ಬಲಾಬಲ ಪರೀಕ್ಷೆಗೆ ಬಾರದ ನಾಗಾಲ್ಯಾಂಡ್ ಸಿಎಂ, ಸದನ ಮುಂದೂಡಿಕೆ
Team Udayavani, Jul 19, 2017, 11:56 AM IST
ಕೊಹಿಮಾ : ರಾಜಕೀಯ ಸಂಕಷ್ಟಕ್ಕೆ ಗುರಿಯಾಗಿರುವ ನಾಗಾಲ್ಯಾಂಡ್ ಮುಖ್ಯಮಂತ್ರಿ ಶುರೋಝೆಲಿ ಲೀಝೆತ್ಸು ಮತ್ತು ಅವರ ಬೆಂಬಲಿಗರು ಇಂದು ಬಲಾಬಲ ಪರೀಕ್ಷೆಗಾಗಿ ಸದನಕ್ಕೆ ಬರಲಿಲ್ಲ; ಹಾಗಾಗಿ ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.
ರಾಜ್ಯಪಾಲ ಪಿ ಬಿ ಆಚಾರ್ಯ ಅವರು ನಿನ್ನೆ ಮಂಗಳವಾರ ವಿಧಾನಸಭೆಯ ಸ್ಪೀಕರ್ ಇಮಿ¤ವಾಪಾಂಗ್ ಅವರಿಗೆ ಇಂದು ಬುಧವಾರ ಬೆಳಗ್ಗೆ 9.30ಕ್ಕೆ ಸದನದ ವಿಶೇಷ ಅಧಿವೇಶನ ನಡೆಸುವಂತೆ ಸೂಚಿಸಿದ್ದರು. ಆ ಪ್ರಕಾರ ಇಂದು ಸದನ ಕಲಾಪದಲ್ಲಿ ಬಲಾಬಲ ಪರೀಕ್ಷೆ ನಡೆಯುವುದಿತ್ತು. ಆದರೆ ಮುಖ್ಯಮಂತ್ರಿ ಮತ್ತು ಅವರ ಬೆಂಬಲಿಗರೇ ಸದನಕ್ಕೆ ಬರಲೇ ಇಲ್ಲ.
ಮುಖ್ಯಮಂತ್ರಿ ಶುರೋಝೆಲಿ ಲೀಝೆತ್ಸು ಅವರ ತಮ್ಮ ನಾಗಾಲ್ಯಾಂಡ್ ಪೀಪಲ್ಸ್ ಫ್ರಂಟ್ (ಎನ್ಪಿಎಫ್)ನ ಬಂಡುಕೋರ ಶಾಸಕರಿಂದ ಬಂಡಾಯವನ್ನು ಎದುರಿಸುತ್ತಿದ್ದಾರೆ.
ಎನ್ಪಿಎಫ್ ಬಂಡುಕೋರ ಶಾಸಕರ ನಾಯಕರಾಗಿರುವ ಮಾಜಿ ಮುಖ್ಯಮಂತ್ರಿ ಟಿ ಆರ್ ಝೆಲಿಯಾಂಗ್ ಅವರು ತಮ್ಮ ಬೆಂಬಲಿಗರೊಂದಿಗೆ ಸದನದಲ್ಲಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್ಶೂಟರ್ಗಳ ಬಂಧನ
L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.