ಪಾಸ್‌ಪೋರ್ಟ್ ರದ್ದಾದರೂ ನೀರವ್ ಮೋದಿ ವಿದೇಶ ಪ್ರಯಾಣ
Team Udayavani, Jun 19, 2018, 10:47 AM IST
ಹೊಸದಿಲ್ಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ 13 ಸಾವಿರ ಕೋಟಿ ರೂ. ಸಾಲದ ಸುಸ್ತಿದಾರನಾಗಿರುವ ಉದ್ಯಮಿ ನೀರವ್ ಮೋದಿಯ ಪಾಸ್‌ಪೋರ್ಟನ್ನು ರದ್ದುಗೊಸಿದ ನಂತರವೂ ಹಲವು ದೇಶಗಳಿಗೆ ಪ್ರಯಾಣ ಬೆಳೆಸಿದ್ದಾರೆ ಎಂದು ಸಿಬಿಐ ಹೇಳಿದೆ.
ಫೆಬ್ರವರಿ 15ರಂದೇ ಪಾಸ್‌ಪೋರ್ಟ್ ರದ್ದು ಗೊಳಿಸುವ ನೋಟಿಸ್ ಅನ್ನು ಸಿಬಿಐ ವಿನಂತಿಯ ಮೇರೆಗೆ ಇಂಟರ್‌ಪೋಲ್ ನೀಡಿತ್ತು. ಅದು ಇಂಟರ್‌ಪೋಲ್‌ನ ಡೇಟಾದಲ್ಲಿ ಫೆ.24ರಿಂದಲೇ ದಾಖಲಾಗಿದೆ. ಇದು ಎಲ್ಲ ಸದಸ್ಯ ರಾಷ್ಟ್ರಗಳಿಗೂ ಲಭ್ಯವಿರುತ್ತದೆ. ಈಗಾಗಲೇ ಸಿಬಿಐ ಆರು ದೇಶಗಳನ್ನು ಸಂಪರ್ಕಿಸಿದ್ದು, ನೀರವ್ ಪ್ರಯಾಣದ ವಿವರಗಳನ್ನು ನೀಡುವಂತೆ ಸೂಚಿಸಿದೆ. ಅಲ್ಲದೆ ಏಪ್ರಿಲ್ 25, ಮೇ 22, ಮೇ 24 ಹಾಗೂ ಮೇ 28 ರಂದೂ ಈ ದೇಶಗಳಿಗೆ ಸೂಚನೆ ನೀಡಲಾಗಿತ್ತು ಎಂದು ಸಿಬಿಐ ಹೇಳಿದೆ.
ಈ ಮಧ್ಯೆ ನೀರವ್ ಪ್ರಕರಣದ ತನಿಖೆ ನಡೆಸುತ್ತಿರುವ ಜಂಟಿ ನಿರ್ದೇಶಕ ರಾಜೀವ್ ಸಿಂಗ್ ಇಮೇಲ್ ಖಾತೆಯನ್ನು ಹ್ಯಾಕ್ ಮಾಡಿರಬಹುದಾದ ಅನುಮಾನ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಅವರ ಇ-ಮೇಲ್ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ. ಮೇ 16 ರಂದೇ ಅನುಮಾನಾಸ್ಪದ ಚಟುವಟಿಕೆಯನ್ನು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಸಿಇಆರ್‌ಟಿ ವಿಭಾಗ ಕಂಡುಕೊಂಡಿತ್ತು. ಅವರ ಖಾತೆ ಶಿಮ್ಲಾದಲ್ಲೂ ಬಳಕೆಯಾಗುತ್ತಿತ್ತು.
ವಿಜಯ ಮಲ್ಯ ವಿರುದ್ಧ ಆರೋಪ ಪಟ್ಟಿ
ಉದ್ಯಮಿ ವಿಜಯ ಮಲ್ಯ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ಹೊಸತಾಗಿ ಚಾರ್ಜ್‌ಶೀಟ್ ಸಲ್ಲಿಸಿದೆ. ಜತೆಗೆ ಅವರನ್ನು ದೇಶಭ್ರಷ್ಟ ಎಂದು ಘೋಷಿಸಲೂ ಮುಂದಾ ಗಿದೆ. ಹೊಸ ಆರೋಪಪಟ್ಟಿಯಲ್ಲಿ ವಿಜಯ ಮಲ್ಯ, ಕಿಂಗ್‌ಫಿಶರ್ ಏರ್‌ಲೈನ್ಸ್, ಯುನೈಟೆಡ್ ಬ್ರೂವರಿಸ್ ಹೋಲ್ಡಿಂಗ್ಸ್ ಲಿಮಿಟೆಡ್ ಸಂಸ್ಥೆಗಳನ್ನು ಪ್ರಮುಖವಾಗಿ ಹೆಸರಿಸಲಾಗಿದೆ. ಪರಾರಿ ಯಾಗಿರುವ ಆರ್ಥಿಕ ಅಪರಾಧಿಗಳ ವಿರುದ್ಧ ಕ್ರಮ ಸುಗ್ರೀವಾಜ್ಞೆಯ ಅನ್ವಯ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.