ಮುಸ್ಲಿಂ ಮಹಿಳೆಯರಿಗೆ ನೇಲ್ ಪಾಲಿಶ್ ನಿಷಿದ್ಧ : ದಾರುಲ್ ಫತ್ವಾ
Team Udayavani, Nov 5, 2018, 11:41 AM IST
ಲಕ್ನೋ : ವೈವಿಧ್ಯಮಯ ಫತ್ವಾ ಗಳನ್ನು ಹೊರಡಿಸುವುದಕ್ಕೆ ಹೆಸರುವಾಸಿಯಾಗಿ ದಾರುಲ್ ಉಲೂಮ್ ದೇವಬಂದ್ ಇಸ್ಲಾಮಿಕ್ ಸೆಮಿನರಿ, ಇದೀಗ ಮುಸ್ಲಿಂ ಮಹಿಳೆಯರು ಉಗುರು ಕತ್ತರಿಸಿಕೊಂಡು ನೇಲ್ ಪಾಲಿಶ್ ಹಾಕಿಕೊಳ್ಳುವುದನ್ನು ನಿಷೇಧಿಸಿ ಫತ್ವಾ ಹೊರಡಿಸಿದೆ.
ಹಾಗಿದ್ದರೂ ಮುಸ್ಲಿಂ ಮಹಿಳೆಯರು ತಮ್ಮ ಉಗುರುಗಳಿಗೆ ಮೆಹೆಂದಿ ಹಾಕುವುದನ್ನು ಅದು ಆಕ್ಷೇಪಿಸಿಲ್ಲ.
ಮುಸ್ಲಿಂ ಮಹಿಳೆಯರು ಉಗುರು ಕತ್ತರಿಸಿಕೊಂಡು ನೇಲ್ ಪಾಲಿಶ್ ಹಾಕಿಕೊಳ್ಳುವುದು ಇಸ್ಲಾಂ ವಿರೋಧಿ ಎಂದು ದಾರುಲ್ ಉಲೂಮ್ ದೇವಬಂದ್ ಹೇಳಿದೆ. ಇದಕ್ಕೆ ಬದಲಾಗಿ ಮುಸ್ಲಿ ಮಹಿಳೆಯರು ತಮ್ಮ ಉಗುರಿನ ಮೇಲೆ ಮೆಹೆಂದಿ ಹಾಕಬಹುದಾಗಿ ಎಂದು ಸ್ಪಷ್ಟಪಡಿಸಿದೆ.
ದಾರುಲ್ ಉಲೂಮ್ ದೇವಬಂದ್ ನ ಸದಸ್ಯರಾಗಿರುವ ಮುಫ್ತಿ ಇಶ್ರಾರ್ ಗೌರಾ ಈ ಹೊಸ ಫತ್ವಾ ವಿವರ ನೀಡಿದ್ದಾರೆ.
ಕಳೆದ ವರ್ಷ ಇದೇ ಸೆಮಿನರಿ ಮುಸ್ಲಿಂ ಮಹಿಳೆಯರು ತಮ್ಮ ಹುಬ್ಬಿನ ಕೂದಲನ್ನು ಕೀಳುವುದು, ಕತ್ತರಿಸಿಕೊಳ್ಳುವುದು, ಶೇಪ್ ಮಾಡಿಕೊಳ್ಳುವುದು ಮತ್ತು ತಲೆಕೂದಲು ಕತ್ತರಿಸಿಕೊಳ್ಳುವುದು ಇಸ್ಲಾಂ ವಿರೋಧಿ ಎಂದು ಹೇಳಿ ಇವನ್ನು ನಿಷೇಧಿಸಿ ಫತ್ವಾ ಹೊರಡಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.