ಪತ್ನಿ ಶ್ರಾದ್ಧಕ್ಕೆ ನಿರಾಕರಣೆ
Team Udayavani, Aug 11, 2018, 7:23 AM IST
ಹೊಸದಿಲ್ಲಿ: “ಹಿಂದೂ ಮಹಿಳೆ ಮುಸ್ಲಿಂ ಹುಡುಗನನ್ನು ಮದುವೆಯಾದ ಬಳಿಕ ಆಕೆ ಹಿಂದೂವಾಗಿ ಉಳಿಯಲು ಸಾಧ್ಯವಿಲ್ಲ’ ಎಂದು ಅಭಿಪ್ರಾಯಪಟ್ಟಿರುವ ದೇವಾಲಯವೊಂದರ ಆಡಳಿತ ಮಂಡಳಿ, ಮುಸ್ಲಿಂ ವ್ಯಕ್ತಿಯೊಬ್ಬರಿಗೆ ತಮ್ಮ ಪತ್ನಿಯ ಅಂತಿಮ ವಿಧಿ ವಿಧಾನ ನಡೆಸಲು ಅವಕಾಶ ನಿರಾಕರಿಸಿದೆ. ಈ ಘಟನೆ ನಡೆದಿರುವುದು ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ. ಕೋಲ್ಕತಾ ಮೂಲದ ಇಮ್ತಿಯಾಜುರ್ ರೆಹಮಾನ್ ಇಂಥದ್ದೊಂದು ಸಾಮಾಜಿಕ ಸವಾಲು ಎದುರಿಸಿದ ವ್ಯಕ್ತಿ. ಬಹು ಅಂಗ ವೈಫಲ್ಯದಿಂದಾಗಿ ಕಳೆದ ವಾರ ಪತ್ನಿ ನಿವೇದಿತಾ ಘಾಟಕ್ ಮೃತಪಟ್ಟಿದ್ದರು. ಅವರ ಅಂತ್ಯಕ್ರಿಯೆ ನಂತರದ ವಿಧಿವಿಧಾನಗಳನ್ನು ಹಿಂದೂ ಸಂಪ್ರದಾಯದಂತೆ ನೆರವೇರಿಸಲು ಇಮ್ತಿಯಾಜ್ ನಿರ್ಧರಿಸಿದರು.
ನಿವೇದಿತಾ ಅವರ ಕುಟುಂಬದ ಬೆಂಬಲವಿಲ್ಲ ದೆಯೇ ನಿಗಮ್ ಬೋಧ್ ಘಾಟ್‌ನಲ್ಲಿ ಅಂತ್ಯಕ್ರಿಯೆ ನಡೆಸಿದರು. ಆದರೆ ಕುಟುಂಬ ಸದಸ್ಯರಾರೂ ಶ್ರಾದ್ಧ ಮಾಡಲು ಮುಂದಾಗಲೇ ಇಲ್ಲ. ಈ ಹಿನ್ನೆಲೆಯಲ್ಲಿ ಬಂಗಾಲಿಗಳ ಪ್ರಾಬಲ್ಯವಿರುವ ಚಿತ್ತರಂಜನ್ ಪಾರ್ಕ್‌ನ ಕಾಳಿ ಮಂದಿರ ಸೊಸೈಟಿಯಲ್ಲಿ ಶ್ರಾದ್ಧ ನೆರವೇ ರಿಸಲು 1,300 ರೂ. ಕೊಟ್ಟು ಆ. 6ರಂದು ಅವ ಕಾಶ ಪಡೆದಿದ್ದರು. ಆದರೆ, ಆಡಳಿತ ಮಂಡಳಿ, ಹಣ ಪಡೆದು ನಂತರ ಮುಸ್ಲಿಂ ಎಂದು ಗೊತ್ತಾದ ಮೇಲೆ ಅವಕಾಶ ರದ್ದುಗೊಳಿಸಿದೆ.
ಧರ್ಮದರ್ಶಿ ಹೇಳಿದ್ದೇನು?: ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಕಾಳಿ ಮಂದಿರದ ಅಶಿತವಾ ಭೌಮಿಕ್, “ಇಮ್ತಿಯಾಜ್ ಅವರು ತಮ್ಮ ಮಗಳು ಇಹಿನಿ ಅಂಬ್ರಿನ್ ಹೆಸರಿನಲ್ಲಿ ಬುಕ್ ಮಾಡಿದ್ದರು. ಇದು ಅರೆಬಿಕ್ ಅಥವಾ ಮುಸ್ಲಿಂ ಹೆಸರೆಂದು ಹೇಳುವಂತಿರಲಿಲ್ಲ. ಹಾಗಾಗಿ ಅವಕಾಶ ಕಲ್ಪಿಸಲಾಗಿತ್ತು. ಕಾರ್ಯ ನೆರವೇರಿಸುವುದಕ್ಕೂ ಮೊದಲು ಹಿಂದೂ ಸಂಪ್ರದಾಯದಂತೆ ಗೋತ್ರ ಕೇಳಲಾಯಿತು. ಆದರೆ ಅವರಲ್ಲಿ ಉತ್ತರವಿರಲಿಲ್ಲ. ಒಬ್ಬ ಮಹಿಳೆ ಮುಸ್ಲಿಂ ವ್ಯಕ್ತಿಯನ್ನು ಮದುವೆ ಯಾದರೆ, ಆಕೆಯನ್ನು ಹಿಂದೂ ಎಂದು ಪರಿಗಣಿಸಲಾಗದು. ಹೀಗಾಗಿ ಅವಕಾಶ ನಿರಾಕರಿಸಲಾಯಿತು’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Folk singer; ಪದ್ಮಭೂಷಣ ಪುರಸ್ಕೃತೆ ಶಾರದಾ ಸಿನ್ಹಾ ವಿಧಿವಶ
Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Jharkhand; ಇಂಡಿಯಾ ಒಕ್ಕೂಟದ “ಸಪ್ತ ಗ್ಯಾರಂಟಿ’!: ಮಹಿಳೆಯರಿಗೆ ಮಾಸಿಕ 2,500 ರೂ.
T-Shirt: ಫ್ಲಿಪ್‌ಕಾರ್ಟ್, ಮೀಶೋದಲ್ಲಿ ಲಾರೆನ್ಸ್ ಬಿಷ್ಣೋಯ್ ಟೀಶರ್ಟ್ ಮಾರಾಟ: ಆಕ್ರೋಶ
MUST WATCH
ಹೊಸ ಸೇರ್ಪಡೆ
Deepfake: ಇನ್ಫಿ ಮೂರ್ತಿ, ಅಂಬಾನಿ ಡೀಪ್‌ಫೇಕ್ ವಿಡಿಯೋ ಬಳಸಿ 82.7 ಲಕ್ಷ ರೂ. ವಂಚನೆ
Explainer-US Result: ಅಧ್ಯಕ್ಷ ಗಾದಿ ಯಾರಿಗೆ; ಟ್ರಂಪ್ ಮುನ್ನಡೆ, 7 ರಾಜ್ಯಗಳು ನಿರ್ಣಾಯಕ!
Hunsur: ಗೃಹಿಣಿ ನಾಪತ್ತೆ :ದೂರು ದಾಖಲು; ಪತ್ತೆಗಾಗಿ ಮನವಿ
Bengaluru: ಕಳೆದ ದೀಪಾವಳಿಗಿಂತ ಶೇ.34 ತಗ್ಗಿದ ವಾಯುಮಾಲಿನ್ಯ
Crime: ಶೀಲ ಶಂಕಿಸಿ ಪತ್ನಿ ಕತ್ತು ಸೀಳಿಆತ್ಮಹತ್ಯೆಗೆ ಯತ್ನಿಸಿದ ಪತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.