ಮೋದಿ ನೂತನ ಸಚಿವ ಸಂಪುಟದಲ್ಲಿ ಜೆಡಿಯು ಇಲ್ಲ: ನಿತೀಶ್ ಕುಮಾರ್
Team Udayavani, May 30, 2019, 7:20 PM IST
ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರ ನೂತನ ಸಚಿವ ಸಂಪುಟದಲ್ಲಿ ತನ್ನ ಜೆಡಿಯು ಪಕ್ಷ ಭಾಗಿಯಾಗಿಲ್ಲ ಎಂಬುದನ್ನು ಬಿಹಾರ ಮುಖ್ಯಮಂತ್ರಿ, ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ದೃಢಪಡಿಸಿದ್ದಾರೆ.
“ಹಾಗಿದ್ದರೂ ನಮ್ಮ ಪಾಲಿಗೆ ಎನ್‌ಡಿಎ ಮೈತ್ರಿಕೂಟದೊಳಗಿನ ಯಾವುದೇ ಸ್ನೇಹ ಬಾಂಧವ್ಯ ನಷ್ಟವಾಗಿಲ್ಲ; ಅಂತೆಯೇ ಬಿಜೆಪಿಯೊಂದಿಗಿನ ಪಕ್ಷದ ಬಾಂಧವ್ಯ ಸದೃಢವಾಗಿಯೇ ಉಳಿದಿದೆ’ ಎಂದು ನಿತೀಶ್ ಹೇಳಿದರು.
“ನೂತನ ಸಚಿವ ಸಂಪುಟದಲ್ಲಿ ನಮಗೆ ಕೇವಲ ಹೆಸರಿಗಷ್ಟೇ ಪ್ರತಿನಿಧಿತ್ವವನ್ನು ಕೊಡಲಾಗಿದೆ; ನಾವದನ್ನು ಸ್ವೀಕರಿಸಲು ಸಿದ್ಧರಿಲ್ಲ; ಹಾಗಿದ್ದರೂ ನಾವು ಎನ್‌ಡಿಎ ಮೈತ್ರಿಕೂಟದಲ್ಲಿ ಯಥಾವತ್ ಉಳಿದುಕೊಂಡಿದ್ದೇವೆ; ನಮ್ಮಲ್ಲಿ ಯಾವುದೇ ಅಸಮಾದಾನ ಇಲ್ಲ’ ಎಂದು ನಿತೀಶ್ ಹೇಳಿದರು.
353 ಸದಸ್ಯ ಬಲದ ಎನ್‌ಡಿಎ ಮೈತ್ರಿಕೂಟದಲ್ಲಿ ಬಿಜೆಪಿ 303 ಸ್ಥಾನಗಳನ್ನು ಹೊಂದಿದೆಯಾದರೆ ನಿತೀಶ್ ಅವರ ಜೆಡಿಯು 16 ಸ್ಥಾನಗಳನ್ನು ಹೊಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics; ಮತಕ್ಕಾಗಿ ಮುಸ್ಲಿಮರನ್ನು ಒಡೆವ ಕೆಲಸ ಕಾಂಗ್ರೆಸ್ ಮಾಡುತ್ತಿದೆ: ಬಿಜೆಪಿ
Maha Election; ಚು.ಆಯೋಗದಿಂದ ಉದ್ಧವ್ ಠಾಕ್ರೆ ಬ್ಯಾಗ್ ಪರಿಶೀಲನೆ, ವಿವಾದ
Manipura: ಇಬ್ಬರು ಶವ ಪತ್ತೆ, ಮಕ್ಕಳು ಸೇರಿ 6 ಮಂದೆ ಕಾಣೆ
ದಾವೂದ್, ನಟ ಸಲ್ಮಾನ್ ಸಂಪರ್ಕ ಇದ್ದಿದ್ದಕ್ಕೆ ಸಿದ್ಧಿಕಿ ಹತ್ಯೆ: ಶೂಟರ್
Ranchi: ವಕ್ಫ್ ಮಂಡಳಿಯು ಕರ್ನಾಟಕದಲ್ಲಿ ದೇಗುಲ, ರೈತರ ಭೂಮಿಯ ಕಸಿದಿದೆ: ಅಮಿತ್ ಶಾ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.