ಮಗಳ ಎದುರೇ ತಂದೆ ಮೇಲೆ ಹಲ್ಲೆ: ಅಪ್ಪನ ರಕ್ಷಣೆಗೆ ಗೋಗರೆದ ಪುಟ್ಟ ಬಾಲಕಿ
Team Udayavani, Aug 12, 2021, 8:16 PM IST
![kjhggkgj](https://www.udayavani.com/wp-content/uploads/2021/08/kjhggkgj-620x372.jpg)
![kjhggkgj](https://www.udayavani.com/wp-content/uploads/2021/08/kjhggkgj-620x372.jpg)
ಲಕ್ನೋ : ಪುಟ್ಟ ಮಗಳ ಎದುರೇ ಆಕೆಯ ತಂದೆ ಮೇಲೆ ಮನಃಬಂದಂತೆ ಹಲ್ಲೆ ನಡೆಸಿದ ಘಟನೆ ಉತ್ತರ ಪ್ರದೇಶದ ಕಾನ್ಲುರದಲ್ಲಿ ನಡೆದಿದ್ದು, ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
‘ಜೈ ಶ್ರೀರಾಮ್’ ಘೋಷಣೆ ಕೂಗುವಂತೆ ಒತ್ತಾಯಿಸಿ ಅನ್ಯಕೋಮಿನ ವ್ಯಕ್ತಿಯನ್ನು ಗುಂಪೊಂದು ಹಿಗ್ಗಾಮುಗ್ಗಾ ಥಳಿಸಿದೆ. ಸ್ಥಳದಲ್ಲಿಯೆ ಇದ್ದ ಹಲ್ಲೆಗೊಳಗಾದ ವ್ಯಕ್ತಿಯ ಪುಟ್ಟ ಮಗಳು, ತಂದೆಯನ್ನು ಬಿಡುವಂತೆ ಗೋಗರೆಯುವ ದೃಶ್ಯ ನೋಡುಗರ ಕಣ್ಣಾಲೆಗಳು ತೇವಗೊಳಿಸುವಂತಿದೆ.
ಹಲ್ಲೆ ಬಳಿಕ ವ್ಯಕ್ತಿಯನ್ನು ಪೊಲೀಸರಿಗೆ ಒಪ್ಪಿಸಲಾಗಿದ್ದು, ಪೊಲೀಸರ ಸಮ್ಮುಖದಲ್ಲೂ ಹಲ್ಲೆ ನಡೆಸಿರುವ ದೃಶ್ಯ ವಿಡಿಯೋದಲ್ಲಿ ಚಿತ್ರೀಕರಣವಾಗಿದೆ. ಬಜರಂಗಳದ ಸಭೆ ಆಯೋಜಿಸಿದ್ದ ಪ್ರದೇಶದಿಂದ 500 ಮೀಟರ್ ದೂರದಲ್ಲಿ ಈ ಘಟನೆ ನಡೆದಿದೆ.
Members of RW group accused a man of trying to convert a woman, stormed his house, assaulted him before his girl child in Barra Kanpur. pic.twitter.com/DSiXZ7XeYy
— हैदर حیدر Haidar Naqvi?? (@haidarpur) August 11, 2021
ಸಭೆಯಲ್ಲಿ ತಮ್ಮ ಪ್ರದೇಶದಲ್ಲಿದ್ದ ಅನ್ಯ ಕೋಮಿನ ಜನರು ಅಲ್ಲಿನ ಹಿಂದೂ ಹುಡುಗಿಯರನ್ನು ಮತಾಂತರ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಕೂಡ ಆರೋಪ ಕೇಳಿ ಬಂದಿದೆ. ಸಭೆ ನಡೆಸಿದ ಬಳಿಕ ಈ ಹಲ್ಲೆ ನಡೆದಿರುವ ವರದಿಯಾಗಿದೆ.
“ನಾನು ರಿಕ್ಷಾ ಚಾಲನೆ ಮಾಡುತ್ತಿದ್ದಾಗ ಆರೋಪಿಗಳು ಬಂದು ನನ್ನ ಮೇಲೆ ದಾಳಿ ನಡೆಸಿದರು. ಅಲ್ಲದೇ, ನನ್ನ ಕುಟುಂಬವನ್ನು ಕೊಲೆ ಮಾಡುವ ಬೆದರಿಕೆ ಹಾಕಿದರು. ಪೊಲೀಸರು ಬಂದು ನನ್ನ ರಕ್ಷಣೆ ನಡೆಸಿದರು ಎಂದು ಹಲ್ಲೆಗೆ ಒಳಗಾದ ವ್ಯಕ್ತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![15-monalisa](https://www.udayavani.com/wp-content/uploads/2025/02/15-monalisa-150x90.jpg)
![15-monalisa](https://www.udayavani.com/wp-content/uploads/2025/02/15-monalisa-150x90.jpg)
![15-monalisa](https://www.udayavani.com/wp-content/uploads/2025/02/15-monalisa-150x90.jpg)
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
![Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!](https://www.udayavani.com/wp-content/uploads/2025/02/crime-12-150x82.jpg)
![Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!](https://www.udayavani.com/wp-content/uploads/2025/02/crime-12-150x82.jpg)
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
![Mother-in-law gives HIV injection to daughter-in-law for not giving much dowry](https://www.udayavani.com/wp-content/uploads/2025/02/HIV-150x82.jpg)
![Mother-in-law gives HIV injection to daughter-in-law for not giving much dowry](https://www.udayavani.com/wp-content/uploads/2025/02/HIV-150x82.jpg)
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
![Valentine’s Day: Young woman orders 100 pizzas for old boyfriend: But there’s a twist](https://www.udayavani.com/wp-content/uploads/2025/02/pizza-150x82.jpg)
![Valentine’s Day: Young woman orders 100 pizzas for old boyfriend: But there’s a twist](https://www.udayavani.com/wp-content/uploads/2025/02/pizza-150x82.jpg)
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
![delhi](https://www.udayavani.com/wp-content/uploads/2025/02/delhi-7-150x82.jpg)
![delhi](https://www.udayavani.com/wp-content/uploads/2025/02/delhi-7-150x82.jpg)
Stampede: ಕುಂಭಕ್ಕೆ ಹೊರಟವರು ಕಾಲ್ತುಳಿತಕ್ಕೆ ಬಲಿ! ದೆಹಲಿ ರೈಲುನಿಲ್ದಾಣದಲ್ಲಿ ಆಗಿದ್ದೇನು?