PM Caresಗೆ ಕಾರ್ಪೊರೇಟ್ ಬಲ; ಕೋವಿಡ್ ನಿರ್ವಹಣಾ ನಿಧಿಗೆ ಹೆಚ್ಚಿನ ದೇಣಿಗೆಗೆ ಕೇಂದ್ರದ ಕ್ರಮ
Team Udayavani, May 29, 2020, 4:07 AM IST
ಹೊಸದಿಲ್ಲಿ: ಕೋವಿಡ್ ಪರಿಸ್ಥಿತಿ ನಿರ್ವಹಣೆಗಾಗಿ ಸ್ಥಾಪಿಸಲಾಗಿರುವ ಪಿಎಂ ಕೇರ್ಸ್ ನಿಧಿಗೆ ಕಾರ್ಪೊರೇಟ್ ವಲಯಗಳ ದೇಣಿಗೆ ಹರಿದು ಬರಲು ಇದ್ದ ಅಡಚಣೆಗಳನ್ನು ಸರಿಪಡಿಸುವ ಸಲುವಾಗಿ ಕೇಂದ್ರ ಸರಕಾರ, ಕಾರ್ಪೊರೇಟ್ ನಿಯಮಗಳಿಗೆ ತಿದ್ದುಪಡಿ ತಂದಿದೆ.
ಹೊಸ ತಿದ್ದುಪಡಿಯು, ಮೇ 28ರಿಂದ ಜಾರಿಗೊಳ್ಳಲಿದೆ ಎಂದು ಸರಕಾರ ತಿಳಿಸಿದೆ. 2013ರ ಕಾರ್ಪೊರೇಟ್ ಕಾಯ್ದೆಯು, ದೇಶದ ದೊಡ್ಡ ಖಾಸಗಿ ಸಂಸ್ಥೆಗಳು ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ಅಡಿಯಲ್ಲಿ ಸಮಾಜ ಸೇವೆಗಳನ್ನು ಕೈಗೊಳ್ಳುವುದನ್ನು ಕಡ್ಡಾಯಗೊಳಿಸಿದೆ.
ಜೊತೆಗೆ, ತುರ್ತು ಸಂದರ್ಭಗಳಲ್ಲಿ ಸರ್ಕಾರಕ್ಕೆ ದೇಣಿಗೆ ನೀಡಲು ಅವುಗಳಿಗೆ ಅವಕಾಶ ಮಾಡಿಕೊಟ್ಟಿದೆ. ಆದರೆ, ಈವರೆಗೆ ಕಾಯ್ದೆಯ 467ನೇ ನಿಯಮದ ಒಂದನೇ ನಿಯಮವು ಕಾರ್ಪೊರೇಟ್ ದೇಣಿಗೆಯನ್ನು ‘ಪ್ರಧಾನಮಂತ್ರಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ’ಗೆ ಮಾತ್ರ ಸೀಮಿತಗೊಳಿಸಿದೆ, ಹಾಗಾಗಿ, ಅದನ್ನು ಬದಲಾಯಿಸಲಾಗಿದೆ
ಕಾರ್ಪೊರೇಟ್ ಕಂಪನಿಗಳು ತಮ್ಮ ದೇಣಿಗೆಯನ್ನು ಇನ್ನು ಮುಂದೆ ಪಿಎಂ ಕೇರ್ಸ್ ಗೂ ನೀಡುವಂತೆ ಅವಕಾಶ ಕಲ್ಪಿಸಲಾಗಿದೆ. ಈ ತಿದ್ದುಪಡಿಯಿಂದಾಗಿ, ದೇಶದಲ್ಲಿ ಕೋವಿಡ್ ಭೀತಿ ಆವರಿಸಿದ ನಂತರ, ಪಿಎಂ ಕೇರ್ಸ್ ಗಾಗಿ ಕಳೆದೆರಡು ತಿಂಗಳುಗಳಲ್ಲಿ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳು ಮಾಡಿರುವ ದೇಣಿಗೆಗಳು ಸಿಎಸ್‌ಆರ್ ವ್ಯಾಪ್ತಿಗೆ ಒಳಪಡಲಿವೆ.
ವಿರೋಧಕ್ಕೆ ಕಾರಣವಾದ ತಿದ್ದುಪಡಿ
ಸಿಎಸ್‌ಆರ್ ನಿಯಮಗಳಿಗೆ ತಿದ್ದುಪಡಿ ತರುವ ಮೂಲಕ ಪಿಎಂ ಕೇರ್ಸ್ ಗೆ ಕಾರ್ಪೊರೇಟ್ ದೇಣಿಗೆಗಳು ಹರಿದುಬರುವಂತೆ ಮಾಡಿರುವುದನ್ನು ವಿಪಕ್ಷಗಳು ಖಂಡಿಸಿವೆ.
ಈ ಮೊದಲು ಪ್ರಧಾನ ಮಂತ್ರಿ ವಿಪತ್ತು ನಿರ್ವಹಣಾ ನಿಧಿ ಇರುವುದರ ಜೊತೆಗೆ, ಪಿಎಂ ಕೇರ್ಸ್ ಎಂಬ ಪ್ರತ್ಯೇಕ ನಿಧಿಯನ್ನು ಸ್ಥಾಪಿಸಿದ್ದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದವು.
ಆದರೀಗ, ಆ ನಿಧಿಗೆ “ಪಿಎಂ ಕೇರ್ಸ್’ ಕಾರ್ಪೊರೇಟ್ ವಲಯದ ದೇಣಿಗೆ ಬರುವಂತೆ ಮಾಡಿರುವುದಕ್ಕೂ ವಿರೋಧ ವ್ಯಕ್ತಪಡಿಸಿವೆ. ಆದರೆ, ಈ ಕ್ರಮವನ್ನು ಕೇಂದ್ರದ ಅಧಿಕಾರಿ ಸಮರ್ಥಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ
Shiv Sena ; ಭಾರೀ ವಿವಾದದ ಬಳಿಕ ಶೈನಾ ಕ್ಷಮೆ ಯಾಚಿಸಿದ ಅರವಿಂದ್ ಸಾವಂತ್
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.