Mann Ki Baat: ಡಿಜಿಟಲ್ ಅರೆಸ್ಟ್ ವಿರುದ್ಧ ಪ್ರಧಾನಿ ಮೋದಿ ಎಚ್ಚರಿಕೆ ಕಹಳೆ!
ವಂಚನೆಯಿಂದ ಪಾರಾಗಲು ಮೋದಿ 3 ಮಂತ್ರ ; ಪೊಲೀಸರಿಗೆ ಮಾಹಿತಿ ನೀಡಿ: ಮೋದಿ
Team Udayavani, Oct 28, 2024, 1:19 AM IST
ಹೊಸದಿಲ್ಲಿ: ದೇಶದಲ್ಲಿ ಹೆಚ್ಚುತ್ತಿರುವ “ಡಿಜಿಟಲ್ ಅರೆಸ್ಟ್’ನಂಥ ಸೈಬರ್ ಅಪರಾಧ ಗಳನ್ನು ಮೆಟ್ಟಿ ನಿಲ್ಲಲು ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರೇ ದೇಶವಾಸಿಗಳಿಗೆ ಧೈರ್ಯ ತುಂಬಿದ್ದಾರೆ. ಇಂಥ ಪ್ರಕರಣಗಳಿಗೆಲ್ಲ ಕಡಿವಾಣ ಹಾಕಲು “ಶಾಂತಚಿತ್ತರಾಗಿ, ಯೋಚಿಸಿ, ಅನಂತರ ಕ್ರಮ ಕೈಗೊಳ್ಳಿ’ ಎಂಬ ಮೂರು ಮಂತ್ರ ಗಳನ್ನು ಅಳವಡಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.
ತಮ್ಮ ಮಾಸಿಕ ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮ ದಲ್ಲಿ ಪ್ರಧಾನಿ ಈ ಡಿಜಿಟಲ್ ಅರೆಸ್ಟ್ ವಿಚಾರವನ್ನು ಪ್ರಸ್ತಾವವಿಸಿದ್ದು, “ಈ ಸಮಸ್ಯೆ ಗಳನ್ನು ಪರಿಹರಿಸಲು ರಾಜ್ಯಗಳ ಜತೆಗೆ ತನಿಖಾ ಸಂಸ್ಥೆಗಳು ಸತತ ಪ್ರಯತ್ನ ಪಡುತ್ತಿವೆ. ಆದಾಗ್ಯೂ, ಈ ಸಮಸ್ಯೆಯಿಂದ ಪಾರಾಗಲು ಜಾಗೃತಿ ಬಹಳ ಮುಖ್ಯವಾಗುತ್ತದೆ’ ಎಂದಿದ್ದಾರೆ.
ಜತೆಗೆ ಈ ಸೈಬರ್ ಅಪರಾಧಿಗಳು ತಮ್ಮನ್ನು ತಾವು ಪೊಲೀಸ್, ಸಿಬಿಐ, ಎನ್‌ಸಿಬಿ ಅಧಿಕಾರಿ ಕೆಲ ವೊಂದು ಬಾರಿ ಆರ್‌ಬಿಐ ಎಂದೂ ಹೇಳಿ ಕೊಳ್ಳುತ್ತಾರೆ. ಅದನ್ನು ನಿರೂಪಿಸುವಂಥ ಕೆಲವು ನಕಲಿ ದಾಖಲೆಗಳನ್ನು ತೋರಿಸಿ ಬಹಳಷ್ಟು ಸ್ಪಷ್ಟತೆ ಯಿಂದಲೇ ನಿಮ್ಮನ್ನು ನಂಬಿಸಲು ಮುಂದಾಗು ತ್ತಾರೆ. ಮೊದಲಿಗೆ ವೈಯಕ್ತಿಕ ದತ್ತಾಂಶ ಕಸಿಯುವುದು ಅನಂತರ ಭಯ ಸೃಷ್ಟಿಸುವುದು ಅವರ ಕಾರ್ಯತಂತ್ರ. ಬಳಿಕ ನಿಮ್ಮನ್ನು ಯೋಚಿಸುವುದಕ್ಕೂ ಬಿಡದೇ ಒತ್ತಡ ಹೇರಿ ಈಗಲೇ ಉತ್ತರಿಸಿ ಇಲ್ಲದಿದ್ದರೆ ಅರೆಸ್ಟ್ ಆಗುತ್ತೀರಿ ಎಂದು ಬೆದರಿಸುತ್ತಾರೆ. ಇಂಥ ಬೆದರಿಕೆ ಗಳಿಂದ ದೇಶದ ಎಷ್ಟೋ ಮಂದಿ ತಾವು ಕಷ್ಟ ಪಟ್ಟು ಕೂಡಿಟ್ಟ ಹಣವನ್ನು ಕಳೆದುಕೊಂಡಿ ದ್ದಾರೆ. ಇಂಥದಕ್ಕೆ ನೀವು ಬಲಿಯಾಗದಿರಿ ಎಂದಿದ್ದಾರೆ.
ಅಲ್ಲದೇ, ನಿಮಗೆ ಇಂಥ ಬೆದರಿಕೆ ಕರೆ ಬಂದಾಗ ಒಂದನ್ನು ಅರ್ಥೈಸಿಕೊಳ್ಳಿ. ಯಾವುದೇ ತನಿಖಾ ಸಂಸ್ಥೆಯೂ ನಿಮ್ಮನ್ನು ಕರೆ ಅಥವಾ ವೀಡಿಯೋ ಕರೆಗಳ ಮೂಲಕ ವಿಚಾರಣೆ ನಡೆಸುವುದಿಲ್ಲ, ಯಾವುದೇ ಬೇಡಿಕೆಯನ್ನೂ ಇಡುವುದಿಲ್ಲ. ಇಂಥ ಖೆಡ್ಡಾದಲ್ಲಿ ಬೀಳದಿರಲು ಶಾಂತಿಚಿತ್ತರಾಗಿ, ಯೋಚಿಸಿ, ಅನಂತರ ಕ್ರಮ ಕೈಗೊಳ್ಳಿ. ಈ ಮೂರು ಮಂತ್ರಗಳನ್ನು ಮರೆಯದಿರಿ. ಅಪರಾಧಗಳ ಕುರಿತು 1930 ನ್ಯಾಶನಲ್ ಸೈಬರ್ ಹೆಲ್ಪ್ಲೈನ್‌ಗೆ ದೂರು ನೀಡಿ ಎಂದು ಸಲಹೆ ನೀಡಿದ್ದಾರೆ.
ಪಟೇಲ್ ಮತ್ತು ಬಿರ್ಸಾ ಜಯಂತಿಗೆ ನಿರ್ಧಾರ
ಮಾಜಿ ಉಪ ಪ್ರಧಾನಿ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ 150ನೇ ಜಯಂತ್ಯುತ್ಸವ ಮತ್ತು ಬುಡಕಟ್ಟು ಹೋರಾಟ ಗಾರ ಭಗವಾನ್ ಬಿರ್ಸಾ ಮುಂಡಾ ಅವರ ಜಯಂತ್ಯು ತ್ಸ ವವನ್ನು ಆಚರಿಸಲು ದೇಶ ಸಜ್ಜುಗೊಂಡಿದೆ. ಪಟೇಲ್ ಜಯಂತ್ಯುತ್ಸವ ಅ.31ರಿಂದ ಹಾಗೂ ಬಿರ್ಸಾ ಜಯಂತ್ಯುತ್ಸವ ನ.15ರಿಂದ ಆರಂಭಗೊಳ್ಳಲಿದೆ. ವಿಶಿಷ್ಟ ಸವಾಲು ಗಳ ನ್ನೆದುರಿಸಿದ ಈ ಇಬ್ಬರೂ ನಾಯಕರ ಗುರಿ ಮಾತ್ರ ದೇಶದ ಒಗ್ಗಟ್ಟಾಗಿತ್ತು. ಅವರನ್ನು ಈಗ ನಾವು ಸಂಭ್ರಮಿಸೋಣ ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ.
ಆ್ಯನಿಮೇಶನ್ ಜಗತ್ತಿನಲ್ಲಿ
ಭಾರತ ಅಸಾಧಾರಣ ಪ್ರಗತಿ
ಆ್ಯನಿಮೇಶನ್ ಜಗತ್ತಿನಲ್ಲಿ ಮೇಕ್ ಇನ್ ಇಂಡಿಯಾ, ಮೇಡ್ ಬೈ ಇಂಡಿಯಾ ಪರಿಕಲ್ಪನೆಗಳು ಅಸಾಧಾರಣ ಪ್ರಗತಿಯನ್ನು ಸಾಧಿಸಿವೆ. ಭಾರತದ ಕಾರ್ಟೂನ್ ಪರಿಕಲ್ಪನೆಗಳಾದ ಛೋಟಾ ಭೀಮ್, ಕೃಷ್ಣ, ಮೋಟು-ಪತ್ಲು ಅತೀಹೆಚ್ಚು ಪ್ರಸಿದ್ಧಿ ಪಡೆದಿದ್ದು, ಭಾರತದ ಕಂಟೆಂಟ್ ಮತ್ತು ಸೃಜನ ಶೀಲತೆ ಜಗತ್ತಿನಾದ್ಯಂತ ಮೆಚ್ಚುಗೆ ಗಳಿಸುತ್ತಿದೆ. ಭಾರತದ ಗೇಮ್‌ಗಳಿಗೂ ಬೇಡಿಕೆ ಹೆಚ್ಚಾಗುತ್ತಿದೆ ಎಂದಿದ್ದಾರೆ. ಇದೇ ವೇಳೆ ಆತ್ಮನಿರ್ಭರ ಭಾರತದ ಪ್ರಯತ್ನಗಳು ಫಲ ಕೊಡುತ್ತಿದ್ದು, 85 ದೇಶಗಳಿಗೆ ಭಾರತ ಈಗ ರಕ್ಷಣ ಸಾಮಗ್ರಿಗಳನ್ನು ರಫ್ತು ಮಾಡುತ್ತಿದೆ ಎಂದೂ ಮೋದಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ
Maharashtra; ಫಡ್ನವೀಸ್ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.