ನರೇಂದ್ರ ಮೋದಿ ಜಗತ್ತಿನ ಅತೀ ಕಠಿಣ ಪರಿಶ್ರಮದ ಪ್ರಧಾನಿ: ಶಾ ಶ್ಲಾಘನೆ
Team Udayavani, May 26, 2018, 3:00 PM IST
ನವದೆಹಲಿ: ಭಾರತೀಯ ಜನತಾ ಪಕ್ಷ ಈ ದೇಶಕ್ಕೆ ಕಠಿಣ ಪರಿಶ್ರಮಿ(ಹಾರ್ಡ್ ವರ್ಕಿಂಗ್) ಪ್ರಧಾನಿಯನ್ನು ಹಾಗೂ ವಿಶ್ವದ ಅತ್ಯಂತ ಜನಪ್ರಿಯ ನಾಯಕನನ್ನು ನೀಡಿದೆ. ಪ್ರಧಾನಿ ನರೇಂದ್ರ ಮೋದಿ ದಿನಕ್ಕೆ 15ರಿಂದ 18 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತಾರೆ. ಈ ನಿಟ್ಟಿನಲ್ಲಿ ಪ್ರಧಾನಿ ಬಿಜೆಪಿಯ ನಾಯಕರು ಎಂಬುದೇ ನಮಗೆಲ್ಲ ಹೆಮ್ಮೆ ಪಡುವ ವಿಚಾರವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಶ್ಲಾಘಿಸಿದ್ದಾರೆ.
ಶನಿವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಾಲ್ಕು ವರ್ಷ ಪೂರೈಸಿ ಐದನೇ ವರ್ಷಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ ನವದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಅಧಿಕಾರದ ಗದ್ದುಗೆ ಏರಿ ನಾಲ್ಕು ವರ್ಷ ಪೂರೈಸಿದ್ದಕ್ಕೆ ಎನ್ ಡಿಎ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿ, ಪ್ರಧಾನಿ ನರೇಂದ್ರ ಮೋದಿ ಅವರ ಕಠಿಣ ಪರಿಶ್ರಮ ಹಾಗೂ ಜನಪ್ರಿಯತೆಯನ್ನು ಶ್ಲಾಘಿಸಿದರು.
ದೇಶದ ಲಕ್ಷಾಂತರ ಜನರ ಉತ್ತಮ ಜೀವನ ಹಾಗೂ ಆರ್ಥಿಕವಾಗಿ ಮೇಲೆತ್ತುವ ನಿಟ್ಟಿನಲ್ಲಿ ಮೋದಿ ನೇತೃತ್ವದ ಸರ್ಕಾರ ಹಲವಾರು ಸಾಮಾಜಿಕ ಕ್ರಮಗಳನ್ನು ಕೈಗೊಂಡಿದೆ ಎಂದರು. ಹೀಗಾಗಿ ಪ್ರಧಾನಿ ಮೋದಿಜೀ ಅವರು ವಿಶೇಷ ಶ್ಲಾಘನೆಗೆ ಅರ್ಹರು ಎಂದು ಶಾ ಹೇಳಿದರು.
ವಿಪಕ್ಷಗಳ ಒಗ್ಗಟ್ಟಿಗೆ ಹೆದರಲ್ಲ, ನಮಗೆ ಜನ ಬೆಂಬಲವಿದೆ:
ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ವಿಪಕ್ಷಗಳ ಅಜೆಂಡಾವನ್ನು ಸಾರಸಗಟಾಗಿ ತಿರಸ್ಕರಿಸಿದ ಅಮಿತ್ ಶಾ, ನಮ್ಮದು ಭ್ರಷ್ಟಾಚಾರ ಹಾಗೂ ಹಸಿವು ಮುಕ್ತ ಭಾರತದ ಅಜೆಂಡವಾಗಿದೆ ಎಂದು ತಿರುಗೇಟು ನೀಡಿದರು.
ವಿರೋಧ ಪಕ್ಷಗಳ ಒಗ್ಗಟ್ಟಿನಿಂದ ನಾವು ಹೆದರುವುದಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ವಿಪಕ್ಷಗಳು ನಮ್ಮ ವಿರುದ್ಧ ಹೋರಾಟ ನಡೆಸಿದ್ದರು, ಆದರೆ ಅದರ ಫಲಿತಾಂಶ ಏನಾಯ್ತು? ನಮಗೆ ಜನ ಬೆಂಬಲ ಇದೆ, ಅದಕ್ಕಿಂತ ಹೊರತಾಗಿ ಬೇರೇನೂ ಇಲ್ಲಿ ನಡೆಯೋದಿಲ್ಲ ಎಂದು ಮಾರ್ಮಿಕವಾಗಿ ಹೇಳಿದರು.
ಆಂಧ್ರಪ್ರದೇಶದ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ(ತೆಲುಗು ದೇಶಂ ಪಾರ್ಟಿ) ನಮ್ಮ ಮೈತ್ರಿಕೂಟದಿಂದ ಹೊರ ನಡೆದಿದ್ದಾರೆ, ಆದರೆ ನಿತೀಶ್ ಕುಮಾರ್ ಜೀ ನಮ್ಮ ಜತೆ ಸೇರಿಕೊಂಡಿದ್ದಾರೆ. ಅಲ್ಲದೇ 2014ರ ನಂತರ ಎನ್ ಡಿಎ ಜೊತೆ 11ಕ್ಕೂ ಅಧಿಕ ಪಕ್ಷಗಳು ಕೈಜೋಡಿಸಿವೆ..ನಮ್ಮ ಎನ್ ಡಿಎ ಕುಟುಂಬ ಸದಸ್ಯರ ಸಂಖ್ಯೆ ಹೆಚ್ಚಾಗಿದೆಯೇ ವಿನಃ ಕಡಿಮೆಯಾಗಿಲ್ಲ ಎಂದು ವಿಪಕ್ಷಗಳಿಗೆ ಟಾಂಗ್ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tamil Nadu;ಸೈಕ್ಲೋನ್ ದುರ್ಬಲವಾದ್ರೂ ಭಾರೀ ಮಳೆ?
2000 ಇಸವಿಯಿಂದ 1.44 ಲಕ್ಷ ಕೋಟಿ ರೂ. ಟೋಲ್ ಸಂಗ್ರಹ: ಗಡ್ಕರಿ
Adani ವಿದ್ಯುತ್ ಖರೀದಿ ಅಕ್ರಮ: ಆರೋಪ ತಳ್ಳಿ ಹಾಕಿದ ಜಗನ್ ರೆಡ್ಡಿ
Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್
Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.