ಮೋದಿ 2.0: ಹೊಸ ಕಾಯ್ದೆಯ ಹೊಳಪು
ವರುಷದ ಹಾದಿಯ ಹಿನ್ನೋಟ ; ಭರವಸೆಯ ಮುನ್ನೋಟ
Team Udayavani, May 30, 2020, 7:53 AM IST
ಚಿಟ್‌ಫಂಡ್ ನಿಯಮ ತಿದ್ದುಪಡಿ
ಠೇವಣಿ ಹೆಸರಿನಲ್ಲಿ ಜನರನ್ನು ಮೋಸಗೊಳಿಸುವ ಸಂಸ್ಥೆಗಳಿಗೆ ಲಗಾಮು ಹಾಕುವ ಉದ್ದೇಶದಿಂದಲೇ ಅನಿಯಂತ್ರಿತ ಠೇವಣಿ ಯೋಜನೆಗಳು ಹಾಗೂ ಚಿಟ್ ಫಂಡ್‌ಗಳ ನಿಯಮಗಳ ತಿದ್ದುಪಡಿ ಕಾಯ್ದೆಗೆ ಕೇಂದ್ರ ಸರ್ಕಾರ ತಿದ್ದುಪಡಿ ತಂದಿತು.
ದೇಶದಲ್ಲಿ ಕೋಲಾಹಲ ಎಬ್ಬಿಸಿದ್ದ ಶಾರದಾ ಚಿಟ್‌ಫಂಡ್, ರೋಸ್ ವ್ಯಾಲಿ, ಗೋಲ್ಡ್ ಸುಖ್ ಹಾಗೂ ಸ್ಪೀಕ್ ಏಷ್ಯಾ ಹಗರಣಗಳ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮಕ್ಕೆ ಮುಂದಾಯಿತು. ಕಡಿಮೆ ಅವಧಿ ಯಲ್ಲಿ ಠೇವಣಿ ದ್ವಿಗುಣ ಎಂಬ ಜಾಹೀರಾತು ನಂಬಿ ಜನರು ಮೋಸ ಹೋಗುವುದನ್ನು ತಡೆಗಟ್ಟಲು ಪ್ರಯತ್ನಿಸಲಾಗಿದೆ.
ಎಲ್ಲಕ್ಕಿಂತ ಮೊದಲನೆಯದಾಗಿ, ಅನಿಯಂತ್ರಿತ ಠೇವಣಿ ಸಂಗ್ರಹ (ಯುಡಿಎಸ್) ಒಂದು ಕಾನೂನು ಬಾಹಿರ ಚಟುವಟಿಕೆ ಎಂದು ಘೋಷಿಸಲಾಗಿದೆ. ಇದು ಅಕ್ರಮ ಚೀಟಿ ವ್ಯವಹಾರಕ್ಕೆ ಹಾಕಲಾದ ಮೊದಲ ಮೂಗುದಾರ. ಅದಲ್ಲದೆ, ಯುಡಿಎಸ್ ನಿರ್ವಹಿಸುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗೆ ಭಾರೀ ದಂಡ ಅಥವಾ ಕಾನೂನಾತ್ಮಕ ಕ್ರಮಗಳನ್ನು ವಿಧಿಸುವ ಎಚ್ಚರಿಕೆಯನ್ನೂ ನೀಡಲಾಗಿದೆ.
ಕಾಯ್ದೆಯ ಮತ್ತೂಂದು ವಿಶೇಷವೆಂದರೆ, ಠೇವಣಿಯನ್ನು ಹಿಂದಿರುಗಿಸುವಾಗ ಯಾವುದೇ ವ್ಯಕ್ತಿಯಾಗಲೀ, ಸಂಸ್ಥೆಯಾಗಲೀ ಮಾರುಕಟ್ಟೆ ಕುಸಿತ, ಕಂಪನಿಯ ನಷ್ಟದಂಥ ಕಾರಣಗಳನ್ನು ಹೇಳಿ, ಠೇವಣಿಗಳನ್ನು ಹಿಂದಿರುಗಿಸದೆ ನುಣುಚಿಕೊಳ್ಳುವಂತಿಲ್ಲ.
ರಸ್ತೆ ಅಪಘಾತ ತಡೆ ಕಾನೂನು
ರಸ್ತೆಗಳಲ್ಲಿ ಅಥವಾ ಹೆದ್ದಾರಿಗಳಲ್ಲಿ ಅಪಘಾತಗಳು ಸಂಭವಿಸುವುದಕ್ಕೆ ನಾನಾ ಕಾರಣಗಳಿರುತ್ತವೆ. ಹವಾಗುಣ, ರಸ್ತೆಗಳ ಮೇಲೆ ಪ್ರಾಣಿಗಳ ಸಂಚಾರ, ತಗ್ಗು-ಕುಳಿಗಳು ಇತ್ಯಾದಿ ಕಾರಣಗಳಿಂದಾಗಿ ಅನೇಕ ವಾಹನಗಳು ಅಪಘಾತಕ್ಕೀಡಾಗುತ್ತವೆ.
ನಗರದೊಳಗಿನ ಸಂಚಾರ ಹಾಗೂ ಹೆದ್ದಾರಿ ಸಂಚಾರಗಳನ್ನು ಮತ್ತಷ್ಟು ಸುರಕ್ಷಿತವಾಗಿಸಲು ಕೆಲವಾರು ಕಾಯ್ದೆ ಕಾನೂನುಗಳನ್ನು ಜಾರಿಗೊಳಿಸಲಾಗಿದ್ದು, ಅದಕ್ಕೆ ಪೂರಕವಾಗಿ 2019ರಲ್ಲಿ ಮೋಟಾರು ವಾಹನ ತಿದ್ದುಪಡಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ.
ಪ್ರಮುಖಾಂಶಗಳು
ಮೊದಲನೆಯದ್ದಾಗಿ, ರಸ್ತೆ ನಿಯಮಗಳನ್ನು ಉಲ್ಲಂಘಿಸುವವರಿಗೆ ಭಾರೀ ದಂಡ ವಿಧಿಸಲಾಗಿದೆ. ಇದಕ್ಕಾಗಿ, 1988ರ ಮೋಟಾರು ವಾಹನ ನಿಯಮಗಳಿಗೆ ತಿದ್ದುಪಡಿ ತರಲಾಗಿದೆ. ಆದಾಗ್ಯೂ, ಸಂಚಾರಿ ಪೊಲೀಸರು ಭಾರೀ ಪ್ರಮಾಣದಲ್ಲಿ ದಂಡ ವಿಧಿಸಲಾರಂಭಿಸಿದ್ದು, ದೇಶಾದ್ಯಂತ ತೀವ್ರ ಚರ್ಚೆಗೆ-ವಿವಾದಕ್ಕೆ ಗುರಿಯಾಯಿತು. ಕೆಲವೆಡೆಯಂತೂ ಲಕ್ಷಾಂತರ ರೂಪಾಯಿ ದಂಡ ತೆತ್ತವರೂ ಇದ್ದಾರೆ. ಹಲವು ರಾಜ್ಯಗಳು ಈ ನಿಯಮಗಳನ್ನು ಅನುಷ್ಠಾನಕ್ಕೆ ತರದೇ ಇರಲು ನಿರ್ಧರಿಸಿದವು.
ಇನ್ನು, ಚಾಲನಾ ಕಲಿಕಾ ಪರವಾನಗಿ, ಚಾಲನಾ ಪರವಾನಗಿ ಮುಂತಾದ ವಾಹನ, ಸಾರಿಗೆ ಸಂಬಂಧಿ ದಾಖಲೆಗಳು ಸೂಕ್ತ ಪರೀಕ್ಷಾ ವಿಧಾನದ ನಂತರವೇ ನೀಡಲಾಗುತ್ತದೆ. ಜೊತೆಗೆ, ಈ ದಾಖಲೆಗಳನ್ನು ಪಡೆಯುವ ಮಾರ್ಗಗಳನ್ನು ಸ್ವಯಂಚಾಲನೆಗೊಳಿಸಿ ಮಧ್ಯವರ್ತಿಗಳ ಮೂಗು ತೂರಿಸುವಿಕೆಗೆ ತಡೆ ಹಾಕಲಾಗಿದೆ. ಹೆದ್ದಾರಿಗಳಲ್ಲಿ ನಿರ್ವಹಣೆಗಳ ಬಗ್ಗೆ ನಿಗಾ ವಹಿಸಲು ಕೇಂದ್ರ ರಸ್ತೆ ಸಾರಿಗೆ ಸಚಿವರೂ ಸೇರಿದಂತೆ ಆಯ್ದ ಸಚಿವರುಳ್ಳ ಉನ್ನತ ಅಧಿಕಾರ ಸಮಿತಿಯೊಂದನ್ನು ರಚಿಸಲಾಗಿದೆ.
ರಾಷ್ಟ್ರೀಯ ವೈದ್ಯಕೀಯ ಆಯೋಗ
2019ರ ಜು. 29ರಂದು ರಾಷ್ಟ್ರೀಯ ವೈದ್ಯಕೀಯ ಆಯೋಗ ಕಾಯ್ದೆಯನ್ನು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿ ಅದಕ್ಕೆ ಒಪ್ಪಿಗೆಯನ್ನೂ ಪಡೆದಿದೆ. ಸದ್ಯಕ್ಕೆ ಚಾಲ್ತಿಯಲ್ಲಿರುವ ಭಾರತೀಯ ವೈದ್ಯಕೀಯ ಕೌನ್ಸಿಲ್‌ನ (ಎಂಸಿಐ) ವಿರುದ್ಧ ಭ್ರಷ್ಟಾಚಾರ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಹಾಗೂ ಅದರ ಆಡಳಿತ ವೈಖರಿಯಲ್ಲೂ ಅನೇಕ ಅಪವಾದಗಳು ಬಂದ ಹಿನ್ನೆಲೆಯಲ್ಲಿ ಈ ಕಾಯ್ದೆ ರೂಪಿಸಲಾಗಿದೆ.
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗೆ ಕಾಯ್ದೆ
ಮಕ್ಕಳ ಮೇಲಿನ ಹೆಚ್ಚಾಗುತ್ತಿರುವ ಲೈಂಗಿಕ ದೌರ್ಜನ್ಯಗಳನ್ನು ನಿಗ್ರಹಿಸುವ ಸಲುವಾಗಿ, 2012ರ ಲೈಂಗಿಕ ಕಿರುಕುಳಗಳಿಂದ ಮಕ್ಕಳನ್ನು ರಕ್ಷಿಸುವ ಕಾಯ್ದೆಯನ್ನು (ಪೋಕ್ಸೋ ಕಾಯ್ದೆ) 2019ರಲ್ಲಿ ಮೋದಿ ಸರ್ಕಾರ ಪರಿಷ್ಕೃತಗೊಳಿಸಿ, ಅದನ್ನು ಮತ್ತಷ್ಟು ಬಲಗೊಳಿಸಿತು.
ಅದರ ಎರಡು ಪ್ರಧಾನ ಅಂಶಗಳೆಂದರೆ, ಮಕ್ಕಳ ಮೇಲಿನ ಲೈಂಗಿಕ ಚಟುವಟಿಕೆಯ ವಿಡಿಯೋ ವೀಕ್ಷಣೆಗೆ (ಚೈಲ್ಡ್ ಪೋರ್ನೋಗ್ರಫಿ) ದಂಡ ಹಾಗೂ ಜೈಲು ವಾಸವನ್ನು ವಿಧಿಸುವ ಹೊಸ ಅಂಶ ಸೇರಿಸಲಾಯಿತು. ಇದಕ್ಕಾಗಿ, ಪೋಕ್ಸೋನಲ್ಲಿನ ಸೆಕ್ಷನ್ 2, 4, 5, 6, 9, 14, 15, 34, 42 ಹಾಗೂ 45 ಅನುಬಂಧಗಳಲ್ಲಿ ಬದಲಾವಣೆ ತರಲಾಯಿತು.
ನಮೋ ಪ್ರೇರಣಾ ವಾಕ್ಯಗಳು…
– ಸ್ವಾವಲಂಬಿ ಭಾರತಕ್ಕಾಗಿ ದೇಶೀ ಉತ್ಪನ್ನಗಳನ್ನು ಪ್ರಚಾರ ಮಾಡೋಣ. ನಮ್ಮದೇ ಮಾರುಕಟ್ಟೆಗೆ ಬಲ ತುಂಬಿ, ಸ್ವದೇಶಿ ವಸ್ತುಗಳನ್ನು ಬ್ರ್ಯಾಂಡ್ ಮಾಡೋಣ.
– ನಾನೊಬ್ಬ ಭಕ್ತ. ಜನರೇ ನನ್ನ ದೇವರು.
– ನೀವು ಬೇರೊಬ್ಬರ ಜತೆಗೆ ಪೈಪೋಟಿ ನಡೆಸಬೇಡಿ. ನಿಮ್ಮೊಂದಿಗೆ ನೀವೇ ಸ್ಪರ್ಧೆಗಿಳಿಯಿರಿ. ನಿಮಗೆ ನೀವೇ ಸವಾಲು ಹಾಕಿಕೊಳ್ಳಿ.
– ನಾನು ಬಡತನದಿಂದ ಬಂದವನು. ಘನತೆಯಿಂದ ಬದುಕಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದೇನೆ.
– ವಿಶ್ವದಲ್ಲಿ ಎಲ್ಲಿಯಾದರೂ ಕೈಗೆಟುಕುವ ದರದಲ್ಲಿ ಡೇಟಾ ಲಭ್ಯವಿದ್ದರೆ ಅದು ಭಾರತದಲ್ಲಿ ಮಾತ್ರ. ಇದು ಡಿಜಿಟಲ್ ಇಂಡಿಯಾದ ಸಾಧನೆ.
– ಒಟ್ಟಿಗೆ ನಡೆಯೋಣ, ಒಟ್ಟಿಗೆ ಸಾಗೋಣ, ಒಟ್ಟಿಗೆ ಯೋಚಿಸೋಣ, ಒಟ್ಟಿಗೆ ಸಮಾಜ ಸುಧಾರಿಸೋಣ. ಇಂಥ ಒಗ್ಗಟ್ಟಿನಿಂದಷ್ಟೇ ದೇಶ ಮುಂದೆ ಬರಲು ಸಾಧ್ಯ.
– ನಾವು ವಸುದೈವ ಕುಟುಂಬಕಂ ತತ್ವ ನಂಬಿದವರು. ಇಡೀ ಜಗತ್ತು ಒಂದು ಕುಟುಂಬ ಎನ್ನುವುದು ನಮ್ಮ ಡಿಎನ್‌ಎಯಲ್ಲಿದೆ. ಹೀಗಿರುವಾಗ ನಾವು ನಿರ್ದಿಷ್ಟ ಸಮುದಾಯವನ್ನು ದ್ವೇಷಿಸಲು ಹೇಗೆ ಸಾಧ್ಯ?
– ದೇಶಕ್ಕಾಗಿ ಮಡಿಯುವ ಅವಕಾಶ ನನಗೆ ಸಿಗಲಿಲ್ಲ. ಆದರೆ ದೇಶಕ್ಕಾಗಿ ಜೀವಿಸುವ ಅವಕಾಶ ಸಿಕ್ಕಿದೆ.
– ಕಠಿನ ಶ್ರಮ ಎಂದಿಗೂ ಆಯಾಸ ತರುವುದಿಲ್ಲ. ಅದರಿಂದ ಸಂತೃಪ್ತಿ ಸಿಗುತ್ತದೆ.
– ಬಸವ ಜಯಂತಿ ಎಂದರೆ ಕೇವಲ ಬಸವಣ್ಣನವರ ಭಾವಚಿತ್ರದ ಮೆರವಣಿಗೆ ಅಲ್ಲ. ಅವರ ವಿಚಾರಗಳ ಮೆರವಣಿಗೆ. ನಮ್ಮ ಬದುಕಿನಲ್ಲಿ ಅವರ ವಚನಗಳ ಸಾರದ ಅಳವಡಿಕೆ.
– ಭಾರತದ ಪರಿಕಲ್ಪನೆಯಲ್ಲಿ ನಮ್ಮ ದೇವರು, ನಿಮ್ಮ ದೇವರು ಎನ್ನುವ ನಂಬಿಕೆಗಳಿಲ್ಲ. ನಾವು ಎಲ್ಲ ದೇವರನ್ನೂ ಒಂದೇ ಎಂದು ನಂಬಿದ್ದೇವೆ. ಬೇರೆ ಬೇರೆ ಮಾರ್ಗಗಳಲ್ಲಿ ಸ್ವೀಕರಿಸಿದ್ದೇವೆ. ಈ ಎಲ್ಲ ಮಾರ್ಗಗಳೂ ಅವನನ್ನು ಸೇರುತ್ತವೆ.
– ದೇಶದ 60 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಸತತ 2ನೇ ಅವಧಿಗೆ ಪೂರ್ಣ ಬಹುಮತದ ಸರ್ಕಾರ ಅಧಿಕಾರಕ್ಕೆ ಬಂದಿದೆ. ಇದು ನಮ್ಮ ಮೇಲೆ ಜನರು ಇಟ್ಟಿರುವ ನಂಬಿಕೆ.
– ಈ ದೇಶವನ್ನು ಕಟ್ಟಿದ್ದು ರಾಜನಲ್ಲ, ರಾಜಕಾರಣಿಯಲ್ಲ, ಸರ್ಕಾರಗಳೂ ಅಲ್ಲ. ಸನ್ಯಾಸಿ, ರೈತ, ಕಾರ್ಮಿಕ ಹಾಗೂ ಶ್ರೀಸಾಮಾನ್ಯರು ಭಾರತವನ್ನು ಕಟ್ಟಿದ್ದಾರೆ.
– ಭಾರತ ಬೇರೇನೂ ಆಗಬೇಕಾದ ಅವಶ್ಯಕತೆ ಇಲ್ಲ. ಭಾರತ, ಭಾರತವಾಗಿಯೇ ಉಳಿಯಬೇಕು. ಇದೇ ದೇಶವೇ ಹಿಂದೊಮ್ಮೆ ಚಿನ್ನದ ಹಕ್ಕಿ ಅಂತ ಹೆಸರಾಗಿತ್ತಲ್ಲವೇ?
– ಕೋವಿಡ್ ವೈರಾಣು ಕಾರಣದಿಂದ ಭಾರತದ ಸ್ಥಳೀಯ ಉತ್ಪನ್ನವೂ ಜಾಗತಿಕ ಉತ್ಪನ್ನವಾಗಿ ಬದಲಾಗುತ್ತಿದೆ. ಇದು ನಮ್ಮ ಮುಂದಿರುವ ಅದ್ಭುತ ಅವಕಾಶ.
– ಜಗತ್ತಿನ ಪ್ರತಿ ಬ್ರ್ಯಾಂಡ್ ಉತ್ಪನ್ನಗಳೂ ಸ್ಥಳೀಯವಾಗಿಯೇ ಹುಟ್ಟುತ್ತವೆ. ನಂತರ ಜಾಹೀರಾತು ಪ್ರಚಾರ ಪಡೆದು ಬ್ರ್ಯಾಂಡ್‌ಗಳಾಗುತ್ತವೆ. ನಾವೂ ಸ್ಥಳೀಯ ಉತ್ಪನ್ನಕ್ಕೆ ಹೆಚ್ಚು ಆದ್ಯತೆ ನೀಡೋಣ. ನಾವು ಖಾದಿ ಬಟ್ಟೆ ತೊಟ್ಟ ಮೇಲೆ ಅದು ಬ್ರ್ಯಾಂಡ್ ಆಯಿತು.
– ಅಯೋಧ್ಯೆ ತೀರ್ಪು ಬಂದ ಬಳಿಕ ಭಾರತದ ಸರ್ವಧರ್ಮೀಯರು ಅದನ್ನು ಸ್ವಾಗತಿಸಿದ ರೀತಿ ಅಭೂತಪೂರ್ವ. ಇದು ನಮ್ಮ ಸಂಸ್ಕೃತಿ, ಸಾಮಾಜಿಕ ಸಾಮರಸ್ಯದ ಬಹುದೊಡ್ಡ ಪುರಾವೆ.
– ವಿಶ್ವ ಕಲ್ಯಾಣದ ರಸ್ತೆಯಲ್ಲಿ ನಮ್ಮ ನಿರ್ಧಾರ ಅಚಲವಾಗಿದೆ. ಈ ಶತಮಾನದ ಪ್ರಾರಂಭದಲ್ಲಿ ವೈ2ಕೆ ಸಂಕಟ ತಲೆದೋರಿದ್ದಾಗ, ಆ ಸಮಸ್ಯೆಯಿಂದ ವಿಶ್ವವನ್ನು ಪಾರುಮಾಡಿದ್ದು ಭಾರತದ ತಂತ್ರಜ್ಞರೇ.
– ಕೋವಿಡ್ ಸೃಷ್ಟಿಸಿರುವ ಸವಾಲನ್ನು ನಾವು ಭಾರತವನ್ನು ಹೊಸ ಮನ್ವಂತರ ದೆಡೆಗೆ ಕರೆದೊಯ್ಯಲು ಬಳಸಿಕೊಳ್ಳಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Mohan Bhagwat; ತಿಳಿವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ
Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ
National Badminton: ರೋಣಕ್ ಚೌಹಾಣ್ ಸೆಮಿಗೆ
Champions Trophy: ದುಬಾೖಯಲ್ಲಿ ಭಾರತದ ಪಂದ್ಯಗಳು: ನಾಕೌಟ್ ಹಂತಕ್ಕೇರಿದರೆ?
H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.