‘ಅಮ್ಮನ’ ಅನುಪಸ್ಥಿತಿಯಲ್ಲಿ ಮೋದಿ ದೇಶದ ‘ತಂದೆ’: ಎಐಎಡಿಎಂಕೆ ಸಚಿವ
Team Udayavani, Mar 10, 2019, 5:16 AM IST
ಶ್ರೀವಿಲ್ಲಿಪುತ್ತುರ್: ಪ್ರಧಾನಿ ನರೇಂದ್ರ ಮೋದಿಯವರು ದೇಶಕ್ಕೆ ಮತ್ತು ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ ಪಕ್ಷಕ್ಕೆ ‘ತಂದೆ’ ಇದ್ದಂತೆ ಎಂದು ತಮಿಳು ನಾಡು ಸಚಿವ ಕೆ.ಟಿ.ರಾಜೇಂದ್ರ ಬಾಲಾಜಿ ಹೇಳಿಕೆ ನೀಡಿದ್ದಾರೆ.
ಶನಿವಾರ ಮಾತನಾಡಿದ ಸಚಿವ ಕೆ.ಟಿ.ರಾಜೇಂದ್ರ ಬಾಲಾಜಿ, ‘ಅಮ್ಮ’ (ಜಯಲಲಿತಾ) ಬದುಕಿದ್ದಾಗ ಅವರು ಪಕ್ಷದ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿದ್ದರು. ಈಗ ‘ಅಮ್ಮ’ ಬದುಕಿಲ್ಲ. ‘ಅಮ್ಮನ’ ಅನುಪಸ್ಥಿತಿಯಲ್ಲಿ ಮೋದಿ ನಮ್ಮ ‘ತಂದೆ’. ಹಾಗಾಗಿ ಮೋದಿಯವರ ನಾಯಕತ್ವವನ್ನು ನಾವು ಒಪ್ಪುತ್ತೇವೆ ಎಂದರು.
2014ರ ಲೋಕಸಭಾ ಚುಣಾವಣೆಯಲ್ಲಿ ಜಯಲಲಿತಾ ನರೇಂದ್ರ ಮೋದಿಯವರಿಗೆ ಬೆಂಬಲ ನೀಡಿರಲಿಲ್ಲ. ಈ ಬಗ್ಗೆ ಮಾತನಾಡಿದ ಎಐಎಡಿಎಂಕೆ ಸಚಿವ, 2014ರಲ್ಲಿ ತಮಿಳುನಾಡಿನ ಶಕ್ತಿಯನ್ನು ದೇಶಕ್ಕೆ ತಿಳಿಸಲು ‘ಅಮ್ಮ’ ಏಕಾಂಗಿಯಾಗಿ ಚುಣಾವಣೆಗೆ ಸ್ಪರ್ಧಿಸಿದ್ದರು. ‘ಅಮ್ಮ’ ಯಾವಾಗಲೂ ನರೇಂದ್ರ ಮೋದಿಯವರನ್ನು ಗೌರವಿಸುತ್ತಿದ್ದರು ಎಂದರು.
ಮುಂಬರುವ ಲೋಕಸಭಾ ಚುಣಾವಣೆಯಲ್ಲಿ ಬಿಜೆಪಿ ಮತ್ತು ಎಐಎಡಿಎಂಕೆ ಪಕ್ಷಗಳು ತಮಿಳುನಾಡಿನಲ್ಲಿ ಮೈತ್ರಿ ಮಾಡಿಕೊಂಡಿವೆ. ತಮಿಳುನಾಡಿನ ಐದು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸ್ಪರ್ಧಿಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar Remarks: ಕನಸಲ್ಲೂ ಅಂಬೇಡ್ಕರ್ರನ್ನು ಅವಮಾನಿಸಿಲ್ಲ: ಅಮಿತ್ ಶಾ
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.