![1-sidda](https://www.udayavani.com/wp-content/uploads/2025/02/1-sidda-415x281.jpg)
![1-sidda](https://www.udayavani.com/wp-content/uploads/2025/02/1-sidda-415x281.jpg)
Team Udayavani, Dec 7, 2020, 8:30 AM IST
ವಿಜಯವಾಡ: ದೇಶದಲ್ಲಿ ಕೋವಿಡ್ ಸೋಂಕು ಭೀತಿ ಇನ್ನೂ ಇರುವಾಗಲೇ ಆಂಧ್ರ ಪ್ರದೇಶದ ಹಳ್ಳಿಯೊಂದರಲ್ಲಿ ವಿಚಿತ್ರ ಕಾಯಿಲೆಯೊಂದು ಕಾಣಿಸಿಕೊಂಡಿದೆ. ಪರಿಣಾಮ ಇದುವರೆಗೆ ಓರ್ವ ಸಾವನ್ನಪ್ಪಿದ್ದು, 292 ಜನರು ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದಾರೆ.
ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಎಲೂರು ನಗರದಲ್ಲಿ ವೈದ್ಯರನ್ನೇ ದಂಗುಬಡಿಸಿದ ಈ ಘಟನೆ ನಡೆದಿದೆ. ಮೂರ್ಛೆರೋಗ ಹೋಲುವಂತಹ ಸಮಸ್ಯೆಯಿಂದ ನರಳಾಡಿ ಇದುವರೆಗೆ ಒಟ್ಟು 292 ಮಂದಿ ಆಸ್ಪತ್ರೆ ಸೇರಿದ್ದಾರೆ. ಇವರಲ್ಲಿ 46 ಮಕ್ಕಳು ಮತ್ತು 76 ಮಹಿಳೆಯರೂ ಸೇರಿದ್ದಾರೆ.
ಶನಿವಾರ ರಾತ್ರಿವರೆಗೆ ಸರ್ಕಾರಿ ಆಸ್ಪತ್ರೆಯಿಂದ 140 ಮಂದಿ ಬಿಡುಗಡೆಯಾಗಿದ್ದಾರೆ. ಅಪಸ್ಮಾರದ ಲಕ್ಷಣಗಳೊಂದಿಗೆ ವಿಜಯವಾಡದ ಸರ್ಕಾರಿ ಆಸ್ಪತ್ರೆಗೆ ದಾಖಲಾದ 45 ವರ್ಷದ ವ್ಯಕ್ತಿ ಭಾನುವಾರ ಮೃತಪಟ್ಟಿದ್ದಾರೆ.
ಆದರೆ ಎಲ್ಲ ರೀತಿಯ ವೈದ್ಯಕೀಯ ಪರೀಕ್ಷೆಯಲ್ಲೂ ಅವರಿಗೆ ಯಾವುದೇ ರೀತಿಯ ಸಮಸ್ಯೆ ಕಂಡುಬಂದಿಲ್ಲ. ವೈದ್ಯರು ಸದ್ಯ ನೀರಿನಿಂದ ಸಮಸ್ಯೆಯಾಗಿರಬಹುದಾ ಎಂದು ಪರೀಕ್ಷಿಸುತ್ತಿದ್ದಾರೆ.
ಇದನ್ನೂ ಓದಿ:ಕಮಲ ಪಡೆಯ ಗುರಿ “ಟಾರ್ಗೆಟ್ ತೆಲಂಗಾಣ-2023′
ರೋಗಿಗಳ ಮೈಯಲ್ಲಿ ವಿಪರೀತ ಸೆಳೆತ, ತಲೆನೋವು, ಬಾಯಲ್ಲಿ ನೊರೆ ಕಂಡುಬಂದಿದೆ. ಕೆಲವರ ಮೂಳೆಗಳ ಕೊಂಡಿ ಕಳಚಿದೆ. ರಕ್ತಪರೀಕ್ಷೆ, ಸಿಟಿ ಸ್ಕ್ಯಾನ್‌ನಲ್ಲಿ ಸಮಸ್ಯೆ ಕಂಡುಬಂದಿಲ್ಲ. ವಿಚಿತ್ರವೆಂದರೆ ಆಸ್ಪತ್ರೆಗೆ ಸೇರಿದವರು ಬೇರೆಬೇರೆ ಪ್ರದೇಶಕ್ಕೆ ಸೇರಿದ್ದಾರೆ. ವೈದ್ಯಕೀಯ ಪರೀಕ್ಷೆ ನಡೆಸಿದಾಗ ಅವರೆಲ್ಲರಿಗೆ ಸೋಂಕು ಇಲ್ಲವೆಂದು ದೃಢಪಟ್ಟಿದೆ.
ಈ ವಿಚಿತ್ರ ರೋಗಕ್ಕೆ ಕಾರಣವನ್ನು ಕಂಡುಹಿಡಿಯಲು ಆರೋಗ್ಯ ಅಧಿಕಾರಿಗಳು ಪ್ರದೇಶಕ್ಕೆ ಭೇಟಿ ನೀಡಿ ನೀರಿನ ಮಾದರಿಗಳು ಮತ್ತು ರಕ್ತದ ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಪೀಡಿತ ಪ್ರದೇಶಗಳಲ್ಲಿ ಪ್ರತಿ ಮನೆಯಲ್ಲೂ ಸ್ಥಳೀಯ ಅಧಿಕಾರಿಗಳು ವೈದ್ಯಕೀಯ ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ.
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
You seem to have an Ad Blocker on.
To continue reading, please turn it off or whitelist Udayavani.