ಚಕ್ಕರ್ ಸಂಸದರಿಗೆ ಪ್ರಧಾನಿ ಚಾಟಿ
Team Udayavani, Jul 17, 2019, 5:05 AM IST
ಹೊಸದಿಲ್ಲಿ: “ಎಲ್ಲ ಸಂಸದರೂ ಸಂಸತ್ ಕಲಾಪಗಳ ವೇಳೆ ಹಾಜರಿರಬೇಕು. ಸುಖಾ ಸುಮ್ಮನೆ ಸದನಕ್ಕೆ ಗೈರಾಗುವುದನ್ನು ನಾನು ಸಹಿಸುವುದಿಲ್ಲ. ಇಂದು ಸಂಜೆಯೊಳಗೆ ನನಗೆ ಗೈರಾದವರ ಪಟ್ಟಿ ಬೇಕು’.
-ಹೀಗೆಂದು ಖಡಕ್ಕಾಗಿ ಪಕ್ಷದ ಸಂಸದರಿಗೆ ಚಾಟಿ ಬೀಸಿರುವುದು ಪ್ರಧಾನಿ ನರೇಂದ್ರ ಮೋದಿ. ಪಕ್ಷದ ಸಂಸದರು ಸದನಕ್ಕೆ ಗೈರಾಗುತ್ತಿರುವ ಬಗ್ಗೆ ತಿಂಗಳಲ್ಲಿ ಎರಡನೇ ಬಾರಿಗೆ ಅಸಮಾಧಾನ ಹೊರಹಾಕಿರುವ ಮೋದಿ, ಮಂಗಳವಾರ ನಡೆದ ಸಂಸದೀಯ ಪಕ್ಷದ ಸಭೆಯಲ್ಲಿ ಸಂಸದರ ಚಳಿ ಬಿಡಿಸಿದ್ದಾರೆ.
ಸದನದಲ್ಲಿ ಹಾಜರಿರಬೇಕೆಂದು ಸೂಚಿಸಿದ್ದರೂ ಅನೇಕರು ಗೈರಾಗಿರುವುದು ಗೊತ್ತಾಗಿದೆ. ನಿಮ್ಮ ನಿಮ್ಮ ಕರ್ತವ್ಯಗಳನ್ನು ಅರಿತುಕೊಳ್ಳಿ. ಅಶಿಸ್ತನ್ನು ನಾನು ಸಹಿಸಲ್ಲ. ಯಾರ್ಯಾರು ಸದನಕ್ಕೆ ಹಾಜರಾಗಿಲ್ಲವೋ ಅಂಥವರ ಪಟ್ಟಿ ನನಗೆ ಇಂದು ಸಂಜೆಯೊಳಗೆ ಬೇಕು ಎಂದು ಹೇಳಿದ್ದಾರೆ. ಇದೇ ವೇಳೆ, ಅಗತ್ಯಬಿದ್ದರೆ ಸರಕಾರದ ಅಜೆಂಡಾಗಳನ್ನು ಅಂಗೀಕಾರಗೊಳಿಸುವ ಉದ್ದೇಶದಿಂದ ಪ್ರಸ್ತುತ ಅಧಿವೇಶನದ ಅವಧಿಯನ್ನು ವಿಸ್ತರಿಸಲಾಗುತ್ತದೆ ಎಂದೂ ತಿಳಿಸಿದ್ದಾರೆ.
ಅಭಿವೃದ್ಧಿ ಕಾರ್ಯದಲ್ಲಿ ಮೊದಲಿಗರಾಗಿ
ಕುಷ್ಠ ರೋಗ, ಕ್ಷಯ ಸಹಿತ ಜನರಿಗೆ ತೊಂದರೆ ಯಾಗುವಂಥ ಸಮಸ್ಯೆಗಳ ಪರಿಹಾರದತ್ತ ಗಮನ ಹರಿಸ ಬೇಕು. ಸಂಸದರು ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಲ್ಲಿ ಮೊದ ಲಿಗರಾಗಬೇಕು ಎಂದೂ ಪ್ರಧಾನಿ ಮೋದಿ ಕಿವಿಮಾತು ಹೇಳಿದ್ದಾರೆ. ಈ ನಿಟ್ಟಿನಲ್ಲಿ ಮೊದಲು ರೂಪು ಗೊಳ್ಳುವ ಅಭಿಪ್ರಾಯವೇ ಕೊನೆಯವರೆಗೂ ಇರುತ್ತದೆ ಎಂದು ಪಕ್ಷದ ವತಿಯಿಂದ ಮೊದಲ ಬಾರಿಗೆ ಆಯ್ಕೆಯಾದ ಸಂಸದರನ್ನು ಉದ್ದೇಶಿಸಿ ತಿಳಿಸಿದ್ದಾರೆ. ಮಹಾತ್ಮಾ ಗಾಂಧೀಜಿಯವರ ಹೇಳಿಕೆಯನ್ನು ಪ್ರಸ್ತಾವಿಸಿದ ಪ್ರಧಾನಿ ಮೋದಿ ಕುಷ್ಠ ರೋಗಿಗಳಿಗೆ ಸಂಬಂಧಿಸಿದ ಆಸ್ಪತ್ರೆ ಉದ್ಘಾಟನೆಗೆ ಮಹಾತ್ಮಾ ಗಾಂಧಿ ಅವರನ್ನು ಆಹ್ವಾನಿಸಿದ್ದಾಗ ಅದಕ್ಕೆ ಬೀಗ ಹಾಕಿ. ಆಸ್ಪತ್ರೆ ಉದ್ಘಾಟನೆಯ ಬದಲಾಗಿ, ರೋಗ ನಿವಾರಣೆ ನಿಟ್ಟಿನಲ್ಲಿ ಮುಂಜಾಗರೂಕತೆ, ಜಾಗೃತಿ ರೂಪಿಸುವ ಕ್ರಮಗಳು ಬೇಕು ಎಂದಿದ್ದರು. ಅದೇ ರೀತಿ ಸಂಸದರೂ ಕಾರ್ಯ ಪ್ರವೃತ್ತರಾಗಬೇಕು ಎಂದು ಮೋದಿ ಅವರು ಸಲಹೆ ನೀಡಿದ್ದಾಗಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
MUST WATCH
ಹೊಸ ಸೇರ್ಪಡೆ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.