ರೆಸಾರ್ಟ್ ರಾಜಕೀಯ ನಾಗಾಲ್ಯಾಂಡ್‌ಗೆ ಶಿಫ್ಟ್
Team Udayavani, Feb 20, 2017, 3:45 AM IST
ಕೊಹಿಮಾ/ಚೆನ್ನೈ: ತಮಿಳುನಾಡಿನಲ್ಲಿ ರಾಜಕೀಯ ಹೈಡ್ರಾಮಾ ಮುಕ್ತಾಯವಾದ ಬೆನ್ನಲ್ಲೇ ಈಶಾನ್ಯ ರಾಜ್ಯ ನಾಗಾಲ್ಯಾಂಡ್‌ನಲ್ಲಿ ಮುಖ್ಯಮಂತ್ರಿ ಗಾದಿಗೆ ಗುದ್ದಾಟ ಶುರುವಾಗಿದೆ. ಭಾನುವಾರ ರಾತ್ರಿ ನಡೆದ ಬೆಳವಣಿಗೆಯಲ್ಲಿ ಹಾಲಿ ಮುಖ್ಯಮಂತ್ರಿ ಟಿ.ಆರ್.ಝೆಲಿಯಾಂಗ್ ರಾಜೀನಾಮೆ ನೀಡಿದ್ದಾರೆ. ರಾಜ್ಯಪಾಲ ಪದ್ಮನಾಭ ಆಚಾರ್ಯ ಹೊಸ ಮುಖ್ಯಮಂತ್ರಿ ಆಯ್ಕೆಯಾಗುವ ವರೆಗೆ ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರಿಯುವಂತೆ ಸೂಚಿಸಿದ್ದಾರೆ.
ಮಹತ್ವದ ಬೆಳವಣಿಗೆಯೇನೆಂದರೆ ತಮಿಳುನಾಡಿನಲ್ಲಿ ಶಾಸಕರು ಕೂವತ್ತೂರಿನ ಗೋಲ್ಡನ್ ಬೇ ರೆಸಾರ್ಟಿಗೆ ತೆರಳಿದಂತೆ ನಾಗಾ ಪೀಪಲ್ಸ್ ಫ್ರಂಟ್ ಪಕ್ಷದ ಶಾಸಕರೆಲ್ಲ ಅಸ್ಸಾಂನ ಕಾಝಿರಂಗಾ ರಾಷ್ಟ್ರೀಯ ಉದ್ಯಾನವನದಲ್ಲಿರುವ ರೆಸಾರ್ಟಲ್ಲಿ ಬೀಡು ಬಿಟ್ಟಿದ್ದಾರೆ. ಸೋಮವಾರ ಬೆಳಗ್ಗೆ 11 ಗಂಟೆಗೆ ಡಿಎಎನ್ (ಡೆಮಾಕ್ರಟಿಕ್ ಅಲಯನ್ಸ್ ಆಫ್ ನಾಗಾಲ್ಯಾಂಡ್) ಸಭೆ ನಂತರ, ಎನ್‌ಪಿಎಫ್ ಸಭೆ ನಡೆಯಲಿದೆ ಎನ್ನಲಾಗಿದೆ. ಹಾಲಿ ಸಂಸದ ನೆಪ್ಯೂ ರಿಯೋ ಮತ್ತೆ ಮುಖ್ಯಮಂತ್ರಿಯಾಗುವುದು ಬಹುತೇಕ ಖಚಿತವಾಗಿದೆ.
ಭಿನ್ನಮತಕ್ಕೆ ಕಾರಣ: ನಾಗಾಲ್ಯಾಂಡ್ ಜನಾಂಗೀಯರ ಕ್ರಿಯಾ ಸಮಿತಿ (ಎನ್‌ಟಿಎಸಿ) ಬೇಡಿಕೆಯಾದ ನಗರ ಸ್ಥಳೀಯ ಮಂಡಳಿಗಳ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ಘೋಷಣೆಯಾದ ಮೇಲೆ ರಾಜ್ಯದಲ್ಲಿ ಹಿಂಸೆ ಉಲ್ಬಣಿಸಿದೆ. ಜತೆಗೆ ಜ.31ರಂದು ಪೊಲೀಸರು ನಡೆಸಿದ ಗುಂಡಿನ ಹಾರಾಟಕ್ಕೆ ಕಾರಣರಾದವರನ್ನು ಶಿಕ್ಷಿಸಬೇಕೆಂಬ ಬೇಡಿಕೆ ಮುಂದಿಡಲಾಗಿತ್ತು.
60 ಶಾಸಕರ ವಿಧಾನಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ರಾಜ್ಯದ ಏಕೈಕ ಸಂಸದ ನೆಫ್ಯೂ ರಿಯೊಗೆ 8 ಪಕ್ಷೇತರರು ಸೇರಿ 49 ಶಾಸಕರ ಬೆಂಬಲವಿದೆ. ಸ್ಪೀಕರ್ ಸೇರಿದಂತೆ ಮೂವರು ಪಕ್ಷದ ಅಧ್ಯಕ್ಷ ಡಾ. ಶುಹೋìಜೆಲೈ ಲೈಝಿಟ್ಸು ಜೊತೆಯಲ್ಲಿದ್ದಾರೆ. ಆದರೆ, ಸಭೆಯ ನಂತರವೇ ನೈಜ ಬೆಂಬಲಿಗರ ಸಂಖ್ಯೆ ತಿಳಿದುಬರಲಿದೆ. ಶುಕ್ರವಾರ ರಾತ್ರಿ ಹಾಲಿ ಸಿಎಂ ಅನ್ನು ಝೆಲಿಯಾಂಗ್‌ರನ್ನು ಬದಲು ಮಾಡುವ ಬಗ್ಗೆ ಸಭೆ ನಡೆಸಿದ್ದಾರೆ. ಇದಾದ ಬಳಿಕ ಶಾಸಕರೆಲ್ಲ ಅಸ್ಸಾಂಗೆ ತೆರಳಿದರು. ಗಮನಾರ್ಹ ಅಂಶವೆಂದರೆ ಹಾಲಿ ವಿಧಾನಸಭೆಯಲ್ಲಿ ಬಿಜೆಪಿ ನಾಲ್ವರು ಶಾಸಕರನ್ನು ಹೊಂದಿದೆ.
ವರದಿ ಕೇಳಿದ ರಾಜ್ಯಪಾಲ: ತಮಿಳುನಾಡು ವಿಧಾನಸಭೆಯಲ್ಲಿ ಶನಿವಾರ ನಡೆದ ವಿಶ್ವಾಸ ಮತಯಾಚನೆ ವೇಳೆ ಸಂಭವಿಸಿದ ಪ್ರಕ್ಷುಬ್ಧ ವಾತಾವರಣ ಕುರಿತು ವರದಿ ನೀಡುವಂತೆ ರಾಜ್ಯಪಾಲ ವಿದ್ಯಾಸಾಗರ್ ರಾವ್ ಅವರು ಸ್ಪೀಕರ್ ಹತ್ತಿರ ಕೇಳಿದ್ದಾರೆ. ಈ ಮಧ್ಯೆ ವಿಶ್ವಾಸ ಮತ ಗೆದ್ದಿರುವ ಮುಖ್ಯಮಂತ್ರಿ ಪಳನಿಸ್ವಾಮಿ ಭಾನುವಾರ ರಾಜ್ಯಪಾಲರನ್ನು ಭೇಟಿಯಾಗಿದ್ದಾರೆ.
ಪಳನಿಸ್ವಾಮಿ ಗೆದ್ದಿರುವ ವಿಶ್ವಾಸಮತ ಯಾಚನೆಯು ವಿಧಾನಸಭೆ ನಿಯಮಗಳಿಗೆ ವಿರುದ್ಧವಾಗಿದೆ. ಈ ಸಂದರ್ಭ ಡಿಎಂಕೆ ಶಾಸಕರನ್ನು ನಿಯಮ ಮೀರಿ ಬಲವಂತವಾಗಿ ಸದನದಿಂದ ಹೊರಗಿಡಲಾಗಿತ್ತು. ನಿಯಮವನ್ನು ಸರಿಯಾಗಿ ಪಾಲಿಸಿಲ್ಲ. ಆದ್ದರಿಂದ ಈಗ ಗೆದ್ದಿರುವ ವಿಶ್ವಾಸ ಮತವನ್ನು ರದ್ದುಗೊಳಿಸಬೇಕೆಂದು ರಾಜ್ಯಪಾಲರಲ್ಲಿ ವಿರೋಧ ಪಕ್ಷದ ನಾಯಕ ಸ್ಟಾಲಿನ್ ನೇತೃತ್ವದಲ್ಲಿ ಡಿಎಂಕೆ ಆಗ್ರಹಿಸಿದೆ.
ವಿಶ್ವಾಸಮತ ಪ್ರಕ್ರಿಯೆ ನಡೆದ ರೀತಿ ಖಂಡಿಸಿ ಫೆ.22ರಿಂದ ತಮಿಳುನಾಡಿನಾದ್ಯಂತ ಡಿಎಂಕೆ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಿದೆ. ಮತ್ತೂಂದು ಬೆಳವಣಿಗೆಯಲ್ಲಿ ವಿಧಾನಸಭೆಯಲ್ಲಿ ಅನುಚಿತವಾಗಿ ದಾಂಧಲೆ ಎಬ್ಬಿಸಿದ್ದಕ್ಕಾಗಿ ಪ್ರತಿಪಕ್ಷ ನಾಯಕ ಎಂ.ಕೆ.ಸ್ಟಾಲಿನ್ ಮತ್ತು ಶಾಸಕರು, ಅನುಮತಿ ಪಡೆಯದೆ ಮರೀನಾ ಬೀಚ್‌ನಲ್ಲಿ ಪ್ರತಿಭಟನೆ ನಡೆಸಿದ್ದಕ್ಕಾಗಿ ಡಿಎಂಕೆ ಸಂಸದರು ಮತ್ತು ನಾಯಕರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಶನಿವಾರ ಏನು ನಿರ್ಣಯ ಕೈಗೊಂಡಿದ್ದೆನೋ ಅದು ತಮಿಳುನಾಡು ವಿಧಾನಸಭೆ ನಿಯಮ ಪ್ರಕಾರವೇ ಇತ್ತು. ಅದರ ಅನ್ವಯ ವಿಶ್ವಾಸಮತ ಯಾಚನೆ ಸಂದರ್ಭ ರಹಸ್ಯ ಮತದಾನಕ್ಕೆ ಅವಕಾಶ ನೀಡುವುದು ಸಾಧ್ಯವೇ ಇಲ್ಲ.
– ಪಿ.ಧನಪಾಲ್, ತಮಿಳುನಾಡು ವಿಧಾನಸಭೆ ಸ್ಪೀಕರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Full Meal: ಮಹಾಕುಂಭ ಮೇಳಕ್ಕೆ ಬರುವವರಿಗೆ ಸಿಗುತ್ತೆ 9 ರೂ.ಗೆ ಭರ್ಜರಿ ಭೋಜನ!
Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Maharashtra ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿಗೆ ಆರ್‌ಎಸ್‌ಎಸ್ ಕಾರಣ: ಶರದ್ ಪವಾರ್
Henley Passport Index: ಸಿಂಗಾಪುರಕ್ಕೆ ಮೊದಲ ಸ್ಥಾನ: ಭಾರತದ ಪಾಸ್‌ಪೋರ್ಟ್ ಎಷ್ಟು ಸದೃಢ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.