ಮುಖ್ಯ ಸ್ಥಳಗಳಿಗೆ ಪೊಲೀಸ್ ಹುತಾತ್ಮರ ಹೆಸರು: ಶಾ
Team Udayavani, Jun 28, 2019, 5:03 AM IST
ಶ್ರೀನಗರ: ಜಮ್ಮು -ಕಾಶ್ಮೀರದಲ್ಲಿ ಉಗ್ರರು ಮತ್ತು ಭಯೋತ್ಪಾದಕರ ವಿರುದ್ಧ ಪೊಲೀಸರು ಕೆಚ್ಚೆದೆಯಿಂದ ಹೋರಾಟ ನಡೆಸುತ್ತಿರುವುದು ಶ್ಲಾಘನೀಯ. ವಿದ್ರೋಹಿಗಳ ವಿರುದ್ಧ ನಡೆದ ಹೋರಾಟದಲ್ಲಿ ಹುತಾತ್ಮರಾದ ಪೊಲೀಸರ ಹೆಸರನ್ನು ಕಣಿವೆ ರಾಜ್ಯದ ಪ್ರಮುಖ ಸ್ಥಳಗಳಿಗೆ ಇರಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ತಿಳಿಸಿದ್ದಾರೆ. ಗೃಹ ಸಚಿವರ ಎರಡು ದಿನಗಳ ಪ್ರವಾಸದ ಬಗ್ಗೆ ಗೃಹ ಸಚಿವಾಲಯದ ವಿಶೇಷ ಕಾರ್ಯದರ್ಶಿ ಎ.ಪಿ.ಮಾಹೇಶ್ವರಿ ಮತ್ತು ಮುಖ್ಯ ಕಾರ್ಯದರ್ಶಿ ಬಿ.ವಿ.ಆರ್.ಸುಬ್ರಹ್ಮಣ್ಯಂ ವಿವರ ನೀಡಿದ್ದಾರೆ.
ಉಗ್ರವಾದ ಹರಡುವರು ಮತ್ತು ಅವರಿಗೆ ಹಣಕಾಸಿನ ನೆರವು ನೀಡುವವರ ವಿರುದ್ಧ ಶೂನ್ಯ ಸಹನೆಯ ನಿಲುವು ತಳೆಯುವಂತೆ ಸೂಚಿಸಿದ್ದಾರೆ. ಜು.1ರಿಂದ ಅಮರನಾಥ ಯಾತ್ರೆ ಶುರುವಾಗಲಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ಭದ್ರತಾ ಕ್ರಮಗಳು, ಮುನ್ನೆಚ್ಚರಿಕಾ ವಿಚಾರಗಳನ್ನು ಕೈಗೊಂಡಿದೆ ಎಂದು ಎ.ಪಿ.ಮಾಹೇಶ್ವರಿ ಮತ್ತು ಬಿ.ವಿ.ಆರ್.ಸುಬ್ರಹ್ಮಣ್ಯಂ ಹೇಳಿದ್ದಾರೆ.
ದೇಶಕ್ಕೇ ಹೆಮ್ಮೆ: ಅನಂತನಾಗ್ ಜಿಲ್ಲೆಯಲ್ಲಿ ಜೂ.12ರಂದು ಉಗ್ರಗಾಮಿಗಳ ದಾಳಿಯಿಂದ ಅಸುನೀಗಿದ ಪೊಲೀಸ್ ಅಧಿಕಾರಿ ಅರ್ಶದ್ ಅಹ್ಮದ್ ನಿವಾಸಕ್ಕೆ ಕೇಂದ್ರ ಗೃಹ ಸಚಿವರು ಭೇಟಿ ನೀಡಿದರು. ಅವರ ತಂದೆ-ತಾಯಿ ಮುಶಾ¤ಕ್ ಅಹ್ಮದ್ ಖಾನ್ ಮತ್ತು ಮೆಹಬೂಬಾ ಬೇಗಂರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. “ದೇಶವೇ ನಿಮ್ಮ ಪುತ್ರನ ತ್ಯಾಗದ ಬಗ್ಗೆ ಹೆಮ್ಮೆ ಪಡುತ್ತಿದೆ’ ಎಂದು ಕೊಂಡಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PMML: ನೆಹರು ಅವರ ಪತ್ರ ಸಂಗ್ರಹವನ್ನು ಮರಳಿಸಿ: ರಾಹುಲ್ ಗೆ ಕೇಂದ್ರದ ಪತ್ರ
Road Mishap: ಟ್ರಕ್ ಚಾಲಕನ ಅವಾಂತರಕ್ಕೆ 6 ಮಂದಿ ಸ್ಥಳದಲ್ಲೇ ಮೃತ್ಯು, 7 ಮಂದಿ ಗಂಭೀರ
ಕಾಶ್ಮೀರದಲ್ಲಿ ಮಾದಕ ಜಾಲ: 8,000 ಕೆ.ಜಿ. ಡ್ರಗ್ಸ್ ವಶ- 5ವರ್ಷದಲ್ಲಿ 6,500 ಪ್ರಕರಣ
Ayodhya’s Shri Ram Mandir: ಅಯೋಧ್ಯೆ ರಾಮಮಂದಿರ ಯೋಜನೆಗೆ ಸ್ವೋ ರ್ಡ್ ಆಫ್ ಆನರ್ ಕಿರೀಟ
Humpback whale: 13,046 ಕಿ.ಮೀ. ಕ್ರಮಿಸಿದ ತಿಮಿಂಗಿಲ: ದೀರ್ಘ ಯಾನ
MUST WATCH
ಹೊಸ ಸೇರ್ಪಡೆ
Stock Market: ಷೇರುಪೇಟೆ ಸೂಚ್ಯಂಕ 400ಕ್ಕೂ ಅಧಿಕ ಅಂಕ ಕುಸಿತ, ನಿಫ್ಟಿಯೂ ಇಳಿಕೆ
Shimoga; ನಮ್ಮ ನಾಯಕರು ಗಮನ ಹರಿಸಲಿ: ಕುಮಾರ್ ಬಂಗಾರಪ್ಪ ಹೇಳಿಕೆಗೆ ರಾಘವೇಂದ್ರ ತಿರುಗೇಟು
Child marriage: 3 ವರ್ಷದಲ್ಲಿ ರಾಜ್ಯಾದ್ಯಂತ 1,465 ಬಾಲ್ಯ ವಿವಾಹ ಪತ್ತೆ
Mangaluru: ಸಿಟಿ ಸೆಂಟರ್ ಬಳಿ ಹೊತ್ತಿ ಉರಿದ ಕಾರು… ಮಹಿಳೆ ಪಾರು
Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.