ನಾರಾಯಣ್‌ ರಾಣೆ ಆತ್ಮಚರಿತ್ರೆ ವಿವಾದ:ಆರೋಪಕ್ಕೆ ಶಿವಸೇನೆ ಪ್ರತಿದಾಳಿ

Team Udayavani, May 10, 2019, 2:09 PM IST

uddhav-thackeray

ಮುಂಬಯಿ: ಮಹಾರಾಷ್ಟ್ರ ಸ್ವಾಭಿಮಾನಿ ಪಕ್ಷದ ಮುಖ್ಯಸ್ಥ ಮತ್ತು ರಾಜ್ಯಸಭಾ ಸಂಸದ ನಾರಾಯಣ್‌ ರಾಣೆ ಅವರ ಆತ್ಮಚರಿತ್ರೆಯು ಬಿಡುಗಡೆ ಆಗುವುದಕ್ಕಿಂತ ಮೊದಲೇ ವಿವಾದಗಳಿಗೆ ಈಡಾಗಿದೆ.

ಪುಸ್ತಕದಲ್ಲಿ ಶಿವಸೇನೆ ಅಧ್ಯಕ್ಷ ಉದ್ಧವ್‌ ಠಾಕ್ರೆ ವಿರುದ್ಧ ರಾಣೆ ಅವರ ಭಾವೋದ್ರೇಕ ಆರೋಪಗಳ ಬಳಿಕ ಪಕ್ಷವು ಅವರ ವಿರುದ್ಧ ಪ್ರತಿದಾಳಿ ನಡೆಸಿದೆ. ಸಿಂಧುದುರ್ಗದಿಂದ ಶಿವಸೇನೆ ಶಾಸಕ ವೈಭವ್‌ ನಾೖಕ್‌ ಅವರು ರಾಣೆ ಅವರ ವಿರುದ್ಧ ವಾಗ್ಧಾಳಿ ನಡೆಸುತ್ತ, ಬೇರೆಯವರ ಮೇಲೆ ಆರೋಪಗಳನ್ನು ಹೊರೆಸುವುದೇ ರಾಣೆ ಅವರ ಪಾತ್ರವಾಗಿದೆ ಎಂದು ಕಿಡಿಕಾರಿದ್ದಾರೆ. ಶ್ರೀಧರ್‌ ನಾೖಕ್‌ ಹತ್ಯೆ ಪ್ರಕರಣ ಹಾಗೂ ಚೆಂಬೂರ್‌ ಮತ್ತು ಕೊಂಕಣದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಗಳ ಬಗ್ಗೆ ರಾಣೆ ಅವರು ತಮ್ಮ ಆತ್ಮಚರಿತ್ರೆಯಲ್ಲಿ ಸ್ಪಷ್ಟೀಕರಣವನ್ನು ನೀಡುವರೇ? ಎಂದು ನಾೖಕ್‌ ಪ್ರಶ್ನಿಸಿದ್ದಾರೆ.

ಕೇವಲ ಪ್ರಚಾರ ಗಿಟ್ಟಿಸಿಕೊಳ್ಳುವುದೇ ರಾಣೆ ಅವರ ಕಾಯಕವಾಗಿದೆ. ಉದ್ಧವ್‌ ಠಾಕ್ರೆ ಮತ್ತು ಚಂದ್ರಕಾಂತ್‌ ಪಾಟೀಲ್‌ ವಿರುದ್ಧ ಹೇಳಿಕೆಗಳನ್ನು ನೀಡುವುದರಿಂದ ಅವರಿಗೆ ಯಾವುದೇ ಪ್ರಯೋಜನವಾಗಲ್ಲ ಎಂದವರು ಹೇಳಿದ್ದಾರೆ. ಉದ್ಧವ್‌ ಠಾಕ್ರೆ ಅವರು ಪಕ್ಷವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ. ಅವರ ನಾಯಕತ್ವದಲ್ಲಿ ಪಕ್ಷವು ರಾಜ್ಯದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ರಾಣೆ ಅವರನ್ನು ಶಿವಸೇನೆಯಿಂದ ಹೊರಹಾಕಿದ ಬಳಿಕ ಕೊಂಕಣದಿಂದ ಪಕ್ಷದ ಹೆಚ್ಚು ಶಾಸಕರು ಚುನಾಯಿತರಾಗಿದ್ದಾರೆ ಎಂದು ವೈಭವ್‌ ನಾೖಕ್‌ ಹೇಳಿದ್ದಾರೆ.

ತನ್ನನ್ನು ಪಕ್ಷದಿಂದ ಹೊರಹಾಕಲು ಉದ್ಧವ್‌ ಠಾಕ್ರೆ ಅವರು ತಮ್ಮ ಪತ್ನಿ ರಶ್ಮಿ ಜತೆಗೆ ಮಾತೋಶ್ರೀ (ಠಾಕ್ರೆ ಅವರ ನಿವಾಸ) ಬಿಟ್ಟು ಹೋಗುವ ಬೆದರಿಕೆ ಹಾಕಿದ್ದರು ಎಂದು ರಾಣೆ ಅವರು ತಮ್ಮ ಜೀವನಚರಿತ್ರೆ “ನೊ ಹೋಲ್‌ಡ್ಸ್‌ ಬೇರ್ಡ್‌ – ಮೈ ಇಯರ್ಸ್‌ ಇನ್‌ ಪಾಲಿಟಿಕ್ಸ್‌ನಲ್ಲಿ ಪ್ರತಿಪಾದಿಸಿದ್ದಾರೆ.

ರಾಣೆ ಅವರ ಸ್ವಭಾವ ಎಲ್ಲರಿಗೂ ಗೊತ್ತಿದೆ. ಇಂಥದರಲ್ಲಿ ಅವರ ಜೀವನಚರಿತ್ರೆಯನ್ನು ಯಾರು ಓದುತ್ತಾರೆ. ತನ್ನನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಿದ ಪಕ್ಷದ ಬಗ್ಗೆಯೇ ಅವರು ಕೆಟ್ಟ ಆರೋಪಗಳನ್ನು ಹೊರೆಸುತ್ತಿದ್ದಾರೆ. ರಾಣೆ ಅವರ ಈ ನಡೆಯಿಂದಲೇ ಅವರ ಸ್ವಭಾವ ಏನೆಂದು ಅರ್ಥವಾಗುತ್ತದೆ ಎಂದು ಶಿವಸೇನೆ ವಕ್ತಾರೆ ಮನೀಷಾ ಕಾಯಂದೆ ಹೇಳಿದ್ದಾರೆ.

ತನ್ನ ಜೀವನಚರಿತ್ರೆಯಿಂದ ಯುವ ಜನತೆಗೆ ಪ್ರೇರಣೆ ಸಿಗುತ್ತದೆ ಎಂದು ರಾಣೆ ಭಾವಿಸಿದ್ದಾರೆ. ಆದರೆ, ಕೇವಲ ಹುದ್ದೆಗಾಗಿ ಹಲವು ಪಕ್ಷಗಳನ್ನು ಸೇರಿಕೊಂಡಿರುವ ಅವಕಾಶವಾದಿ ನಾಯಕನಿಂದ ಯುವ ಜನರಿಗೆ ಕಲಿಯಲು ಸಿಗುವುದಾದರೂ ಏನು ?ಎಂದು ಮನೀಷಾ ಪ್ರಶ್ನಿಸಿದ್ದಾರೆ. ರಾಣೆ ಅವರ ಜೀವನಚರಿತ್ರೆಯನ್ನು ಮನೀಷಾ ಪ್ರಚಾರ ತಂತ್ರ ಎಂದು ಬಣ್ಣಿಸಿದ್ದಾರೆ.

ರಾಣೆ ಅವರು ತಮ್ಮ ಆತ್ಮಚರಿತ್ರೆಯಲ್ಲಿ ಇನ್ನೂ ಹಲವಾರು ಆಘಾತಕಾರಿ ಅಂಶಗಳನ್ನು ಬಹಿರಂಗಪಡಿಸಿ¨ªಾರೆ. ಬಿಜೆಪಿಯಲ್ಲಿ ಎರಡನೇ ಸ್ಥಾನದಲ್ಲಿರುವ ನಾಯಕ ಚಂದ್ರಕಾಂತ್‌ ಪಾಟೀಲ್‌ ಅವರ ಕಾರಣದಿಂದಾಗಿ ತನಗೆ ಬಿಜೆಪಿಯಲ್ಲಿ ಸೇರಲು ಸಾಧ್ಯವಾಗಿಲ್ಲ ಎಂದು ರಾಣೆ ಆರೋಪಿಸಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರ ಉಪಸ್ಥಿತಿಯಲ್ಲಿ ರಾಣೆ ಅವರು ತಮ್ಮ ಆತ್ಮಚರಿತ್ರೆಯನ್ನು ಅಧಿಕೃತವಾಗಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ.

ರಾಣೆ ಆರೋಪಗಳನ್ನು ತಿರಸ್ಕರಿಸಿದ ಮನೋಹರ್‌
ಶಿವಸೇನೆ ಹಿರಿಯ ನಾಯಕ ಮನೋಹರ್‌ ಜೋಶಿ ಕೂಡ ರಾಣೆ ಅವರ ಆರೋಪಗಳನ್ನು ಖಂಡಿಸಿದ್ದಾರೆ. ರಾಣೆಯನ್ನು ಪಕ್ಷದಿಂದ ಹೊರಹಾಕಲು ಉದ್ಧವ್‌ ಠಾಕ್ರೆ ಅವರು ಮಾತೋಶ್ರೀಯನ್ನು ತೊರೆಯುವ ಬೆದರಿಕೆ ಹಾಕಿರುವ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಯಾರಿಗೆ ಸರಿಯಾದ ವಿದ್ಯೆ ಸಿಗುವುದಿಲ್ಲವೋ ಅವರು ಇಂತಹ ಆರೋಪಗಳನ್ನು ಮಾಡುತ್ತಾರೆ ಎಂದು ಜೋಶಿ ನುಡಿದಿದ್ದಾರೆ.

ಟಾಪ್ ನ್ಯೂಸ್

Congress; Dinner meeting does not need political significance: Satish Jarkiholi

Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್‌ ಜಾರಕಿಹೊಳಿ

prahlad jo shi

Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು‌ ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ

ಈಶ್ವರಪ್ಪ

Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್‌ ಪರದಾಟ

Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್‌ ಪರದಾಟ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

train

Tragedy: ರೈಲು ಹಳಿ ಮೇಲೆ ಕೂತು PUBG ಆಡುತ್ತಿದ್ದ ಮೂವರು ಯುವಕರ ದೇಹ ಛಿದ್ರ ಛಿದ್ರ…

ಉತ್ತರ ಭಾರತದಲ್ಲಿ ದಟ್ಟ ಮಂಜು, ಶೂನ್ಯ ಗೋಚರತೆ: ವಿಮಾನಗಳು, ರೈಲು ಸಂಚಾರದ ಮೇಲೆ ಪರಿಣಾಮ

Fog: ಉತ್ತರ ಭಾರತದಲ್ಲಿ ದಟ್ಟ ಮಂಜು, ಶೂನ್ಯ ಗೋಚರತೆ: ವಿಮಾನ, ರೈಲು ಸಂಚಾರದ ಮೇಲೆ ಪರಿಣಾಮ

Video: ವೇದಿಕೆ ಮೇಲಿಂದ ಕೆಳಗೆ ಬಿದ್ದ ಕೇರಳ ಶಾಸಕಿ ಉಮಾ ಥಾಮಸ್… ಸ್ಥಿತಿ ಗಂಭೀರ

Video: ವೇದಿಕೆ ಮೇಲಿಂದ ಕೆಳಗೆ ಬಿದ್ದ ಕೇರಳ ಶಾಸಕಿ ಉಮಾ ಥಾಮಸ್… ಸ್ಥಿತಿ ಗಂಭೀರ

Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ

Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

9-ckm

Chikkamagaluru: ರಾಜ್ಯ ಹೆದ್ದಾರಿ ರಸ್ತೆಯಲ್ಲಿ ರೌಂಡ್ಸ್ ಹಾಕಿದ ಒಂಟಿಸಲಗ

Congress; Dinner meeting does not need political significance: Satish Jarkiholi

Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್‌ ಜಾರಕಿಹೊಳಿ

8

Udupi: ಬೀದಿ ನಾಯಿಗಳಿಗೆ 29.13 ಲಕ್ಷ ರೂ. ವೆಚ್ಚ!

prahlad jo shi

Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು‌ ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ

7

Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.