳಲ್ಲೂ ಗೆದ್ದಿದೆ.
ಪಶ್ಚಿಮ ಬಂಗಾಲದಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳು ನೆಲೆ ಕಳೆದುಕೊಳ್ಳುತ್ತಿರುವುದು ನಿಚ್ಚಳವಾಗಿದ್ದು, ಮುಂದಿನ ದಿನಗಳಲ್ಲಿ ಬಿಜೆಪಿಯೇ ಮಮತಾಗೆ ಪ್ರತಿಸ್ಪರ್ಧಿಯಾಗುವ ಸಾಧ್ಯತೆಗಳು ಹೆಚ್ಚಿವೆ ಎಂದು ಚುನಾವಣಾ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ayodhya; ರಾಮಮಂದಿರ ಪ್ರಾಣ ಪ್ರತಿಷ್ಠಾ ಮೊದಲ ವಾರ್ಷಿಕೋತ್ಸವ ಸಂಭ್ರಮ
Ramesh Bidhuri ಬಿಜೆಪಿಯ ಸಿಎಂ ಫೇಸ್ ಎಂದು ಅಭಿನಂದನೆ ಸಲ್ಲಿಸಿದ ಕೇಜ್ರಿವಾಲ್!
Kerala; 5 ವರ್ಷಗಳಲ್ಲಿ 64 ಜನರಿಂದ ಲೈಂಗಿ*ಕ ದೌರ್ಜನ್ಯ: ಯುವತಿ ಹೇಳಿಕೆ !!
Kannauj: ಕುಸಿದು ಬಿದ್ದ ನಿರ್ಮಾಣ ಹಂತದ ಕಟ್ಟಡದ ಮೇಲ್ಛಾವಣಿ… ಹಲವರು ಸಿಲುಕಿರುವ ಶಂಕೆ
Mine Tragedy: ಇಂದು ಮತ್ತೆ ಮೂರು ಮೃತದೇಹಗಳು ಪತ್ತೆ, ಐವರಿಗಾಗಿ ಮುಂದುವರೆದ ಕಾರ್ಯಾಚರಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.