ಸಾಕಾರದತ್ತ ಟೆಕೇಡ್ ಕನಸು: ಮನ್ ಕೀ ಬಾತ್‌ನಲ್ಲಿ ಮೋದಿ
Team Udayavani, Jan 30, 2023, 7:50 AM IST
ಹೊಸದಿಲ್ಲಿ: ನಮ್ಮ ದೇಶದ ಇನ್ನೋವೇಟರ್‌ಗಳ ಶಕ್ತಿಯಿಂದಾಗಿ ಭಾರತದ “ಟೆಕೇಡ್’ (ತಂತ್ರಜ್ಞಾನದ ದಶಕ) ಕನಸು ನನಸಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ರವಿವಾರ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮವಾದ ಮನ್ ಕೀ ಬಾತ್‌ನಲ್ಲಿ ಮಾತನಾಡಿದ ಅವರು, “ನಮ್ಮ ದೇಶದೊಳಗೆ ಪೇಟೆಂಟ್‌ಗಳಿಗಾಗಿ ಸಲ್ಲಿಕೆಯಾಗುತ್ತಿರುವ ಅರ್ಜಿಗಳು ವಿದೇಶಿ ಪೇಟೆಂಟ್ ಫೈಲಿಂಗ್‌ಗಳನ್ನು ಮೀರಿಸಿದೆ. ಇದು ಭಾರತದಲ್ಲಿ ಹೆಚ್ಚುತ್ತಿರುವ ವೈಜ್ಞಾನಿಕ ಸಾಮರ್ಥ್ಯ ವನ್ನು ತೋರಿ ಸುತ್ತಿದೆ. ಈ ದಶಕದಲ್ಲಿ ತಂತ್ರಜ್ಞಾನಗಳೇ ಪ್ರಮುಖ ಪಾತ್ರ ವಹಿಸಬೇಕು ಎಂಬ ನಮ್ಮ ಕನಸು ನನಸಾ ಗುತ್ತಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.
ಪ್ರಸಕ್ತ ವರ್ಷದ ಮೊದಲ ಮನ್ ಕೀ ಬಾತ್‌ನಲ್ಲಿ ಮೋದಿ ಅವರು ನಾವೀನ್ಯತಾ ಕ್ಷೇತ್ರದಲ್ಲಿ ಭಾರತದ ಪಾತ್ರ, ಸಿರಿಧಾನ್ಯಗಳಿಗೆ ಉತ್ತೇಜನ, ಜಿ20 ಶೃಂಗ, ಪದ್ಮ ಪ್ರಶಸ್ತಿ ಪುರಸ್ಕೃತರ ಸಹಿತ ವಿವಿಧ ವಿಚಾರಗಳ ಕುರಿತು ಮಾತನಾಡಿದರು.
2015ರಲ್ಲಿ ಭಾರತವು ಜಾಗತಿಕ ನಾವೀನ್ಯತೆ ಸೂಚ್ಯಂಕದಲ್ಲಿ 80ನೇ ಸ್ಥಾನದಲ್ಲಿತ್ತು. ಆದರೆ ಈಗ 40ನೇ ರ್‍ಯಾಂಕ್‌ಗೆ ಭಡ್ತಿ ಪಡೆದಿದೆ. ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ 2022ರಲ್ಲಿ ದಾಖಲೆ ಸಂಖ್ಯೆಯ ಅಂದರೆ ಬರೋಬ್ಬರಿ 145 ಪೇಟೆಂಟ್‌ಗಳಿಗೆ ಅರ್ಜಿ ಸಲ್ಲಿಸಿದೆ ಎಂದೂ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು.
ಜನರ ಪದ್ಮ: ನವಭಾರತ ನಿರ್ಮಾ ಣಕ್ಕಾಗಿ ನಾವು ಜನಭಾಗೀದಾರಿ ಎಂಬ ಪರಿಕಲ್ಪನೆಯನ್ನು ಅನುಸ ರಿಸಿ ಕೊಂಡು ಬರುತ್ತಿದ್ದೇವೆ. ಅದರ ಪ್ರತಿಫಲವೇ “ಜನರ ಪದ್ಮ’. ಎಲೆ ಮÃ ೆಕಾಯಿಗಳಿಗೆ, ಬುಡಕಟ್ಟು ಸಮುದಾ ಯದ ಹಲವರಿಗೆ ನಾವು ಪದ್ಮ ಪ್ರಶಸ್ತಿಗಳನ್ನು ನೀಡುತ್ತಿದ್ದೇವೆ. ಪೈಂಟರ್‌ಗಳು, ಸಂಗೀತ ಗಾರರು, ಕಲಾವಿದರು, ರೈತರಿಗೆ ಪ್ರಶಸ್ತಿ ಘೋಷಿ ಸಲಾಗಿದೆ. ಅವರೆಲ್ಲರ ಸ್ಫೂರ್ತಿದಾ ಯಕ ಕಥೆಗಳನ್ನು ನೀವು ಓದಬೇಕು ಎಂದು ಪ್ರಧಾನಿ ಮೋದಿ ಹೇಳಿದರು. ಇದೇ ವೇಳೆ ನಾನು ನಿಮಗೆಲ್ಲರಿಗೂ ಒಂದು ಕೃತಿ ಓದುವಂತೆ ಮನವಿ ಮಾಡಿಕೊಳ್ಳುತ್ತಿದ್ದೇನೆ. “ಇಂಡಿಯಾ- ದಿ ಮದರ್ ಆಫ್ ಡೆಮಾಕ್ರಸಿ’ ಎಂಬುದು ಆ ಪುಸ್ತಕದ ಹೆಸರು ಎಂದೂ ಮೋದಿ ಹೇಳಿದ್ದಾರೆ.
ಮಿಲ್ಲೆಟ್‌ಪ್ರಿನಿಯರ್ಸ್
ಮನದ ಮಾತಿನಲ್ಲಿ ಹೆಚ್ಚಿನ ಸಮಯವನ್ನು “ಸಿರಿಧಾನ್ಯ’ಗಳ ಕುರಿತ ಮಾತಿಗೆ ಮೀಸಲಿಟ್ಟ ಪ್ರಧಾನಿ ಮೋದಿ, ಕರ್ನಾಟಕ ಸಹಿತ ದೇಶದ ವಿವಿಧ ರಾಜ್ಯಗಳಲ್ಲಿ ಸಿರಿಧಾನ್ಯಗಳ ಉದ್ದಿಮೆ ನಡೆಸುತ್ತಿರುವವರನ್ನು “ಮಿಲ್ಲೆಟ್‌ಪ್ರಿನಿಯರ್ಸ್’ ಎಂದು ಬಣ್ಣಿಸಿದರು. ಮಹಿಳೆಯರೇ ಸಿರಿಧಾನ್ಯಗಳಿಂದ ಕುಕೀಸ್, ರಸಗುಲ್ಲಾ, ಗುಲಾಬ್ ಜಾಮೂನು, ಕೇಕ್‌ಗಳನ್ನು ತಯಾರಿಸುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜತೆಗೆ ನಮ್ಮ ದೇಶದಲ್ಲಿ ಜಿ-20 ಶೃಂಗದ ಸಭೆಗಳು ಎಲ್ಲೆಲ್ಲಿ ನಡೆಯುತ್ತಿವೆಯೋ ಅಲ್ಲೆಲ್ಲ ಸಿರಿಧಾನ್ಯಗಳಿಂದ ತಯಾರಿಸಿದ ಭಕ್ಷ್ಯಗಳನ್ನು ಬಡಿಸಲಾಗುತ್ತಿದೆ ಎಂದರು.
ಇ-ತ್ಯಾಜ್ಯ ನಿರ್ವಹಣೆ
ಇ-ತ್ಯಾಜ್ಯಗಳ ಸಮರ್ಪಕ ನಿರ್ವಹಣೆ ಕುರಿತೂ ಮಾತನಾಡಿದ ಮೋದಿ, “ಇ ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡದೇ ಇದ್ದರೆ ಅದು ನಮ್ಮ ಪರಿಸರಕ್ಕೆ ಹಾನಿ ಉಂಟುಮಾಡುತ್ತದೆ. ಅದನ್ನು ಸಮರ್ಪಕವಾಗಿ ವಿಲೇವಾರಿ ಮಾಡಿದರೆ ಅದರ ಮರುಬಳಕೆ ಆರ್ಥಿಕತೆಯಲ್ಲಿ ದೊಡ್ಡ ಪಾತ್ರ ವಹಿಸುತ್ತದೆ’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.