‘ಕಾಂಗ್ರೆಸ್‌ ಹಠಾವೋ’ ಎಂದು ಬಡತನವೂ ಹೇಳುತ್ತಿದೆ : ಮೈಸೂರಿನಲ್ಲಿ ಮೋದಿ ಮಾತಿನ ಮೋಡಿ

ಆದರಣೀಯ ನಾಗರಿಕ ಬಂಧುಗಳೇ ನಿಮಗೆ ಚೌಕಿದಾರನ ನಮನಗಳು...: ಮೈಸೂರಿನಲ್ಲಿ ನರೇಂದ್ರ ಮೋದಿ ಚುನಾವಣಾ ಪ್ರಚಾರ

Team Udayavani, Apr 9, 2019, 5:25 PM IST

Mysore-Modi-726

ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಮತ್ತು ಕೊಡಗು ಜಿಲ್ಲೆಗಳ ಆದರಣೀಯ ನಾಗರಿಕ ಬಂಧುಗಳೇ ನಿಮಗೆಲ್ಲಾ ನಿಮ್ಮ ಚೌಕಿದಾರನ ನಮನಗಳು ಎಂದು ಕನ್ನಡದಲ್ಲಿ ತಮ್ಮ ಭಾಷಣವನ್ನು ಪ್ರಾರಂಭಿಸಿದ ಮೋದಿ.

ಪ್ರಧಾನಿ ಮೋದಿ ಅವರ ಭಾಷಣದ ಮುಖ್ಯಾಂಶಗಳು ಇಲ್ಲಿದೆ:
– ಮೈಸೂರಿನ ಅಧಿದೇವತೆ ಚಾಮುಂಡೇಶ್ವರಿ ಸಹಿತ ಈ ನಾಡಿನ ಎಲ್ಲಾ ದೇವರಿಗೂ ನನ್ನ ನಮನಗಳು.
– ನಮ್ಮ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಮೈಸೂರಿನಲ್ಲಿ ಪಾಸ್‌ ಪೋರ್ಟ್‌ ಕೇಂದ್ರವನ್ನು ತೆರೆಯಲಾಗಿದೆ ಇದರಿಂದ ಈ ಭಾಗದ ಬಹಳಷ್ಟು ಜನರಿಗೆ ಉಪಯೋಗವಾಗಿದೆ ಎಂದು ನನಗೆ ತಿಳಿಯಿತು.
– ಈ ಮೊದಲು ನಾನು ಮೈಸೂರಿಗೆ ಬಂದಿದ್ದಾಗ ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಶಿಲಾನ್ಯಾಸ ಮಾಡಿದ್ದೆ.
– ಮುಂಬರುವ ದಿನಗಳಲ್ಲಿ ಉಡಾನ್‌ ಯೋಜನೆಯ ಲಾಭ ನಿಮಗೆ ಆಗಲಿದೆ.
– ನಮ್ಮ ಸಂಕಲ್ಪ ಪತ್ರದಲ್ಲಿ ದೇಶವನ್ನು ಬಲಿಷ್ಟಗೊಳಿಸುವ ನಿರ್ಧಾರ ಕೈಗೊಂಡಿದ್ದೇವೆ.
– ದೇಶದಲ್ಲಿ ಡಾಕ್ಟರ್‌ ಗಳ ಸಂಖ್ಯೆಯನ್ನು ಹೆಚ್ಚಿಸಲಿದ್ದೇವೆ. ಉದ್ದಿಮೆದಾರರಿಗೆ ಸುಲಭ ವಿಧಾನದಲ್ಲಿ ಸಾಲ ನೀಡಲಿದ್ದೇವೆ.
– ನಮ್ಮ ಮತ್ತು ಕಾಂಗ್ರೆಸ್‌ ಪ್ರಣಾಳಿಕೆಗಳಲ್ಲಿ ಬಹಳಷ್ಟು ವ್ಯತ್ಯಾಸವಿದೆ. ಅವರ ಯೋಚನೆ ಕೇವಲ ಮೋದಿಯನ್ನು ಅಧಿಕಾರದಿಂದ ಕೆಳಗಿಳಿಸಿವುದಷ್ಟೇ ಆಗಿದೆ. ‘ಮೋದಿ ಹಠಾವೋ’ ಅವರ ಮೂಲಮಂತ್ರವಾಗಿದೆ.
– ಆದರೆ ನಿಮ್ಮ ಇರಾದೆ ಏನು..? ನಿಮ್ಮ ಪ್ರೀತಿ ಅವರ ನಿದ್ದೆಗೆಡಿಸಿದೆ.
– ಕಳೆದ 60 ವರ್ಷಗಳಲ್ಲಿ ಕಾಂಗ್ರೆಸ್‌ ಪಕ್ಷ ‘ಗರೀಬಿ ಹಠಾವೋ’ ಮಂತ್ರ ಜಪಿಸುತ್ತಿದೆ. ಇದೀಗ ಗರೀಭಿಯೂ ಸಹ ಹೇಳುತ್ತಿದೆ ಕಾಂಗ್ರೆಸ್‌ ಹಠಾವೋ.. ಆಗ ಈ ದೇಶದಿಂದ ಗರೀಭಿ ತನ್ನಿಂತಾನೆ ದೂರವಾಗುತ್ತದೆ.
– ನಾನು ಅಧಿಕಾರದಲ್ಲಿರುವತನಕ ಈ ದೇಶದ ಪ್ರತಿಯೊಬ್ಬ ತೆರಿಗೆದಾರನಿಗೂ ಮಾನ್ಯತೆ ದೊರೆಯುತ್ತದೆ.
– ನಾನು ಅಧಿಕಾರದಲ್ಲಿರುವತನಕ ಈ ದೇಶದ ಪ್ರತಿಯೊಬ್ಬ ತೆರಿಗೆದಾರನಿಗೂ ಮಾನ್ಯತೆ ದೊರೆಯುತ್ತದೆ.
– ನಮ್ಮ ಸರಕಾರ 5 ಲಕ್ಷದವರೆಗಿನ ಆದಾಯಕ್ಕೆ ಯಾವುದೇ ರೀತಿಯ ತೆರಿಗೆ ವಿಧಿಸುತ್ತಿಲ್ಲ. ಅವರು ಅಧಿಕಾರದಲ್ಲಿದ್ದಾಗ ಈ ಸೌಲಭ್ಯವನ್ನು ನಿಮಗೆ ನೀಡಿದ್ದರೇ?
– ನಮ್ಮ ಅಧಿಕಾರವಧಿಯಲ್ಲಿ ನಿಮ್ಮ ಜೇಬಿಗೆ ಎಂದೂ ಕತ್ತರಿ ಹಾಕಿಲ್ಲ. ವಸ್ತುಗಳ ಬೆಲೆಯನ್ನು ನಿಯಂತ್ರಿಸಿದ್ದೇವೆ.
– ಕಾಂಗ್ರೆಸ್‌ ಈ ದೇಶಕ್ಕೆ 2ಜಿ ಹಗರಣ ನೀಡಿತು ಆದರೆ ನಮ್ಮ ಸರಕಾರ ಈ ದೇಶದ ಜನರಿಗೆ ಉತ್ತಮ ಸ್ಮಾರ್ಟ್‌ ಫೋನ್‌ ಮತ್ತು ವೇಗದ ಮೊಬೈಲ್‌ ಡೇಟಾ ನೀಡಿದೆ.
– ಕಾಂಗ್ರೆಸ್‌ ನದ್ದು ತುಷ್ಟೀಕರಣದ ರಾಜಕಾರಣ, ಅವರದ್ದು ವಂಶಪಾರಂಪರ್ಯದ ರಾಜಕಾರಣ ಹಾಗಾಗಿ ಕಾಂಗ್ರೆಸ್‌ ಮತ್ತು ಅದರ ಮಿತ್ರ ಪಕ್ಷಗಳ ಕುರಿತಾಗಿ ದೇಶದ ಜನರಲ್ಲಿ ಸಿಟ್ಟಿದೆ.
– ಶಬರಿಮಲೆಯ ನಂಬಿಕೆ ವಿಚಾರದಲ್ಲಿ ಕಾಂಗ್ರೆಸ್‌ ದ್ವಂದ್ವ ನೀತಿ ಅನುಸರಿಸುತ್ತಿದೆ.
– ಕಾಂಗ್ರೆಸ್‌ ನ ನಾಮ್‌ ಧಾರಿಗೆ ಕೊಡಗು ಜಿಲ್ಲೆಯ ಸಮೀಪದ ಕ್ಷೇತ್ರದಲ್ಲಿ ಸ್ಪರ್ಧಿಸಲು ಟಿಕೆಟ್‌ ಸಿಕ್ಕಿದೆ. ಅಲ್ಲಿ ಯಾರ ಧ್ವಜ ಹಾರಾಡುತ್ತಿದೆ ಎಂದು ನಿಮಗೆ ಗೊತ್ತಿರಬೇಕು.
– ದಕ್ಷಿಣದಲ್ಲಿ ಸ್ಪರ್ಧಿಸಬೇಕೆಂಬುದೇ ರಾಹುಲ್‌ ಅವರ ಇರಾದೆಯಾಗಿದ್ದಿದ್ದರೆ ಅವರ ಪಕ್ಷದ ಸರಕಾರ ಇರುವ ಕರ್ನಾಟಕದ ಯಾವುದೇ ಭಾಗದಿಂದ ಸ್ಪರ್ಧಿಸಬಹುದಿತ್ತು. ಆದರೆ ಅವರಿಗೆ ಗೊತ್ತಿದೆ ಇಲ್ಲಿ ಅವರಿಗೆ ಸುರಕ್ಷಿತವಾದ ಕ್ಷೇತ್ರ ಯಾವುದೂ ಇಲ್ಲ ಎಂದು.
– ಅಂಬರೀಷ್‌ ಅವರು ಇವತ್ತು ಎಲ್ಲರ ಮನಸ್ಸಿನಲ್ಲಿ ನೆಲೆಸಿದ್ದಾರೆ. ಸುಮಲತಾ ಅವರೊಂದಿಗೆ ಸೇರಿಕೊಂಡು ಕನ್ನಡ ಭಾಷೆ ಹಾಗೂ ಸಂಸ್ಕೃತಿಯ ಸೇವೆ ಮಾಡಿದ್ದಾರೆ ಅದೆಂದಿಗೂ ಚಿರಸ್ಮರಣೀಯವಾಗಿರುತ್ತದೆ. ಅದೆಲ್ಲವನ್ನು ನಾವಿಂದು ಇನ್ನಷ್ಟು ಬೆಳೆಸಬೇಕಾಗಿದೆ.
-ಈ ಚೌಕಿದಾರನ ನಿರ್ಧಾರಗಳನ್ನು ನೀವು ಬೆಂಬಲಿಸುವಿರಾ. ದೇಶದ ಸುರಕ್ಷತೆಯ ವಿಷಯದಲ್ಲಿ ನಾವೆಲ್ಲರೂ ದೃಢ ನಿರ್ಧಾರ ತೆಗೆದುಕೊಳ್ಳಬೇಕೇ ಬೇಡವೇ..
‘ಹಳ್ಳಿ ಹಳ್ಳಿಯೂ ನಗರ ನಗರವೆಲ್ಲೂ ಮಕ್ಕಳು ಮಕ್ಕಳೆಲ್ಲರೂ ಮನೆಮನೆಯಲ್ಲಿ ಉಳುವ ಭೂಮಿಯಲ್ಲೋ ದೇಶದ ಎಲ್ಲಾ ಕಡೆ ದೇಶದ ಗಡಿಯಲ್ಲೂ ಡಾಕ್ಟರ್‌ ಪ್ರೊಫೆಸರ್‌ ಕೂಡ, ರೈತ ಕಾರ್ಮಿಕ ಕೂಡ, ವಕೀಲ ಕೂಡ, ವಿದ್ಯಾರ್ಥಿ ಕೂಡ ಎಲ್ಲರೂ ಚೌಕಿದಾರರಾಗೋಣ’ – ಎಂದು ಕನ್ನಡದಲ್ಲೇ ಹೇಳಿ ಮೋದಿ ಗಮನ ಸೆಳೆದರು.

ನಿಮ್ಮ ಪ್ರೀತಿ ಆದರಗಳಿಗೆ ನಾನು ಎರಡೂ ಕೈಗಳನ್ನೂ ಮುಗಿದು ನಮಿಸುತ್ತೇನೆ. ಬನ್ನಿ ಕರ್ನಾಟಕದಲ್ಲಿ ಹೊಸ ಇತಿಹಾಸವನ್ನು ನಿರ್ಮಾಣ ಮಾಡೋಣ. ಭಾರತ್‌ ಮಾತಾ ಕಿ ಜೈ.

ಟಾಪ್ ನ್ಯೂಸ್

1-cris

Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ

Kambli-health

Kambli Health: ಮಾಜಿ ಕ್ರಿಕೆಟಿಗ ವಿನೋದ್‌ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!

am

Recipe: ಆರೋಗ್ಯಕ್ಕೆ ಅಮೃತ, ರುಚಿಗೆ ಅದ್ಭುತ ಈ ಚಟ್ನಿ!ಒಂದ್ಸಲ ಈ ವಿಧಾನದಲ್ಲಿ ಟ್ರೈ ಮಾಡಿ…

1-maha-kumbha

Mahakumbh 2025: 45 ಕೋಟಿ ಯಾತ್ರಾರ್ಥಿಗಳ ನಿರೀಕ್ಷೆ

Travis Head made a controversial statement about BCCI

INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್‌ ಹೆಡ್? Video

Sheikh ಹಸೀನಾರನ್ನು‌ ಬಾಂಗ್ಲಾದೇಶಕ್ಕೆ ವಾಪಸ್‌ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ

Sheikh ಹಸೀನಾರನ್ನು‌ ಬಾಂಗ್ಲಾದೇಶಕ್ಕೆ ವಾಪಸ್‌ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ

1-qwqwewq

Seema Haider; 4 ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದ ಸೀಮಾ ಈಗ ಗರ್ಭಿಣಿ!!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-cris

Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ

1-maha-kumbha

Mahakumbh 2025: 45 ಕೋಟಿ ಯಾತ್ರಾರ್ಥಿಗಳ ನಿರೀಕ್ಷೆ

Ravishankar

Drama ಬಿಟ್ಟು ಅಂಬೇಡ್ಕರ್ ಅವರಿಗೆ ನಿರಂತರ ಅವಮಾನ ಮಾಡಿದ್ದಕ್ಕೆ ಕಾಂಗ್ರೆಸ್ ಕ್ಷಮೆ ಕೇಳಲಿ

UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ

UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ

Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹತ್ಯೆ…

Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-cris

Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ

Kambli-health

Kambli Health: ಮಾಜಿ ಕ್ರಿಕೆಟಿಗ ವಿನೋದ್‌ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!

Rachel David hope on Unlock Raghava Movie

Unlock Raghava Movie: ರಾಘವನ ಮೇಲೆ ಕಣ್ಣಿಟ್ಟ ರಚೆಲ್‌

am

Recipe: ಆರೋಗ್ಯಕ್ಕೆ ಅಮೃತ, ರುಚಿಗೆ ಅದ್ಭುತ ಈ ಚಟ್ನಿ!ಒಂದ್ಸಲ ಈ ವಿಧಾನದಲ್ಲಿ ಟ್ರೈ ಮಾಡಿ…

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸರಣ ಘಟಕಕ್ಕೆ ಗ್ರಹಣ!

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.