ನನ್ನ ತಾಯಿ ಸೋನಿಯಾ ಹೆಚ್ಚು ಭಾರತೀಯಳು : ಬೆನ್ನುತಟ್ಟಿಕೊಂಡ ರಾಗಾ
Team Udayavani, May 10, 2018, 11:56 AM IST
ಬೆಂಗಳೂರು : ‘ನಾನು ಕಂಡ ಅನೇಕ ಭಾರತೀಯರಲ್ಲಿ ನನ್ನ ತಾಯಿ, ಸೋನಿಯಾ ಗಾಂಧಿ, ಹೆಚ್ಚು ಭಾರತೀಯಳೆಂಬುದನ್ನು ನಾನು ಕಂಡುಕೊಂಡಿದ್ದೇನೆ’ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತದೊಂದಿಗೆ ಗೆಲ್ಲುವುದು ಖಚಿತ; ಆ ಬಗ್ಗೆ ಯಾರಿಗೂ ಸಂಶಯವೇ ಬೇಡ’ ಎಂದ ರಾಹುಲ್, ಈ ಚುನಾವಣೆಯು ಎರಡು ವಿಭಿನ್ನ ಸಿದ್ಧಾಂತಗಳ ನಡುವಿನ ಹೋರಾಟವಾಗಿದೆ. ಆರ್‌ಎಸ್‌ಎಸ್ ನಮ್ಮ ಸ್ಫೂರ್ತಿಯನ್ನು ಹೊಸಕಿ ಹಾಕಲು ಹವಣಿಸುತ್ತಿದೆ; ಆದರೆ ನಾವು ಅದರ ಬಲಿಪಶುಗಳಾಗೆವು’ ಎಂಬ ಎಚ್ಚರಿಕೆಯನ್ನು ನೀಡಿದರು.
‘ಕಾಂಗ್ರೆಸ್ ಪಕ್ಷ ಬೆಂಗಳೂರನ್ನು ಅಪಾರವಾಗಿ ಬೆಂಬಲಿಸಿದೆ; ಕಾಂಗ್ರೆಸ್ ಆಡಳಿತೆಯಲ್ಲಿ ಇಡಿಯ ದೇಶದಲ್ಲೇ ಅತ್ಯಧಿಕ ಉದ್ಯೋಗಾವಕಾಶಗಳನ್ನು ಸೃಷ್ಟಿಸಿರುವ ರಾಜ್ಯವಾಗಿ ಕರ್ನಾಟಕ ನಂಬರ್ 1 ಸ್ಥಾನವನ್ನು ಪಡೆದಿದೆ. ಈ ಚುನಾವಣೆಯಲ್ಲಿ ಹೋರಾಟವು ನನ್ನ ಮತ್ತು ಪ್ರಧಾನಿ ನಡುವಿನ ಹೋರಾಟ ಅಲ್ಲ; ಬದಲು ಇದು ಜನರು ತಮ್ಮ ಬೇಕುಬೇಡಗಳನ್ನು ಗೌರವಿಸುವ ಚುನಾವಣೆಯಾಗಿದೆ’ ಎಂದು ರಾಹುಲ್ ಹೇಳಿದರು.
‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರಕ್ಕೆ ಖಚಿತವಾದ ವಿದೇಶ ನೀತಿ ಎಂಬುದಿಲ್ಲ; ಹಾಗಾಗಿ ರಶ್ಯವು ಪಾಕಿಸ್ಥಾನಕ್ಕೆ ಶಸ್ತ್ರಾಸ್ತ್ರ ಪೂರೈಸುವುದನ್ನು ನಾವು ಕಾಣುತ್ತಿದ್ದೇವೆ; ಮೋದಿ ಅವರು ಕಾರ್ಯಸೂಚಿಯೇ ಇಲ್ಲದೆ ಚೀನಕ್ಕೆ ಹೋಗಿದ್ದಾರೆ. ನಾವು ಹೇಳಿದ್ದೆವು: ಚೀನದೊಂದಿಗೆ ಡೋಕ್ಲಾಂ ಬಗ್ಗೆ ಖಡಕ್ ಆಗಿ ಮಾತನಾಡಿ ಎಂದು; ಆದರೆ ಅವರದನ್ನು ಮಾಡಲಿಲ್ಲ. ನಮ್ಮ ದೇಶದ ಮುಂದಿರುವ ಮುಖ್ಯ ಸವಾಲು ಯುವ ಜನರಿಗೆ ಉದ್ಯೋಗಾವಕಾಶ ಕಲ್ಪಿಸುವುದು; ಆದರೆ ಪ್ರಧಾನಿ ಅದನ್ನು ಮಾಡುತ್ತಿಲ್ಲ ಎಂದು ರಾಹುಲ್ ಟೀಕಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
MUST WATCH
ಹೊಸ ಸೇರ್ಪಡೆ
Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ
Bantwala: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.