ಹ್ಯಾಕರ್ನಿಂದ ಕೊಲೆ ಬೆದರಿಕೆ
Team Udayavani, Jun 25, 2020, 8:00 AM IST
ಸಾಂದರ್ಭಿಕ ಚಿತ್ರ
ಕೋಲ್ಕತಾ: ಕೋವಿಡ್ ಹಿನ್ನೆಲೆಯಲ್ಲಿ ಆನ್ಲೈನ್ ಕ್ಲಾಸ್ಗಳು ಅನಿವಾರ್ಯವಾಗಿದ್ದು, ಕೆಲ ಅವ್ಯವಸ್ಥೆಯಿಂದಾಗಿ ವಿದ್ಯಾರ್ಥಿಗಳು ವಿವಿಧ ರೀತಿಯ ಮಾನಸಿಕ ಹಿಂಸೆ ಅನುಭವಿಸುವಂತಾಗಿದೆ.
ಕೋಲ್ಕತಾದ ಶಾಲೆಯೊಂದಲ್ಲಿ 6ನೇ ತರಗತಿ ವಿದ್ಯಾರ್ಥಿಗಳಿಗೆ ಆನ್ಲೈನ್ ಕ್ಲಾಸ್ ನಡೆಸುತ್ತಿದ್ದು, ಹ್ಯಾಕರ್ಗಳು ಇ-ಕ್ಲಾಸ್ಗೆ ನುಗ್ಗಿ ಕಿರುಕುಳ ನೀಡುತ್ತಿರುವುದರಿಂದ ವಿದ್ಯಾರ್ಥಿಗಳು ಕುಗ್ಗಿ ಹೋಗಿದ್ದಾರೆ. ಪಾಸ್ವರ್ಡ್ ಕದ್ದು ಇ-ಕ್ಲಾಸ್ ಪ್ರವೇಶಿಸಿರುವ ದುಷ್ಕರ್ಮಿಗಳು, ವಿದ್ಯಾರ್ಥಿನಿಯರಿಗೆ ಅಸಭ್ಯವಾಗಿ ನಿಂದಿಸುವುದರ ಜೊತೆಗೆ ಅತ್ಯಾಚಾರ, ಕೊಲೆ ಬೆದರಿಕೆಯೊಡ್ಡಿದ್ದಾರೆ. ಈ ಘಟನೆಯನ್ನು ವಿದ್ಯಾರ್ಥಿಗಳು ಪೋಷಕರು ಹಾಗೂ ಶಿಕ್ಷಕರ ಗಮನಕ್ಕೆ ತಂದ ಬಳಿಕ ಆನ್ಲೈನ್ ಕ್ಲಾಸ್ ಅನ್ನು ಸ್ಥಗಿತಗೊಳಿಸಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಶಾಲೆ ಆಡಳಿತ ಮಂಡಳಿಯು, ಘಟನೆ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಪಾಸ್ವರ್ಡ್ಗಳನ್ನು ಹಂಚಿಕೊಂಡಿರುವ ಕಾರಣ ಹ್ಯಾಕರ್ಗಳು ಆನ್ಲೈನ್ ಕ್ಲಾಸ್ಗೆ ನುಗ್ಗಿರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿ ಆತ್ಮಹತ್ಯೆ
ಆನ್ಲೈನ್ ಕ್ಲಾಸ್ಗೆ ಹಾಜರಾಗಲು ಸಾಧ್ಯವಾಗದ್ದಕ್ಕೆ ಅಸ್ಸಾಂ ಜಿಲ್ಲೆಯಲ್ಲಿ ಚಿರಾಂಗ್ ಜಿಲ್ಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿಯೊಬ್ಬ ಆತ್ಮ ಹತ್ಯೆಗೆ ಶರಣನಾಗಿದ್ದಾನೆ. ಮನೆಯಲ್ಲಿ ಬಡತನ ಇದ್ದ ಕಾರಣ ಇ-ಕ್ಲಾಸ್ಗೆ ಬೇಕಾದ ಸ್ಮಾರ್ಟ್ಫೋನ್ ಕೊಡಿಸಿರಲಿಲ್ಲ. ಹೀಗಾಗಿ ಆತ ಇ-ಕ್ಲಾಸ್ಗೆ ಹಾಜರಾಗುತ್ತಿರಲಿಲ್ಲ. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಲಾಕ್ಡೌನ್ನಿಂದ ತಂದೆಗೆ ಕೆಲಸವಿರಲಿಲ್ಲ, ತಾಯಿ ಕೆಲಸ ಹುಡುಕಲು ಬೆಂಗಳೂರಿಗೆ ಬಂದಿದ್ದರು. ಇತ್ತೀಚೆಗೆ ಕೇರಳದಲ್ಲಿ ಇದೇ ಕಾರಣಕ್ಕಾಗಿ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಳು.
ಬಾಲಕಿ ಆತ್ಮಹತ್ಯೆ: ಗುಜರಾತ್ನ ರಾಜ್ಕೋಟ್ನಲ್ಲಿ 12 ವರ್ಷದ ಬಾಲಕಿಯೊಬ್ಬಳು ಆನ್ಲೈನ್ ಕ್ಲಾಸ್ ಹಾಗೂ ಮನೆಗೆಲಸದ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Borewell Tragedy: ಹತ್ತು ದಿನಗಳ ಕಾರ್ಯಾಚರಣೆ… ಕೊನೆಗೂ ಬದುಕಿ ಉಳಿಯಲಿಲ್ಲ ಚೇತನಾ
Borewell Tragedy: 10 ದಿನದ ಕಾರ್ಯಾಚರಣೆ ಬಳಿಕ ಬದುಕಿ ಬಂದ ಬಾಲೆ, ಇದು ಪವಾಡ ಎಂದ ಪೋಷಕರು
Navy: ಜ.15ಕ್ಕೆ ನೌಕಾಪಡೆಗೆ 2 ಯುದ್ಧ ನೌಕೆ, 1 ಸಬ್ಮರೀನ್ ಸೇರ್ಪಡೆ
Share Market: ಹೊಸ ವರ್ಷದ ಮೊದಲ ದಿನ 368 ಅಂಕ ಏರಿದ ಸೆನ್ಸೆಕ್ಸ್
Viral: ಫೇಸ್ಬುಕ್ ಪ್ರೇಯಸಿ ಭೇಟಿಗೆ ಅಕ್ರಮವಾಗಿ ಪಾಕ್ಗೆ ತೆರಳಿ ಸಿಕ್ಕಿಬಿದ್ದ ಭಾರತೀಯ ಯುವಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.