3,564 ತೆರಿಗೆ ಬಾಕಿದಾರರ ಆಸ್ತಿಗಳನ್ನು ಜಪ್ತಿ ಮಾಡಿದ ಬೃಹನ್ಮುಂಬಯಿ ಮಹಾನಗರ ಪಾಲಿಕೆ
Team Udayavani, Mar 8, 2020, 6:07 PM IST
ಮುಂಬಯಿ: ಆಸ್ತಿ ತೆರಿಗೆ ಬಾಕಿದಾರರ ವಿರುದ್ಧ ತನ್ನ ಕಾರ್ಯಾಚಾರಣೆಯನ್ನು ಚುರುಕುಗೊಳಿಸಿರುವ ಬೃಹನ್ಮುಂಬಯಿ ಮಹಾನಗರ ಪಾಲಿಕೆಯು(ಬಿಎಂಸಿ)ಈವರೆಗೆ 3,500ಕ್ಕೂ ಹೆಚ್ಚು ತೆರಿಗೆ ಬಾಕಿದಾರರ ಆಸ್ತಿಗಳನ್ನು ಜಪ್ತಿ ಮಾಡಿದೆ. ಅಷ್ಟೇ ಅಲ್ಲದೆ, ಬಿಎಂಸಿಯು ಆಸ್ತಿ ತೆರಿಗೆ ಬಾಕಿಗಳಿಗಾಗಿ ಸುಮಾರು 260 ಆಸ್ತಿಗಳ ನೀರಿನ ಸಂಪರ್ಕವನ್ನು ಕೂಡ ಸ್ಥಗಿತಗೊಳಿಸಿದೆ.
ಕಳೆದ ಒಂದು ತಿಂಗಳಲ್ಲಿ ಆಸ್ತಿ ತೆರಿಗೆ ಬಾಕಿದಾರರ ವಿರುದ್ಧ ಬಿಎಂಸಿ ತನ್ನ ಅಭಿಯಾನವನ್ನು ತೀವ್ರಗೊಳಿಸಿದೆ. ಮಹಾನಗರ ಪಾಲಿಕೆಯ ಅತಿದೊಡ್ಡ ಆದಾಯ ಮೂಲವಾದ ಆಸ್ತಿ ತೆರಿಗೆ ಸಂಗ್ರಹವು ಕುಸಿಯಲು ಪ್ರಾರಂಭವಾದ ಬಳಿಕ ಪಾಲಿಕೆಯ ಕಡೆಯಿಂದ ಈ ಕ್ರಮ ಬಂದಿದೆ. 2020-21ರ ಹಣಕಾಸು ವರ್ಷದ ಬಜೆಟ್ ಮಂಡಿಸುವಾಗ ಬಿಎಂಸಿ ಆಯುಕ್ತ ಪ್ರವೀಣ್ ಪರ್ದೇಶಿ ಅವರು ಸುಮಾರು 15,000 ಕೋಟಿ ರೂ. ಮೊತ್ತದ ಆಸ್ತಿ ತೆರಿಗೆ ಬಾಕಿ ಉಳಿದಿದೆ ಎಂದಿದ್ದರು. 2019-20ರ ಆರ್ಥಿಕ ಸಾಲಿನಲ್ಲಿ ಬಿಎಂಸಿಯು 5,015.19 ಕೋಟಿ ರೂ.ಗಳ ಆಸ್ತಿ ತೆರಿಗೆಯನ್ನು ಸಂಗ್ರಹಿಸುವ ಗುರಿ ನಿಗದಿಪಡಿಸಿತ್ತು. ಆದರೆ, 2019ರ ನವೆಂಬರ್ ಅಂತ್ಯದವರೆಗೆ ಅದಕ್ಕೆ ಕೇವಲ 1,387 ಕೋಟಿ ರೂ.ಗಳ ಆಸ್ತಿ ತೆರಿಗೆ ಸಂಗ್ರಹಿಸಲು ಸಾಧ್ಯವಾಗಿದೆ. ಹಣಕಾಸು ವರ್ಷದ ಅಂತ್ಯದ ಮೊದಲು ತನ್ನ ಆದಾಯದ ಗುರಿಯಿಂದ ಹಿಂದಕ್ಕೆ ಬೀಳುವ ಭಯದಿಂದ ಬಿಎಂಸಿ ತೆರಿಗೆ ಬಾಕಿದಾರರ ಆಸ್ತಿಗಳನ್ನು ಜಪ್ತಿ ಮಾಡಲು ಹಾಗೂ ಅವರ ಚಲಿಸಬಲ್ಲ ಸೊತ್ತುಗಳನ್ನು ವಶಪಡಿಸಿಕೊಳ್ಳಲು ಪ್ರಾರಂಭಿಸಿತು.
ಮಾರ್ಚ್ ಮೊದಲ ವಾರದವರೆಗೆ ಬಿಎಂಸಿಯು ನಗರಾದ್ಯಂತ ಆಸ್ತಿ ತೆರಿಗೆ ಪಾವತಿಯನ್ನು ಬಾಕಿ ಇರಿಸಿಕೊಂಡಿರುವವರ 3,564 ಆಸ್ತಿಗಳನ್ನು ಜಪ್ತಿ ಮಾಡಿದೆ ಮತ್ತು 262 ಆಸ್ತಿಗಳ ನೀರಿನ ಸಂಪರ್ಕ ಕಡಿತಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಿಎಂಸಿಯು ತೆರಿಗೆ ಬಾಕಿದಾರರ ಆಸ್ತಿಗಳನ್ನು ಮತ್ತು ಸೊತ್ತುಗಳನ್ನು ಜಪ್ತಿ ಮಾಡಿದ ಅನಂತರ ಹೆಚ್ಚಿನವರು ತಮ್ಮ ಬಾಕಿ ಪಾವತಿಯನ್ನು ಮಾಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಬಿಎಂಸಿ ಕಡೆಯಿಂದ ಕ್ರಮಕ್ಕೊಳಗಾದ ತೆರಿಗೆ ಬಾಕಿದಾರರಲ್ಲಿ ಹೆಚ್ಚಿನವರು ಮುಲುಂಡ್, ದಹಿಸರ್, ಸಯಾನ್, ವಡಾಲಾ, ಕಿಂಗ್ಸ್ ಸರ್ಕಲ್ ಮತ್ತು ಮಾಟುಂಗಾದವರಾಗಿದ್ದಾರೆ. ಹಲವಾರು ವಸತಿ ಸೊಸೈಟಿಗಳು, ವಾಣಿಜ್ಯ ಸಂಸ್ಥೆಗಳು, ಬಿಲ್ಡರ್‌ಗಳು, ಶಿಕ್ಷಣ ಸಂಸ್ಥೆಗಳು ಇತ್ಯಾದಿಗಳ ವಿರುದ್ಧ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಆಕ್ಟ್ರಾಯ್ ಆದಾಯದ ಅನಂತರ ಆಸ್ತಿ ತೆರಿಗೆ ಬಿಎಂಸಿಯ ಪ್ರಮುಖ ಆದಾಯ ಮೂಲವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Proposes: ಪುರುಷ ಟೈಲರ್ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.