ಮೋದಿ 2.0: ಜನಪರ ಕಾಳಜಿ, ದೃಢ‌ ಸಂಕಲ್ಪದ ವರ್ಷ

ವರುಷದ ಹಾದಿಯ ಹಿನ್ನೋಟ ; ಭರವಸೆಯ ಮುನ್ನೋಟ

Team Udayavani, May 30, 2020, 7:40 AM IST

ಮೋದಿ 2.0: ಜನಪರ ಕಾಳಜಿ, ದೃಢ‌ ಸಂಕಲ್ಪದ ವರ್ಷ

ಮೇ 23, 2019: ಭಾರತದ ಜನತೆ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರವನ್ನು ಪುನರ್‌ ಸ್ಥಾಪಿಸಿದ ದಿನ. ಮೇ 30, 2019, ಪ್ರಧಾನಿ ಮೋದಿಯವರು ಎರಡನೇ ಬಾರಿ ಭಾರತದ ಪ್ರಧಾನಿಯಾಗಿ ಜವಾಬ್ದಾರಿ ವಹಿಸಿಕೊಂಡ ದಿನ.

ವಿವಿಧ ವರ್ಗಗಳ ಆಕಾಂಕ್ಷೆ, ನಿರೀಕ್ಷೆಗಳನ್ನು ಅರಿತು ಯಶಸ್ವಿ 5 ವರ್ಷಗಳ ಆಡಳಿತದ ಮೂಲಕ ಅವರು ದೇಶವಾಸಿಗಳ ಆಶೋತ್ತರಗಳನ್ನು ಸಾಕಾರಗೊಳಿಸಿದ್ದನ್ನು ನಾವೆಲ್ಲ ಗಮನಿಸಿದ್ದೇವೆ.

ಮೋದಿ ಸರ್ಕಾರದ 2ನೇ ಅವಧಿ ದೇಶದ ರೈತರ, ಕೃಷಿ ಕಾರ್ಮಿಕರ, ಬಡವರ ಕೇಂದ್ರಿತವಾದ ಸರ್ವಜನ ಹಿತಾಯ ಸರ್ವಜನ ಸುಖಾಯ ಕಾರ್ಯಾರಂಭದ ಪರ್ವವಾಗಿದೆ. ಮೊಟ್ಟ ಮೊದಲ ಸಚಿವ ಸಂಪುಟದ ಸಭೆಯ ನಿರ್ಣಯಗಳೇ ಇದರ ದಿಕ್ಸೂಚಿ.

ಬಡವರು, ರೈತರು, ಅಸಂಘಟಿತ ಕಾರ್ಮಿಕರು, ಭಯೋತ್ಪಾದಕ/ನಕ್ಸಲ್‌ ದಾಳಿಯಲ್ಲಿ ಮೃತರಾದ ಸೇನಾ ಸಿಬ್ಬಂದಿ ಕುಟುಂಬಗಳ ಕಲ್ಯಾಣದ ಯೋಜನೆಗಳಿಗೆ ಮಂಜೂರಾತಿ, ಸಾಮಾಜಿಕ ಮತ್ತು ಆರ್ಥಿಕ ಸ್ತರದಲ್ಲಿ ಕೆಳಗಡೆ ಇರುವವರ ಕಲ್ಯಾಣದ ಗುರಿಯೊಂದಿಗೆ ಮುನ್ನಡೆದಿದೆ ಈ ಸರ್ಕಾರ.

2019ರ ಚುನಾವಣಾ ಪೂರ್ವ ಪಕ್ಷದ ಮುನ್ನೋಟ (Vision Document) ರಾಷ್ಟ್ರೀಯ ಸುರಕ್ಷೆ, ರೈತರ ಕಲ್ಯಾಣ, ಪಶು ಸಂವರ್ಧನೆ, ಸಣ್ಣ ವರ್ತಕರ ಕಲ್ಯಾಣ ಇವುಗಳಿಂದಲೇ ಪ್ರಾರಂಭ ವಾಗಿತ್ತು. ಮೊದಲ ಸಂಪುಟದ ನಿರ್ಣಯ ಇದರ ಕಾರ್ಯಾನ್ವಯಕ್ಕೆ ನಾಂದಿ ಹಾಡಿದೆ.

ಪಿಎಮ್‌ ಕಿಸಾನ್‌ ನಿಧಿಯಡಿ ರೈತರಿಗೆ 6,000 ರೂಪಾಯಿ ನೀಡುವ ನಿರ್ಣಯ, ಸಣ್ಣ ಮತ್ತು ಮಧ್ಯಮ ರೈತರಿಗೆ ಹಾಗೂ ಸಣ್ಣ ವರ್ತಕರಿಗೆ ಪಿಂಚಣಿ ನೀಡುವ ಯೋಜನೆಗಳ ಜಾರಿಯಿಂದಾಗಿ 18.5 ಕೋಟಿ ರೈತರು ಮತ್ತು ಐದು ಕೋಟಿ ಸಣ್ಣ ವರ್ತಕರು ಫ‌ಲಾ ನುಭವಿಗಳಾಗಿದ್ದಾರೆ.

ಪಿ.ಎಂ. ಕಿಸಾನ್‌ ಯೋಜನೆಯಡಿ ಎಂಟು ಕೋಟಿ ರೈತರ ಖಾತೆಗೆ 43 ಸಾವಿರ ಕೋಟಿ ರೂಪಾಯಿ, ಜಾನು ವಾರುಗಳ ಕಾಲುಬಾಯಿ ರೋಗ ನಿವಾರಣೆಗಾಗಿ ಬೃಹತ್‌ ಯೋಜನೆ 13,000 ಕೋಟಿ ರೂ. ಗಳಿಗಿಂತ ಹೆಚ್ಚು ಸಂಪನ್ಮೂಲದ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಕೇಂದ್ರ ಸರ್ಕಾರವೇ ಸಂಪೂರ್ಣವಾಗಿ ಸಂಪನ್ಮೂಲ ಒದಗಿಸಲಿದೆ.

ಉಗ್ರವಾದಿಗಳು ಮತ್ತು ನಕ್ಸಲ್‌ ದಾಳಿಯಲ್ಲಿ ಹುತಾತ್ಮರಾದ ಭದ್ರತಾ ಪಡೆ ಸಿಬ್ಬಂದಿಗಳ ಮಕ್ಕಳಿಗೆ ನೀಡಲಾಗುತ್ತಿದ್ದ ಸ್ಕಾಲರ್‌ಶಿಪ್‌ ಹಣದಲ್ಲಿ ಹೆಚ್ಚಳ ಮತ್ತು ಈ ಯೋಜನೆಯಡಿ ಪೋಲಿಸ್‌ ಸಿಬ್ಬಂದಿಯನ್ನು ಕೂಡಾ ಸೇರ್ಪಡೆಗೊಳಿಸಿರುವುದು ಮಹತ್ವದ ಹೆಜ್ಜೆ.

ಮುಸ್ಲಿಂ ಮಹಿಳೆಯರ ಪಾಲಿಗೆ ಅಣಕವಾಗಿದ್ದ ‘ತ್ರಿವಳಿ ತಲಾಖ್‌’ ರದ್ದು, ಜಮ್ಮು ಕಾಶ್ಮೀರದ 370ನೇ ವಿಧಿ, 35ಎ ಗಳ ರದ್ದತಿ ಮಾಡಲಾಗಿದ್ದು, ದೇಶದ ಸಂವಿಧಾನದ ಎಲ್ಲ ನಿಬಂಧನೆಗಳೂ ಈಗ ಜಮ್ಮು ಕಾಶ್ಮೀರಕ್ಕೂ ಅನ್ವಯವಾಗಿವೆ. ತಾವೆಲ್ಲ ಗಮನಿಸಿದಂತೆ ದೇಶದಲ್ಲಿ ಈ ಮೊದಲಿಗೆ ಬಹುತೇಕ ರಾಜ್ಯಗಳಲ್ಲಿ ಭಯೋತ್ಪಾದನೆ-ವಿಧ್ವಂಸಕ ಕೃತ್ಯಗಳ ಹಾವಳಿ ವಿಪರೀತವಾಗಿತ್ತು.

ರಾಷ್ಟ್ರೀಯ ಸುರಕ್ಷತೆ ವಿಷಯದಲ್ಲಿ ಮೋದಿ ಸರ್ಕಾರ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿದೆ. ಒಮ್ಮೆ ನೆನಪಿಸಿಕೊಳ್ಳಿ. ಯುಪಿಎ ಕಾಲದಲ್ಲಿ  ಮುಂಬಯಿ, ದೆಹಲಿ, ಪುಣೆ, ಹೈದರಾಬಾದ್‌, ಬೆಂಗಳೂರು, ವಾರಾಣಸಿ, ರಾಮಪುರ, ಜೈಪುರ ಮೊದಲಾದ ಕಡೆಗಳಲ್ಲಿ ಸ್ಫೋಟ, ವಿದ್ವಂಸಕ ಕೃತ್ಯಗಳು ನಡೆದಿದ್ದವು.

ಈಗ ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆ  ಪಾಲಿಸಲಾಗುತ್ತಿದ್ದು, ಇದಕ್ಕಾಗಿ ಕಾನೂನು ಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆಗೆ ಕಾನೂನು ಜಾರಿಗೊಳಿಸಲಾಗಿದೆ. ಇದರಿಂದಾಗಿ ಈವರೆಗೆ ಕೇವಲ ಸಂಘಟನೆಗಳನ್ನು ಮಾತ್ರ ಬ್ಯಾನ್‌ ಮಾಡುವ ಕಾನೂನು ಅವಕಾಶವನ್ನು ಇದೀಗ ವ್ಯಕ್ತಿಗಳಿಗೂ ವಿಸ್ತರಿಸಲಾಗಿದೆ. ಬೇರೆ ಹೆಸರಿನ ಸಂಘಟನೆಗಳಡಿ ಕಾರ್ಯ ನಿರ್ವಹಿಸುತ್ತಿದ್ದ ಭಯೋತ್ಪಾದಕರನ್ನು ಸದೆಬಡಿಯಲು ಈ ಕಾನೂನು ಪ್ರಬಲ ಅಸ್ತ್ರವಾಗಿದೆ.

ಕೋವಿಡ್ ವಿರುದ್ಧದ ಹೋರಾಟ
ಕೋವಿಡ್, ಇಂದು ಇಡೀ ವಿಶ್ವವನ್ನು ಕಂಗಾಲಾಗಿಸಿದೆ. ಅನೇಕ ಅಭಿವೃದ್ಧಿ ಹೊಂದಿದ ದೇಶಗಳೂ ಕೋವಿಡ್‌-19ಕ್ಕೆ  ಹೈರಾಣಾಗಿವೆ. ನಮ್ಮ ದೇಶದಲ್ಲಿ ಮೋದಿಯವರ ನೇತೃತ್ವವು ಇಂದು ಭಾರತಕ್ಕೆ ಕೋವಿಡ್ ವಿರುದ್ಧದ ಹೋರಾಟಕ್ಕೆ ಬಲ ನೀಡಿದೆ. ಪ್ರಧಾನಿ ಮೋದಿಯವರು ಈ ಸಂಕಷ್ಟದ ಸಂದರ್ಭ ದಲ್ಲಿ ದೇಶವನ್ನು ಸಜ್ಜುಗೊಳಿಸಿ ಎಲ್ಲರನ್ನೂ ಜೊತೆಗೂಡಿಸಿ ಮುನ್ನಡೆಸಿರುವುದು ಅವರ ದೃಢ ಸಂಕಲ್ಪದ ದ್ಯೋತಕವಾಗಿದೆ.

ಕೋವಿಡ್ ಹಾವಳಿ ಯನ್ನು ಜಾಗತಿಕ ರಾಜಕೀಯ ನಾಯಕರು ನಿರ್ವಹಿಸಿರುವ ರೀತಿಯಲ್ಲಿ ಕೂಡಾ ಪ್ರಧಾನಿ ಮೋದಿಯವರ ಸಾಧನೆ ಗಮನಾರ್ಹವಾಗಿದ್ದು, ಅವರ ನಿರ್ವಹಣಾ ರೀತಿಯ ಬಗ್ಗೆ ಶೇ.82ರಷ್ಟು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಭಾರತದ ಜನಸಂಖ್ಯೆ ಮತ್ತು ಜನಸಾಂದ್ರತೆಗೆ ಹೋಲಿಸಿದಲ್ಲಿ ಕೋವಿಡ್ ವಿರುದ್ಧದ ನಮ್ಮ ಹೋರಾಟ ತುಂಬಾ ಪರಿಣಾಮಕಾರಿಯಾಗಿದೆ. 137 ಕೋಟಿ ಜನಸಂಖ್ಯೆಯ ದೇಶದಲ್ಲಿ ಪ್ರತಿ ಕೋಟಿ ಜನಸಂಖ್ಯೆಗೆ 20 ಜನ ಮೃತಪಟ್ಟಿದ್ದಾರೆ. ಹಾಗೂ 730 ಜನ ಸೋಂಕಿತರಾಗಿದ್ದಾರೆ.

1 ಲಕ್ಷಕ್ಕೂ ಅಧಿಕ ಜನ ಸೋಂಕಿಗೀಡಾದ ದೇಶಗಳ ಪೈಕಿ, ಭಾರತ‌ ಅತ್ಯಂತ ಕಡಿಮೆ ಸಂಖ್ಯೆಯ ಸಾವಿನ ಪ್ರಕರಣಗಳನ್ನು ಹೊಂದಿದೆ. ನೂರು ಪ್ರಕರಣಗಳಿಂದ 1 ಲಕ್ಷ ಪ್ರಕರಣಗಳಾಗುವಲ್ಲಿ ಕೂಡಾ ವಿಶ್ವದ ಪ್ರಮುಖ ದೇಶಗಳ ಪೈಕಿ ಕೋವಿಡ್ ಏರುಗತಿ ಭಾರತದಲ್ಲೇ ಮಂದ. ಲಾಕ್‌ಡೌನ್‌ ವಿಫ‌ಲ ಎನ್ನುವವರು ತಮ್ಮ ವಿವೇಚನೆಯನ್ನು ಕಳೆದುಕೊಂಡಿದ್ದಾರೆನ್ನದೇ ವಿಧಿಯಿಲ್ಲ.

ಕಲ್ಲಿದ್ದಲು: ಸ್ವಾವಲಂಬನೆಯತ್ತ ಭಾರತ
ಜಗತ್ತಿನಲ್ಲಿ ಹೆಚ್ಚಿನ ಕಲ್ಲಿದ್ದಲು ನಿಕ್ಷೇಪ ಹೊಂದಿರುವ 5ನೇ ರಾಷ್ಟ್ರ ಭಾರತ. ನಮ್ಮ ಕಲ್ಲಿದ್ದಲು ಸಂಪತ್ತನ್ನು ನಾವು ಪೂರ್ಣವಾಗಿ ಬಳಸಿಲ್ಲ, ಇನ್ನೂ 100 ವರ್ಷಗಳಿಗಾಗುವಷ್ಟು ಕಲ್ಲಿದ್ದಲು ಸಂಪತ್ತು ನಮ್ಮಲ್ಲಿದೆ. ಇಷ್ಟಾದರೂ ಕಲ್ಲಿದ್ದಲಿನ ಆಮದು ನಿಂತಿಲ್ಲ. ಮೋದಿ ನೇತೃತ್ವದ ಸರ್ಕಾರ ದೇಶದ ಇಂಧನ ಭದ್ರತೆ ವಿದ್ಯುತ್‌ ಸುರಕ್ಷತೆಗೆ ದಿಟ್ಟ ಕ್ರಮ ಕೈಗೊಂಡಿದೆ.

ಮುಂಬರುವ 5 ವರ್ಷಗಳಲ್ಲಿ ಕಲ್ಲಿದ್ದಲ್ಲಿನ ಆಮದನ್ನು ಸಂಪೂರ್ಣ ನಿಲ್ಲಸಲಾಗುವುದು. ವಿದೇಶಿ ವಿನಿಮಯದಡಿ ಬೃಹತ್‌ ಸಂಪನ್ಮೂಲವನ್ನು ಉಳಿತಾಯ ಮಾಡಲಾಗುವುದು. ದೇಶದ ಇಂಧನ ಸುನಿಶ್ಚಿತತೆಯಲ್ಲಿ ಪ್ರಮುಖ ಪಾತ್ರ ವಹಿಸುವ ಕಲ್ಲಿದ್ದಲು ಮತ್ತು ಗಣಿ ಖಾತೆಗಳಲ್ಲಿ ಬೃಹತ್‌ ಸುಧಾರಣೆಯನ್ನೂ ತರಲಾಗಿದೆ. ಕಲ್ಲಿದ್ದಲು ಮತ್ತು ಗಣಿ ಕ್ಷೇತ್ರಗಳಲ್ಲಿ ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ತರಲಾಗುತ್ತಿರುವ ಸುಧಾರಣೆಗಳು ‘ನ ಭೂತೋ ನ ಭವಿಷ್ಯತಿ’ ಎಂದರೆ ಉತ್ಪ್ರೇಕ್ಷೆಯಾಗಲಾರದು.

ಪ್ರಧಾನಿ ಮೋದಿ ನೇತೃತ್ವದ ಎರಡನೇ ಅವಧಿಯ ಮೊದಲ ವರ್ಷ ವಿವಿಧ ರಂಗಗಳಲ್ಲಿ ಹಂತಗಳಲ್ಲಿ ವಿಶ್ವದ ಗಮನ ಸೆಳೆದದ್ದು ಮಾತ್ರವಲ್ಲ, ಶಕ್ತಿಯುತವಾಗಿ ಹೊರಹೊಮ್ಮುತ್ತಿರುವ ರಾಷ್ಟ್ರದ ಭೂಮಿಕೆ ನಮಗೆಲ್ಲ ಹೆಮ್ಮೆಯ ವಿಷಯವಾಗಿದೆ. ಆತ್ಮ ನಿರ್ಭರ ಭಾರತ ನಿರ್ಮಾಣದತ್ತ ನಾವೆಲ್ಲರೂ ಸಾಗಬೇಕಿದೆ.

ಐತಿಹಾಸಿಕ ಪ್ರಮಾದ ಸರಿಪಡಿಸಲಾಯಿತು
ಒಂದು ದೇಶ ಒಂದು ಸಂವಿಧಾನ ಎಂಬ ಮಾತನ್ನು ಈಗ ಸಾಕಾರ ಗೊಳಿಸಲಾಗಿದೆ. ಜಮ್ಮು-ಕಾಶ್ಮೀರದಲ್ಲಿ ಸಂವಿಧಾನದ ವಿಧಿ 370 ಹಾಗೂ 35ಎ ಗಳು ವರ್ಷಗಳಿಂದ ನೀಡಿದ್ದು, ಕೇವಲ ಪ್ರತ್ಯೇಕತೆಯ ಕೂಗು, ಭಯೋತ್ಪಾದನೆ, ಸ್ವಜನ ಪಕ್ಷಪಾತ ಮತ್ತು ಅವ್ಯಾಹತ ಭ್ರಷ್ಟಾಚಾರವನ್ನಷ್ಟೇ. ಅಲ್ಲದೇ ಭಾರತದ ಸುರಕ್ಷತೆಗೂ ಸವಾಲಾಗಿತ್ತು.

ತಾತ್ಕಾಲಿಕ ಸ್ಥಿತ್ಯಂತರದ ವಿಶೇಷ ನಿಬಂಧನೆ ಎನ್ನುವ ಹೆಸರಿನಲ್ಲಿ ಇದು ಶಾಶ್ವತ ಸಮಸ್ಯೆಗೆ ಕಾರಣವಾಗಿತ್ತು! ಈ ಐತಿಹಾಸಿಕ ಪ್ರಮಾದವನ್ನು ಮೋದಿ ನೇತೃತ್ವದ ಸರ್ಕಾರ ದಿಟ್ಟವಾಗಿ ತೊಡೆದು ಹಾಕಿದೆ. 370ನೇ ವಿಧಿ ದಲಿತರ, ಮಹಿಳೆಯರ, ಪರಿಶಿಷ್ಟವರ್ಗಗಳ ವಿರೋಧಿಯಾಗಿತ್ತು. ಈ ವರ್ಗಗಳಿಗೆ ಜಮ್ಮು ಕಾಶ್ಮೀರದಲ್ಲಿ ಮೀಸಲಾತಿಗಳು ಮರೀಚಿಕೆಯಾಗಿದ್ದವು.

ಈಗ ಅಲ್ಲಿ ಮಹಿಳೆಯರಿಗೆ ಸಮಾನ ಹಕ್ಕುಗಳ ಸ್ಥಾಪನೆಯ ಗುರಿಯೂ ಸಾಕಾರವಾಗಿದೆ. ಭಾರತದ ಸಾರ್ವಭೌಮತೆಯ ಪಯಣದಲ್ಲಿ ಸಂವಿಧಾನದ 370 ಹಾಗೂ 35ಎ ವಿಧಿಗಳ ರದ್ದತಿ ಒಂದು ಚರಿತ್ರಾರ್ಹ ಮೈಲುಗಲ್ಲಾಗಿ ದಾಖಲೆಯಾಗಲಿದ್ದು, ಡಾ. ಬಿ.ಆರ್‌. ಅಂಬೇಡ್ಕರ್‌ರವರ ಆಸೆ ಈಡೇರಿದಂತಾಗಿದೆ.

ಅಸಹಾಯಕರಿಗೆ ಸಾಂತ್ವನ
ಪ್ರಧಾನಿ ಮೋದಿಯವರದ್ದು ನಿರ್ಣಾಯಕ ನೇತೃತ್ವ. ನೀತಿಗಳ ಪಾರ್ಶ್ವವಾಯುವಿಗೆ ಇಲ್ಲಿ ಅವಕಾಶವಿಲ್ಲ. ಸಮಸ್ಯೆಗಳು ಮತ್ತು ವಿಷಯಗಳ ಕುರಿತು ಸ್ಪಷ್ಟತೆಯಿರುತ್ತದೆ. ಯಾವಾಗ ನೇತೃತ್ವ ದೃಢ ಹಾಗೂ ಸ್ಪಷ್ಟವಾಗಿರುತ್ತದೊ ಅಲ್ಲಿ ಪರಿಣಾಮಕಾರಿಯಾದ ಕೆಲಸಗಳಾಗುತ್ತವೆ. ಪೌರತ್ವ ಕಾಯ್ದೆ ತಿದ್ದುಪಡಿಯಿಂದಾಗಿ ನೆರೆ ರಾಷ್ಟ್ರಗಳಲ್ಲಿ (ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶ) ಧಾರ್ಮಿಕ ಕಿರುಕುಳಕ್ಕೊಳಗಾದ ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳು, ಕ್ರೈಸ್ತರು, ಪಾರ್ಸಿಗಳು, ಸಿಖ್‌ರು, ಜೈನರು, ಬೌದ್ಧರು ಈಗ ಭಾರತದ ನಾಗರಿಕತ್ವ ಪಡೆದುಕೊಳ್ಳುವ ಅವಕಾಶ ಪಡೆಯುವಂತಾಗಿದೆ. ತನ್ಮೂಲಕ ಸರ್ಕಾರ ಹಲವಾರು ದಶಕಗಳಿಂದ ಶೋಷಣೆಗೊಳಗಾಗಿ ಅಸಹಾಯಕರಾಗಿದ್ದ ನಮ್ಮ ನೆಲದ ಮೂಲದವರೇ ಆಗಿರುವ ಜನರ ನೋವಿಗೆ ಕೊನೆ ಹಾಡಿದೆ. ಭಾರತದ ಚರಿತ್ರೆಯಲ್ಲಿ ಸ್ಮರಣಾರ್ಹವಾದ ಕ್ರಮವನ್ನು ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಜಾರಿಗೊಳಿಸಿದೆ.

ಆರೋಗ್ಯ ರಕ್ಷಣೆ, ಮೂಲಸೌಕರ್ಯ ಹೂಡಿಕೆಗೆ ಉತ್ತೇಜನ
ಜನಸಾಮಾನ್ಯರ ಆರೋಗ್ಯ ರಕ್ಷೆಯಾಗಿರುವ ಆಯುಷ್ಮಾನ್‌ ಭಾರತ್‌ ಯೋಜನೆ ಒಂದು ಕೋಟಿ ಫ‌ಲಾನುಭವಿಗಳಿಗೆ ನೆರವಾಗಿದೆ. ದ್ವಿತೀಯ ಮತ್ತು ತೃತೀಯ ಹಂತದ ನಗರಗಳ ಬಡವರಿಗೆ ಪ್ರಧಾನ ಮಂತ್ರಿ ಜನಾರೋಗ್ಯ ಯೋಜನೆ ಅಡಿ 20,000 ಆಸ್ಪತ್ರೆಗಳು ಆರೋಗ್ಯ ಕವಚ ನೀಡಲಿವೆ. ಇದಷ್ಟೇ ಅಲ್ಲದೇ…

– ದೇಶದ ಮೂಲಭೂತ ಸೌಕರ್ಯಗಳಿಗಾಗಿ 5 ವರ್ಷಗಳಲ್ಲಿ 100 ಲಕ್ಷ ಕೋಟಿ ರೂ ಹೂಡಿಕೆ, ರೈಲ್ವೇ ಮೂಲಭೂತ ಸೌಕರ್ಯಗಳಿಗಾಗಿ 50 ಲಕ್ಷ ಕೋಟಿ ರೂ. ಹೂಡಿಕೆಯ ಮೂಲಕ ಉತ್ತೇಜನ ನೀಡಲಾಗಿದೆ.

– ಆಡಳಿತದಲ್ಲಿನ ಜಡತ್ವ ಮತ್ತು ಭ್ರಷ್ಟಾಚಾರವನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಆದಾಯಕರ ಇಲಾಖೆಯ 12 ಉಚ್ಚ ಅಧಿಕಾರಿಗಳು ಕಡ್ಡಾಯ ನಿವೃತ್ತಿ ಪಡೆಯುವಂತಾಯಿತು ಮತ್ತು ಕೇಂದ್ರ ಅಬಕಾರಿ ಮತ್ತು ಸುಂಕ ಇಲಾಖೆಯ 15 ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಲಾಯಿತು.

– ಗ್ರಾಮೀಣ ರಸ್ತೆಗಳ ಉನ್ನತೀಕರಣ 1,25,000 ಕಿ.ಮಿ. ರಸ್ತೆಗಳ ಅಭಿವೃದ್ಧಿ ಮೂಲಕ ಗ್ರಾಮೀಣ ಸಂಪರ್ಕ ಜಾಲಕ್ಕೆ ಬಲ ತುಂಬಲಿದೆ.

– ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕಾಗಿ ಬಜೆಟ್‌ನಲ್ಲಿ 1.26,887 ಕೋಟಿ ರೂ ನಿಗದಿಗೊಳಿಸಿದೆ. ಮೊದಲ ಬಾರಿಗೆ ಪಶುಸಂಗೋಪನೆ ಮತ್ತು ಮೀನುಗಾರಿಕೆಗಾಗಿ ಪ್ರತ್ಯೇಕ ಸಚಿವಾಲಯ, ಮತ್ಸ್ಯಸಂಪದ ಯೋಜನೆಗೆ ಒತ್ತು. ವರ್ಷಗಳಿಂದ ನಿರೀಕ್ಷಿಸುತ್ತಿದ್ದ ಮಹಾದಾಯಿ ಐತೀರ್ಪು ಅಧಿಸೂಚನೆ ಹೊರಡಿಸಲಾಗಿದೆ.

– ಜನ ಸಾಮಾನ್ಯರ ವಿಮಾನಯಾನದ ಕನಸು ನನಸಾಗಿದೆ. ಉಡಾನ್‌ ಯೋಜನೆಯಡಿ ಕರ್ನಾಟಕದಲ್ಲಿನ ಹುಬ್ಬಳ್ಳಿ, ಮೈಸೂರು, ಬೆಳಗಾವಿ, ಮಂಗಳೂರು, ತೋರಣಗಲ್‌, ಕಲಬುರ್ಗಿ ವಿಮಾನ ನಿಲ್ದಾಣಗಳಿಂದ ದೇಶದ ವಿವಿಧ ಪ್ರಮುಖ ನಗರಗಳಿಗೆ ಸಂಪರ್ಕ ಪ್ರಾರಂಭವಾಗಿದೆ.

– ಬೆಂಗಳೂರು ಮಹಾನಗರದಲ್ಲಿ ಮತ್ತು ಹತ್ತಿರದ ಜಿಲ್ಲಾ ಕೇಂದ್ರಗಳಿಂದ ಬೆಂಗಳೂರಿಗೆ 18,600 ಕೋಟಿ ರೂ ಸಬರ್ಬನ್‌ ರೈಲು ಯೋಜನೆಯನ್ನು ಮುಂಗಡಪತ್ರದಲ್ಲಿ ಘೋಷಿಸಲಾಗಿದೆ. ಬೆಂಗಳೂರು ಮಹಾನಗರದ ಸಂಚಾರ ದಟ್ಟಣೆಯನ್ನು ನಿವಾರಿಸುವ ಬಹುದಿನಗಳ ಯೋಜನೆ ಸಾಕಾರವಾಗಲಿದೆ.

– ಬಹುವರ್ಷಗಳ ಬೇಡಿಕೆಯಾಗಿದ್ದ ಪರಿವಾರ, ತಳವಾರ ಮತ್ತು ಸಿದ್ದಿ ಸಮುದಾಯಗಳನ್ನು ಪರಿಶಿಷ್ಟ ವರ್ಗಕ್ಕೆ ಸೇರ್ಪಡೆಗೊಳಿಸಲಾಗಿದೆ. ಈ ಸಮುದಾಯಗಳಿಗೆ ಸೇರಿದ ಲಕ್ಷಾಂತರ ಜನರಿಗೆ ಇದು ವರದಾನವಾಗಲಿದೆ.


– ಪ್ರಹ್ಲಾದ್‌ ಜೋಶಿ, ಕೇಂದ್ರ ಸಚಿವ

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kejriwal-2

Delhi; ಸ್ತ್ರೀಯರಿಗೆ ಸಹಾಯಧನ: ಮನೆಯಲ್ಲೇ ನೋಂದಣಿ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

1-kuu

ಕಾರ್ಗಿಲ್‌ ದಾಳಿ ಮಾಹಿತಿ ಕೊಟ್ಟ ಕುರಿಗಾಹಿ ಸಾವು: ಸೇನೆ ನಮನ

Surjewala

Pegasus spyware ಬಗ್ಗೆ ಸುಪ್ರೀಂಕೋರ್ಟ್‌ ತನಿಖೆ ನಡೆಸಲಿ: ಸುರ್ಜೇವಾಲಾ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.