ಮೋದಿ ಬಂದ್ರೂ ಹೋದ್ರೂ ದೇಶ ಶಾಶ್ವತ
Team Udayavani, Nov 26, 2018, 9:06 AM IST
ಹೊಸದಿಲ್ಲಿ: “”ಮನ್ ಕೀ ಬಾತ್’ ಎಂಬುದು ರಾಜಕೀಯೇತರವಾದುದು. ಅದು ನನ್ನ ಅಥವಾ ಸರಕಾರದ ಸಾಧನೆಗಳನ್ನು ಹೇಳಿಕೊಳ್ಳುವ ಕಾರ್ಯಕ್ರಮ ಅಲ್ಲ. ಅದು ಇಡೀ ದೇಶದ ಕಾರ್ಯಕ್ರಮ. ಜನದನಿಯನ್ನೇ ಜನತೆ ಮುಂದಿಟ್ಟು ದೇಶವನ್ನು ಒಗ್ಗೂಡಿಸಲು ಮಾಡಿಕೊಂಡಿರುವ ಪ್ರತಿ ತಿಂಗಳ ರೇಡಿಯೋ ಕಾರ್ಯಕ್ರಮ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪ್ರಧಾನಿ ಮನ್ ಕಿ ಬಾತ್ ಭಾನುವಾರ 50ನೇ ಕಂತು ಪೂರೈಸಿದ ಹಿನ್ನೆಲೆಯಲ್ಲಿ, ತಾವು ಮನದ ಮಾತನ್ನು ರಾಜಕೀಯ ವಿಚಾರಗಳನ್ನು ಪ್ರಸ್ತಾಪಿಸಲು ಏಕೆ ಬಳಸಿಕೊಂಡಿಲ್ಲ ಎಂಬುದನ್ನು ಮೋದಿ ಈ ರೀತಿಯಾಗಿ ವಿವರಿಸಿದ್ದಾರೆ. ಅಲ್ಲದೆ, ತಮ್ಮ ಕಾರ್ಯಕ್ರಮದ ಉದ್ದೇಶದ ಬಗ್ಗೆಯೂ ಪುನರುಚ್ಚರಿಸಿದ್ದಾರೆ. “”ಸರಕಾರದ ಸಾಧನೆಗಳನ್ನು ಹೇಳಿಕೊಳ್ಳಲೆಂದು ಮನ್ ಕೀ ಬಾತ್ ಕಾರ್ಯಕ್ರಮ ಮಾಡುತ್ತಿಲ್ಲ. ವೈಯಕ್ತಿಕ ಅಥವಾ ರಾಜಕೀಯ ದಾಳವಾಗಿಯೂ ಈ ವೇದಿಕೆಯನ್ನು ಬಳಸಿಕೊಳ್ಳುತ್ತಿಲ್ಲ. ಆ ಉದ್ದೇಶವೂ ಇಲ್ಲ. ಮೋದಿ ಇಂದು ಬರುತ್ತಾರೆ, ನಾಳೆ ಹೋಗುತ್ತಾರೆ. ಆದರೆ ಈ ದೇಶ, ಅದರ ಸಂಸ್ಕೃತಿ, ಏಕತೆ ಶಾಶ್ವತವಾಗಿ ಇರುತ್ತದೆ” ಎಂದು ಹೇಳಿರುವ ಅವರು, ಜನರ ಕಳಕಳಿಗೆ ಸ್ಪಂದಿಸುವ ವೇದಿಕೆ ಇದಾಗಿದೆ ಎಂದಿದ್ದಾರೆ.
ಇದೇ ವೇಳೆ, ಮನೆಗಳಲ್ಲಿ ಹಿರಿಯರು ಮತ್ತು ಯುವಕರ ನಡುವೆ ಮುಕ್ತ ಮಾತುಕತೆ ನಡೆಯಬೇಕು. ನಿರೀಕ್ಷೆಯ ಬದಲು ಸ್ವೀಕಾರ, ನಿರ್ಲಕ್ಷ್ಯದ ಬದಲು ಸಂವಾದ ನಡೆಯಬೇಕು. ಆಗ ಕುಟುಂಬವೂ ಚೆನ್ನಾಗಿರುತ್ತದೆ. ನಾವು ಇನ್ನೊಬ್ಬರ ಹಕ್ಕುಗಳನ್ನು ಗೌರವಿಸಬೇಕು. ಆಗ ಸಹಜವಾಗಿ ನಮ್ಮ ಹಕ್ಕುಗಳ ಗೌರವೂ ಉಳಿದುಕೊಳ್ಳುತ್ತದೆ ಎಂದೂ ಹೇಳುವ ಮೂಲಕ ಯುವಜನತೆಗೆ ಮೋದಿ ಕಿವಿಮಾತು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ
Alcohol: ಬಿಯರ್ ದರ ಏರಿಕೆ ಚರ್ಚೆ ಹಂತದಲ್ಲಿದೆ: ಅಬಕಾರಿ ಸಚಿವ ತಿಮ್ಮಾಪುರ ಸ್ಪಷ್ಟನೆ
Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು
Bantwal: ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಪ್ರಯಾಣ ದರ ಏರಿಕೆ
Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.